ಮಣಿಪಾಲದ Heritage Village ನಿರ್ಮಾತೃ ವಿಜಯನಾಥ ಶೆಣೈ ವಿಧಿವಶ
Team Udayavani, Mar 9, 2017, 3:02 PM IST
ಉಡುಪಿ: ಮಣಿಪಾಲದ ಹಸ್ತ ಶಿಲ್ಪ ಹಾಗೂ ಸಂಸ್ಕೃತಿ ಗ್ರಾಮದ ನಿರ್ಮಾತೃ ಯು.ವಿಜಯ್ನಾಥ ಶೆಣೈ ಅವರು ವಾರ್ಧಕ್ಯದಿಂದ ಗುರುವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 83 ವರ್ಷ ಪ್ರಾಯವಾಗಿತ್ತು. ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ಶೆಣೈ ಅವರು ಪಾರಂಪರಿಕ ವಾಸ್ತು ವೈಭವಿರುವ ಸಾಂಪ್ರದಾಯಿಕ ಕಟ್ಟಡಗಳನ್ನು ತಂದು ಮಣಿಪಾಲದ ಸಂಸ್ಕೃತಿ ಗ್ರಾಮದಲ್ಲಿ 6 ಎಕರೆ ಪ್ರದೇಶದಲ್ಲಿ ಅದ್ಭುತವೆನಿಸುವ ಹೆರಿಟೇಜ್ ವಿಲೇಜ್ ನಿರ್ಮಾಣ ಮಾಡಿದ್ದರು. ಅನಂತನಗರದಲ್ಲಿ ಅತ್ಯಪರೂಪದ ವಾಸ್ತುವಿನ್ಯಾಸದ ಹಸ್ತಶಿಲ್ಪ ಎಂಬ ಮನೆ, ವಿಶೇಷ ಜಾನಪದ ಕಲಾ ಪ್ರಕಾರ, ಅನೇಕ ಚಿತ್ರ ಗ್ಯಾಲರಿಗಳನ್ನು ಸಂಗ್ರಹಿಸಿದ ಅಪರೂಪದ ಸಾಧಕ ಶೆಣೈ ಅವರಾಗಿದ್ದರು.
ಅಪೂರ್ವ ಕಲಾಸಕ್ತರಾಗಿದ್ದ ಶೆಣೈ ಅವರು ಉಡುಪಿಯಲ್ಲಿ 60 ರ ದಶಕದಲ್ಲಿ ಸಂಗೀತ ಸಭಾ ಎಂಬ ಸಾಂಸ್ಕೃತಿಕ ಸಂಘಟನೆಯನ್ನು ಸ್ಥಾಪಿಸಲು ಕಾರಣೀಭೂತರಾಗಿದ್ದರು. ಸಂಗೀತಾ ಸಭಾ ಸಂಸ್ಥೆಯು ಪಂಡಿತ್ ಭೀಮ್ ಸೇನ್ ಜೋಷಿ , ಸಿತಾರ್ ಮಾಂತ್ರಿಕ ರವಿಶಂಕರ್ ಮುಂತಾದ ಮಹೋನ್ನತ ಸಂಗೀತ ದಿಗ್ಗಜರ ಕಾರ್ಯಕ್ರಮಗಳನ್ನು ಎರ್ಪಡಿಸಿ ಪ್ರಸಿದ್ಧವಾಗಿತ್ತು.
ಬ್ಯಾಂಕ್ ಉದ್ಯೋಗದಿಂದ ನಿವೃತ್ತರಾದ ಬಳಿಕ ನಶಿಸಿ ಹೋಗುತ್ತಿದ್ದ ಚಾರಿತ್ರಿಕ ,ಪಾರಂಪರಿಕ ವಾಸ್ತು ಶೈಲಿಯ ಮನೆಗಳು ಮತ್ತು ಭಂಡಸಾಲೆಗಳ ಸಂರಕ್ಷಣೆಗಾಗಿ ಹಗಳಿರುಳು ಶ್ರಮಿಸಿದ ಚೇತನ ಶೆಣೈ ಅವರಾಗಿದ್ದರು. ಇವರ ಶ್ರಮದ ಫಲವಾಗಿ ಮಣಿಪಾಲದ ಸಂಸ್ಕೃತಿ ಗ್ರಾಮದಲ್ಲಿರುವ ಹೆರಿಟೇಜ್ ವಿಲೆಜ್ನಲ್ಲಿ 30 ಕ್ಕೂ ಹೆಚ್ಚಿನ ಪಾರಂಪರಿಕ ಮನೆಗಳನ್ನು ನಾವಿಂದು ಕಾಣಬಹುದಾಗಿದೆ. ಡೆಕ್ಕನ್ ನವಾಬರ ಮನೆ, ನವಾಯತರ ಮನೆ, ಕೋಣಿ ಕಾರಂತರ ಮನೆ ,ಜಂಗಮ ಮಠದ ಮನೆ ಅವುಗಳ ಪೈಕಿ ಅತ್ಯಾಕರ್ಷಣೀಯವಾಗಿವೆ.
ಶೆಣೈ ಅವರ ನಿಧನಕ್ಕೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:
►ಹಿರಿಯರ ವೈಭವದ ಬದುಕು ಸಾರುವ ಮಣಿಪಾಲದ ಹೆರಿಟೇಜ್ ವಿಲೇಜ್: http://bit.ly/2mm8vGs
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.