Manipal: ಹುಲ್ಲು ತರಲು ತೆರಳಿದ್ದ ಮಹಿಳೆಯ ಮೃತದೇಹ ಪತ್ತೆ
Team Udayavani, Nov 30, 2024, 6:50 AM IST
ಮಣಿಪಾಲ: ಜಾನುವಾರು ಗಳಿಗೆ ಮೇವು ತರಲೆಂದು ಮನೆಯ ಪಕ್ಕದ ಗುಡ್ಡಕ್ಕೆ ತೆರಳಿದ್ದ ಮಹಿಳೆಯೊಬ್ಬರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ.
ಸರಳೇಬೆಟ್ಟು ವಾರ್ಡ್‌ನ ನೆಹರೂ ನಗರದ ನಿವಾಸಿ ಪುಷ್ಪಾ ನಾಯ್ಕ್ (66) ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಮಹಿಳೆ.
ಅವರು ದನಕರುಗಳಿಗೆ ಹುಲ್ಲು ತರಲೆಂದು ಮನೆಯ ಪಕ್ಕದ ಗುಡ್ಡದ ಕಡೆಗೆ ನ. 28ರಂದು ಸಂಜೆ 6 ಗಂಟೆಯ ಆಸುಪಾಸಿಗೆ ತೆರಳಿದ್ದರು. ಬಳಿಕ ಅವರು ವಾಪಸ್ ಮನೆಗೆ ಬಂದಿರಲಿಲ್ಲ.ಆತಂಕಗೊಂಡ ಮನೆಯವರು ಹುಡುಕಾಟ ನಡೆಸಿದ್ದು, ರಾತ್ರಿ ತನಕವೂ ಮಹಿಳೆಯ ಸುಳಿವು ಸಿಗಲಿಲ್ಲ. ಮರುದಿನ ಮುಂಜಾನೆ ಮಹಿಳೆಯ ಮೃತದೇಹ ಮನೆಗಿಂತ 200 ಮೀ. ದೂರದ ಗುಡ್ಡೆಯಲ್ಲಿ ಪತ್ತೆಯಾಗಿದೆ.
ಸಾಮಾನ್ಯ ಗಾಯಗಳಾಗಿದ್ದವು
ಮೃತದೇಹ ಪತ್ತೆಯಾದ ವೇಳೆ ಕುತ್ತಿಗೆಯ ಭಾಗದಲ್ಲಿ ಸಾಮಾನ್ಯ ಗಾಯಗಳಾಗಿರುವುದು ಕಂಡು ಬಂದಿದೆ. ಕೈ ಮೇಲೆ ಗಾಯ ಗಳಾಗಿದ್ದವು. ಕುತ್ತಿಗೆ ಭಾಗವನ್ನು ಇರುವೆ ಮುತ್ತಿಕೊಂಡಿತ್ತು.
ಸಾವಿಗೆ ಕಾರಣ ನಿಗೂಢ!
ಮಣಿಪಾಲ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕವಷ್ಟೆ ಮಹಿಳೆಯ ಸಾವಿನ ಬಗ್ಗೆ ಇರುವ ಅನುಮಾನ ಸ್ಪಷ್ಟಗೊಳ್ಳಲಿದೆ.
ಚಿರತೆ ಹಾವಳಿ ಹೆಚ್ಚಿರುವ ಪ್ರದೇಶ
ಮಹಿಳೆಯ ಮೃತದೇಹ ಕಂಡು ಬಂದ ಭಾಗದಲ್ಲಿ ಚಿರತೆ ಹಾವಳಿ ಜಾಸ್ತಿ ಇದ್ದು. ಆರಂಭದಲ್ಲಿ ಚಿರತೆ ಅಥವಾ ಯಾವುದಾದರೂ ಕಾಡು ಪ್ರಾಣಿ ದಾಳಿ ನಡೆಸಿರಬಹುದೆಂದು ಎನ್ನುವ ಶಂಕೆ ವ್ಯಕ್ತವಾಗಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.
ಮಹಿಳೆಯ ಪುತ್ರ ಹೇಳಿದ್ದೇನು?
ತಾಯಿ ಆರೋಗ್ಯದಿಂದಿದ್ದರು. ಮರೆವು ಸಮಸ್ಯೆ ಅವರಿಗಿತ್ತು. ಅದು ಬಿಟ್ಟರೆ ಬೇರೇನೂ ಸಮಸ್ಯೆ ಇರಲಿಲ್ಲ. ಎಂದಿನಂತೆ ಹುಲ್ಲು ತರಲೆಂದು ತೋಟದಂಚಿನ ಗುಡ್ಡಕ್ಕೆ ಗುರುವಾರ ತೆರಳಿದ್ದರು. ಅವರ ಮೃತದೇಹ ಮರುದಿನ ಬೆಳಗ್ಗೆ ಪತ್ತೆಯಾಗಿದೆ. ಅವರನ್ನು ಪರೀಕ್ಷಿಸಿದ ವೈದ್ಯರು ಗಾಯವಾದ ಸ್ಥಳದಲ್ಲಿ ಉಗುರಿನಿಂದ ಗಾಯಗೊಂಡ ಬಗ್ಗೆ ಯಾವುದೇ ಗುರುತು ಇಲ್ಲ ಎಂದು ಪ್ರಾಥಮಿಕ ಪರೀಕ್ಷೆಯಲ್ಲಿ ನಮಗೆ ಹೇಳಿದ್ದಾರೆ. ಸಾವಿಗೆ ಕಾರಣ ಏನೆಂದು ನಮಗೆ ಇನ್ನೂ ತಿಳಿದಿಲ್ಲ. ಬಿದ್ದು ಗಾಯಗೊಂಡಿರುವ ಸಾಧ್ಯತೆಯೂ ಇದೆ. ಇದರಿಂದ ಗಾಯಗಳಾಗಿರಬಹುದು ಎಂದು ಮೃತ ಮಹಿಳೆಯ ಪುತ್ರ ಗಣೇಶ್ ನಾಯ್ಕ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.