ಮಂಜರಪಲ್ಕೆಗೆ ಬೇಕು ಸುಸಜ್ಜಿತ ಬಸ್ ತಂಗುದಾಣ
Team Udayavani, Aug 7, 2019, 6:24 AM IST
ಬೆಳ್ಮಣ್: ಕೆದಿಂಜೆ ಮಂಜರ ಪಲ್ಕೆಯಲ್ಲಿ ಬಸ್ ನಿಲ್ದಾಣ ಇಲ್ಲದೆ ಇರುವುದರಿಂದ ಬೋಳ, ಕಾಂತಾವರ, ಬೇಲಾಡಿ, ಕೆಮ್ಮಣ್ಣು, ವಂಜಾರಕಟ್ಟೆ ಕಡೆಗೆ ಪ್ರಯಾಣಿಸುವವರು ಮಳೆ, ಬಿಸಿಲಿಗೆ ನಿಲ್ಲಲು ಸರಿಯಾದ ಜಾಗ ವಿಲ್ಲದೆ ಪರದಾಡುವಂತಾಗಿದೆ.
ಈ ಹಿಂದೆ ಬೋಳ ಕಡೆಗೆ ಪ್ರಯಾಣಿ ಸುವ ಪ್ರಯಾಣಿಕರಿಗೆ ಆಸರೆಯಾಗಿದ್ದ ಬಸ್ ತಂಗುದಾಣವನ್ನು ಹೆದ್ದಾರಿ ವಿಸ್ತರಣೆ ಸಂದರ್ಭ ಕೆಡವಲಾಗಿತ್ತು. ಇದರ ವಿರುದ್ಧ ದಿಕ್ಕಿನಲ್ಲಿ ಕಾರ್ಕಳ ಕಡೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸುಸಜ್ಜಿತ ಬಸ್ ತಂಗುದಾಣವನ್ನು ಹೆದ್ದಾರಿ ಕಾಮಗಾರಿ ನಡೆಸಿದ ಆರ್.ಎನ್.ಎಸ್. ಸಂಸ್ಥೆ ನಿರ್ಮಿಸಿತ್ತು. ಆದರೆ ಈ ವರೆಗೆ ಕೆಡವಿದ ಬಸ್ ತಂಗುದಾಣವನ್ನು ಮರು ನಿರ್ಮಾಣ ಮಾಡದಿರುವುದರಿಂದ ಪ್ರಯಾಣಿಕರಿಗೆ ಅಂಗಡಿ, ಬೇಕರಿ ಹಾಗೂ ಗೂಡಂಗಡಿಗಳೇ ಆಸರೆಯಾಗಿವೆ.
ಶಾಲಾ ಮಕ್ಕಳು, ವೃದ್ಧರಿಗೆ ತೊಂದರೆ
ಬೋಳ, ವಂಜಾರಕಟ್ಟೆ, ಬೇಲಾಡಿ, ಕಾಂತಾವರ ಕಡೆಗಳಿಂದ ಕಾರ್ಕಳ ಹಾಗೂ ಬೆಳ್ಮಣ್ ಭಾಗದ ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ವೃದ್ಧರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ನಂದಳಿಕೆ ಗ್ರಾ.ಪಂ. ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಗಣ್ಯರಿಗೆ ಒತ್ತಡ ಹೇರಿದ್ದು ಸಕಾಲಿಕ ಸ್ಪಂದನೆಗೆ ಕಾಯುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಜಾಗದ ಸಮಸ್ಯೆ
ಈ ಹಿಂದೆ ಬಸ್ ತಂಗುದಾಣ ಇದ್ದ ಜಾಗದಲ್ಲಿ ಹೊಸ ತಂಗುದಾಣ ನಿರ್ಮಿ ಸಲು ಜಾಗದ ಸಮಸ್ಯೆ ಇರುವುದರಿಂದ ತೊಡಕಾಗಿದೆ. ಈ ಬಗ್ಗೆಯೂ ಗಮನ ಹರಿಸಿ ಹೊಸ ಬಸ್ ತಂಗುದಾಣ ನಿರ್ಮಿಸ ಬೇಕೆಂಬುದು ಸ್ಥಳೀಯರ ಆಗ್ರಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bharatanatyam; ರಾಜ್ಯ ಮಟ್ಟದ ಶಿಷ್ಯವೇತನಕ್ಕೆ ಅದಿತಿ ಜಿ.ಮಂಡೀಚ,ಸ್ವಾತಿ ಆಯ್ಕೆ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.