ಮಣಿಪಾಲ ವಿ.ವಿ.: ಇನ್ನು 125 ಅಡಿ ಎತ್ತರದಲ್ಲಿ ಹಾರಲಿದೆ ತಿರಂಗಾ
Team Udayavani, Jan 26, 2018, 10:30 AM IST
ಮಣಿಪಾಲ: ರಾಷ್ಟ್ರಭಕ್ತಿಯನ್ನು ವೃದ್ಧಿಸಿ ದೇಶಾಭಿಮಾನವನ್ನು ಉತ್ತೇಜಿಸುವ ವಿಶೇಷ ಉಪಕ್ರಮವಾಗಿ ಮಣಿಪಾಲ ವಿಶ್ವವಿದ್ಯಾಲಯದ ಕಟ್ಟಡದ ಮುಂದೆ 125 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ತ್ರಿವರ್ಣ ಧ್ವಜ ಇನ್ನು ಶಾಶ್ವತವಾಗಿ ಹಾರಾಡಲಿದೆ.
ಮಣಿಪಾಲವು ಅಂತಾರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಕೇಂದ್ರವಾಗಿದೆ. ಸುಮಾರು 134 ರಾಷ್ಟ್ರಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದ ಅತಿ ಗಣ್ಯ ವ್ಯಕ್ತಿ ಗಳು ಮಣಿಪಾಲಕ್ಕೆ ನಿರಂತರ ಭೇಟಿ ನೀಡುತ್ತಲಿರುತ್ತಾರೆ. ಇವೆಲ್ಲವನ್ನು ಪರಿಗಣಿಸಿ ಭಾರತದ ಗರಿಮೆಯನ್ನು ಸಾರಲು ಈ ಉಪಕ್ರಮವನ್ನು ಆರಂಭಿಸಲಾಗಿದೆ ಎಂದು ಮಣಿಪಾಲ ವಿ.ವಿ. ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಣಿಪಾಲ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಜ. 26ರಂದು ಪ್ರಥಮ ಧ್ವಜಾರೋಹಣ ಮಾಡುವ ಮೂಲಕ ಇದನ್ನು ದೇಶಕ್ಕೆ ಅರ್ಪಣೆ ಮಾಡಲಿದ್ದಾರೆ. ಧ್ವಜ ಸ್ತಂಭ 650 ಮಿ.ಮೀ. ವ್ಯಾಸ, 125 ಅಡಿ ಎತ್ತರ ದ್ದಾಗಿದ್ದು 1 ಮೀ. ಉದ್ದದ 16 ಬೋಲ್ಟ್‌ಗಳ ಮೇಲೆ ಸ್ಥಾಪಿಸಲಾಗಿದೆ. ಸ್ತಂಭದ ತುದಿಯಲ್ಲಿ ರಾಷ್ಟ್ರಲಾಂಛನವಿದೆ. ಗುಡುಗು ಮಿಂಚುಗಳಿಂದ ಹಾನಿಯಾಗದಂತೆ ಮಿಂಚು ನಿರೋಧಕ ಅಳವಡಿಸಲಾಗಿದೆ. ಬೆಳಕಿಗಾಗಿ 400 ವ್ಯಾಟ್‌ನ ನಾಲ್ಕು ಫ್ಲಡ್ ಲೈಟ್‌ಗಳಿವೆ. ಧ್ವಜವು 30 ಅಡಿ ಉದ್ದ ಹಾಗೂ 20 ಅಡಿ ಅಗಲವಾಗಿದ್ದು, ಧ್ವಜಾರೋಹಣ ಮತ್ತು ಅವರೋಹಣ ಮಾಡಲು 2 ಎಚ್‌ಪಿ ಸಾಮರ್ಥ್ಯದ ಮೋಟಾರ್ ಅಳವಡಿಸಲಾಗಿದೆ. ಧ್ವಜಾರೋಹಣವಾಗಲು ಗರಿಷ್ಠ 5 ನಿಮಿಷಗಳು ಬೇಕಾಗುತ್ತವೆ.
ದೇಶದ ಅಟ್ಟಾರಿ ಗಡಿಯಲ್ಲಿ 360, ಕೊಲ್ಹಾಪುರದಲ್ಲಿ 303, ರಾಂಚಿಯಲ್ಲಿ 293, ಹೈದರಾಬಾದ್‌ನಲ್ಲಿ 291, ರಾಯ್‌ಪುರದಲ್ಲಿ 269, ಫರೀದಾಬಾದ್‌ನಲ್ಲಿ 250, ಪುಣೆಯಲ್ಲಿ 237, ಭೋಪಾಲದಲ್ಲಿ 235, ನವಿಮುಂಬಯಿಯಲ್ಲಿ 222, ಕಟಕ್‌ನಲ್ಲಿ 215, ಹೊಸದಿಲ್ಲಿ ಹಾಗೂ ಲಕೌ°ಗಳಲ್ಲಿ 207ಅಡಿ ಎತ್ತರದ ಸ್ತಂಭದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.