ಮಣಿಪಾಲದ ಮಣ್ಣಪಳ್ಳದಲ್ಲಿ ಬಾಗಲಕೋಟೆ ಮೂಲದ ವ್ಯಕ್ತಿ ಮೃತದೇಹ ಪತ್ತೆ
Team Udayavani, Feb 23, 2022, 9:55 AM IST
ಮಣಿಪಾಲ: ಇಲ್ಲಿನ ಮಣ್ಣಪಳ್ಳ ಎಂಬಲ್ಲಿ ಬುಧವಾರ ಮುಂಜಾನೆ ವ್ಯಕ್ತಿಯೊರ್ವನ ಶವ ಪತ್ತೆಯಾಗಿದೆ.
ಮೃತದೇಹವನ್ನು ಬಾಗಲಕೋಟೆ ಮೂಲದ, ಪ್ರಸ್ತುತ ಮಣಿಪಾಲ ಶಾಂತಿನಗರದಲ್ಲಿ ವಾಸವಿರುವ ಮೊಹಮ್ಮದ್ ಇಸ್ಮಾಯಿಲ್ (30) ಎಂದು ಗುರುತಿಸಲಾಗಿದೆ.
ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.