ಮಣಿಪಾಲ: ಕಾಂಕ್ರೀಟ್ ರಸ್ತೆಯಲ್ಲಿ ನೀರು ಪೋಲು
ಪರ್ಯಾಯ ದಾರಿಗಳ ಬಗ್ಗೆ ಚಿಂತಿಸದ ನಗರಸಭೆ
Team Udayavani, Dec 9, 2020, 8:11 AM IST
ಕಾಂಕ್ರೀಟ್ ರಸ್ತೆ ಮಧ್ಯದಲ್ಲಿ ಪೋಲಾಗುತ್ತಿರುವ ಕುಡಿಯುವ ನೀರು.
ಉಡುಪಿ: ಮಣಿಪಾಲದ ಮೂಲಕ ಹಾದು ಹೋಗುವ ರಾ.ಹೆ. ರಸ್ತೆಯಲ್ಲೇ ಕಳೆದ ಹಲವು ತಿಂಗಳುಗಳಿಂದ ನೀರು ಪೋಲಾಗುತ್ತಿದ್ದು, ಈವರೆಗೂ ದುರಸ್ತಿ ಕಾರ್ಯದ ಬಗ್ಗೆ ಸಂಬಂಧಪಟ್ಟವರು ಚಿಂತಿಸಿಲ್ಲ.
ಮಣಿಪಾಲ ಎಂಐಟಿ ಬಸ್ ನಿಲ್ದಾಣ (ಗ್ರೀನ್ ಪಾರ್ಕ್/ ಕಸ್ತೂರ್ಬಾ ಆಸ್ಪತ್ರೆ ಮುಂಭಾಗ) ಸಮೀಪ ರಾತ್ರಿ ಹೊತ್ತು ನೀರು ಹರಿಯುತ್ತದೆ. ಹೊಸದಾಗಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯ ತಳಭಾಗದಲ್ಲಿ ಕುಡಿಯುವ ನೀರಿನ ಪೈಪ್ ಇದ್ದು ಇದು ಒಡೆದು ಭಾರೀ ಪ್ರಮಾಣದ ನೀರು ಪೋಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಎಷ್ಟೇ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಮೈನ್ ವಾಲ್ವ್ ಗೆ ಹಾನಿ
ಬಜೆಯಿಂದ ಶುದ್ಧೀಕರಿಸಿದ ನೀರನ್ನು ನಗರದ ವಿವಿಧ ಮನೆ ಹಾಗೂ ಮಳಿಗೆಗಳಿಗೆ ಸರಬರಾಜು ಮಾಡುವ ಪೈಪ್‌ಲೈನ್ ವ್ಯವಸ್ಥೆ ಮೇಲೆಯೇ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಮಣಿಪಾಲ ಎಂಐಟಿ ಬಸ್ ನಿಲ್ದಾಣ ಸಮೀಪದಲ್ಲಿ ನೀರಿನ ಮೈನ್ ವಾಲ್ವ್ ಒಡೆದು ಹೋದ ಪರಿಣಾಮ ರಸ್ತೆಗೆ ಹಾಕಲಾದ ಸ್ಲ್ಯಾಬ್ ನಡುವಿನಿಂದ ನೀರು ಹೊರಹೋಗುತ್ತಿದೆ.
ನಗರಸಭೆ ಹೊಣೆ
ಹೆದ್ದಾರಿ ಇಲಾಖೆ ಕಾಮಗಾರಿ ಮಾಡುವ ಮುನ್ನ ಮೈನ್ ವಾಲ್Ì ಹಾಗೂ ಕುಡಿಯುವ ನೀರಿನ ಪೈಪ್ ಲೈನ್‌ನ್ನು ಬೇರೆಡೆಗೆ ಬದಲಾಯಿಸುವಂತೆ ಮನವಿ ಮಾಡಿತ್ತು. ಅದರ ಅನ್ವಯ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಲಸಿರಿ ವಿಭಾಗವು ಪರ್ಯಾಯ ಮಾರ್ಗವನ್ನು ನಿರ್ಮಿಸಿದೆ. ಹಳೆಯ ಪೈಪ್‌ಲೈನ್ ನಿಲುಗಡೆ ಮಾಡಿ ಹೊಸ ಪೈಪ್‌ಲೈನ್‌ಗೆ ಚಾಲನೆ ನೀಡಬೇಕಾಗಿದೆ. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದೇ ಇರುವುದರಿಂದ ಭಾರೀ ಪ್ರಮಾಣದ ನೀರು ಕಾಂಕ್ರೀಟ್ ರಸ್ತೆಯಲ್ಲಿ ಪೋಲಾಗುತ್ತಿದೆ. ಜನರ ಕಣ್ಣಿನಿಂದ ಇದನ್ನು ಮರೆಮಾಚುವ ನಿಟ್ಟಿನಲ್ಲಿ ನೀರನ್ನು ಸಂಜೆ 7ರಿಂದ ಬೆಳಗ್ಗೆ 6ರೊಳಗೆ ಬಿಡಲಾಗುತ್ತಿದೆ ಎನ್ನಲಾಗಿದೆ.
ಹೊಸ ರಸ್ತೆಗೆ ಹಾನಿ
ಕೋಟ್ಯಂತರ ರೂ. ವ್ಯಯಿಸಿ ನಿರ್ಮಿಸಲಾದ ಹೊಸ ಕಾಂಕ್ರೀಟ್ ರಸ್ತೆಯಲ್ಲಿ ಸತತವಾಗಿ ನೀರು ಪೋಲಾಗುತ್ತಿರು ವುದರಿಂದ ರಸ್ತೆಯ ಬೆಡ್‌ಗೆ ಹಾನಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಈಗಾಗಲೇ ಹೆದ್ದಾರಿ ಇಲಾಖೆಯು ನಗರಸಭೆಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋ
ಜನವಾಗಿಲ್ಲ. ವಾರಾಹಿ ನೀರು ನಗರಕ್ಕೆ ಬರುವವರೆಗೆ ನೀರಿನ ಲೈನ್ ನಿಲ್ಲಿಸುವ ಲಕ್ಷಣ ಕಾಣುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಪರ್ಯಾಯ ಲೈನ್‌ಗೆ ಸಂಪರ್ಕ ಯತ್ನ
ಕಾಂಕ್ರೀಟ್ ರಸ್ತೆಯಡಿಯ ಪೈಪ್‌ಲೈನ್ ಒಡೆದು ಹೋಗಿದೆ. ಪರ್ಯಾಯ ಪೈಪ್‌ಲೈನ್‌ಗೆ ಸಂಪರ್ಕಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿ, ಗಮನ ಹರಿಸುವಂತೆ ತಿಳಿಸಲಾಗುವುದು.
-ಸುಮಿತ್ರಾ ಆರ್. ನಾಯಕ್, ಅಧ್ಯಕ್ಷೆ, ನಗರಸಭೆ
ಪೈಪ್‌ಲೈನ್‌ಗೆ ಸಂಪರ್ಕ ನೀಡಿಲ್ಲ
ಹೆದ್ದಾರಿ ಕಾಮಗಾರಿಯಲ್ಲಿ ಯಾವುದೇ ಲೋಪವಿಲ್ಲ. ಪರ್ಯಾಯ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಸಂಪರ್ಕ ನೀಡದೆ ಇರುವುದರಿಂದ ಈ ಸಮಸ್ಯೆ ಎದುರಾಗಿದೆ.
-ಮಂಜುನಾಥ್ ನಾಯಕ್, ಎಂಜಿನಿಯರ್, ಹೆದ್ದಾರಿ ಇಲಾಖೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.