ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ
Team Udayavani, Nov 2, 2020, 5:11 AM IST
ಮಂಜೇಶ್ವರ ಗೋವಿಂದ ಪೈಯವರು ಕರ್ನಾಟಕದ ಪ್ರಥಮ “ರಾಷ್ಟ್ರಕವಿ’ ಬಿರುದಾಂಕಿತರು. 24 ಭಾಷೆಗಳಲ್ಲಿ ಪ್ರವೀಣರಾಗಿದ್ದ ಅವರ ಗ್ರಂಥಾಲಯದಲ್ಲಿ 43 ಭಾಷೆಗಳ ಗ್ರಂಥಗಳಿದ್ದವು.
ಕಾಸರಗೋಡಿನ ಮಂಜೇಶ್ವರದಲ್ಲಿ ಜನಿಸಿದ ಮಂಜೇಶ್ವರ ಗೋವಿಂದ ಪೈಯವರು ಕರ್ನಾಟಕದ ಪ್ರಥಮ “ರಾಷ್ಟ್ರಕವಿ’ ಬಿರುದಾಂಕಿತರು. 1893ರ ಮಾ.23ರಿಂದ 1963ರ ಸೆ. 6ರ ವರೆಗೆ ಇವರ ಜೀವಿತಾವಧಿ. ಚೆನ್ನೈಯಲ್ಲಿ ಡಾ| ಎಸ್.ರಾಧಾಕೃಷ್ಣನ್ ಅವರು ಪೈಯವರ ಸಹಪಾಠಿಯಾಗಿದ್ದರು. ಪಂಜೆ ಮಂಗೇಶ ರಾಯರು ಇವರ ಗುರುಗಳು. ತಂದೆಯವರ ಮರಣದಿಂದ ಬಿ.ಎ. ಪರೀಕ್ಷೆಯನ್ನು ಬರೆಯಲಾಗದಿದ್ದರೂ ಇವರ ಅಪೂರ್ವ ಸಾಂಸ್ಕೃತಿಕ, ಐತಿಹಾಸಿಕ, ಸಾಮಾಜಿಕ ಸಂಶೋಧನ ಸೇವೆ ನಾಡಿಗೆ ಸಮರ್ಪಣೆಯಾಯಿತು.
ಕಾಲೇಜಿನ ಅವಧಿಯಲ್ಲಿಯೇ ಲ್ಯಾಟಿನ್, ಫ್ರೆಂಚ್, ಸಂಸ್ಕೃತ, ಪಾಲಿ, ಬಂಗಾಲಿ ಮೊದಲಾದ ಭಾಷೆಗಳನ್ನು ಕಲಿತಿದ್ದರು. ಒಟ್ಟು 25 ಭಾಷೆಗಳಲ್ಲಿ ಪ್ರವೀಣರಾಗಿದ್ದರು. ಇವರ ಗ್ರಂಥಾಲಯದಲ್ಲಿ 43 ಭಾಷೆಗಳ ಸಾವಿರಾರು ಗ್ರಂಥಗಳ ಸಂಗ್ರಹವಿತ್ತು. “ಗಿಳಿವಿಂಡು’, “ನಂದಾದೀಪ’ ಕಾವ್ಯಸಂಕಲನ, “ವೈಶಾಖೀ’, “ಗೊಲ್ಗೊಥಾ’ ಖಂಡಕಾವ್ಯ, “ಹೆಬ್ಬೆರಳು’ ಪದ್ಯಗಳನ್ನು ಒಳಗೊಂಡ ಏಕಾಂಕ ನಾಟಕ, “ಚಿತ್ರಭಾನು’ ಗದ್ಯನಾಟಕ, “ತಾಯಿ’, “ಕಾಯಾಯ್ ಕೊಮಾಜಿ’ ಇವುಗಳು ಪ್ರಸಿದ್ಧ ಸಾಮಾಜಿಕ ನಾಟಕಗಳಾಗಿವೆ.
ಬುದ್ಧ, ಮಹಾವೀರ, ಬ್ರಹ್ಮ, ಶಿವ, ಕುಮಾರವ್ಯಾಸ, ಮಧ್ವಾಚಾರ್ಯ ಮೊದಲಾದವರ ಕಾಲನಿರ್ಣಯ, ಪಂಪ, ರನ್ನ, ನಾಗಚಂದ್ರ, ಲಕ್ಷ್ಮೀಶ, ರತ್ನಾಕರ ವರ್ಣಿ, ಪಾರ್ತಿಸುಬ್ಬ ಮೊದಲಾದವರ ಕಾಲ-ದೇಶಗಳ ನಿರ್ಣಯದ ಸಂಶೋಧನೆ ಮಾಡಿದ್ದಾರೆ. ತುಳುನಾಡಿನ ಇತಿಹಾಸ, ಗೌಡ ಸಾರಸ್ವತರ ಮೂಲ, ಬಸವೇಶ್ವರ ವಂಶಾವಳಿ, ಕರ್ನಾಟಕದ ಪ್ರಾಚೀನ ರಾಜಮನೆತನಗಳು, ಭಾರತೀಯ ಇತಿಹಾಸ, ಜೈನ, ಬೌದ್ಧ, ವೀರಶೈವ ಧರ್ಮಗಳ ಬಗ್ಗೆ ಮೌಲಿಕ ಸಂಶೋಧನೆ ಉಲ್ಲೇಖನೀ ಯವಾದುದು. “ತಾಯಿ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ| ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ||’ ಅವರ ಹಾಡು ಜನ ಜನಿತವಾಗಿದೆ.
ಉಡುಪಿ ಎಂಜಿಎಂ ಕಾಲೇಜಿನಲ್ಲಿದೆ ಗ್ರಂಥಾಲಯ
ಗೋವಿಂದ ಪೈಯವರು 1963ರಲ್ಲಿ ನಿಧನ ಹೊಂದಿದ ಬಳಿಕ 1965ರಲ್ಲಿ ಅವರ ಬಂಧುಗಳು ಅವರ ಗ್ರಂಥ ಭಂಡಾರವನ್ನು ಉಡುಪಿ ಎಂಜಿಎಂ ಕಾಲೇಜಿಗೆ ಹಸ್ತಾಂತರಿಸಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ| ಕು.ಶಿ. ಹರಿದಾಸ ಭಟ್ಟರ ನೇತೃತ್ವದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಆರಂಭವಾಯಿತು. ಪೈಯವರ ಗ್ರಂಥ ಪ್ರಕಾಶನ, ವಿಚಾರಗೋಷ್ಠಿಗಳನ್ನು ನಡೆಸಲಾಗುತ್ತಿತ್ತು. 1979ರಲ್ಲಿ ಮಹತ್ವದ ತುಳು ನಿಘಂಟು ಯೋಜನೆ ಆರಂಭವಾಯಿತು. ಸಂಶೋಧನ ಕೇಂದ್ರದಿಂದ ಇತ್ತೀಚೆಗೆ ಸಂಶೋಧನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಗೋವಿಂದ ಪೈಯವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಮಂಜೇಶ್ವರದಲ್ಲಿ “ಗಿಳಿವಿಂಡು’ ಮತ್ತು ಗೋವಿಂದ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಸ್ಮಾರಕಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್ ವಶ
Manipal: ಅಪಾಯಕಾರಿ ರೀತಿಯಲ್ಲಿ ಬೈಕ್ ಚಾಲನೆ; ಪ್ರಕರಣ ದಾಖಲು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.