ಮಂಜೇಶ್ವರ ದೇವಸ್ಥಾನಕ್ಕೆ ಸ್ವರ್ಣ ಪಲ್ಲಕ್ಕಿ ಹಸ್ತಾಂತರ
Team Udayavani, Nov 2, 2022, 6:20 AM IST
ಉಡುಪಿ: ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನಕ್ಕೆ ಭಕ್ತಾದಿಗಳಿಂದ ಸಮರ್ಪಿಸಲ್ಪಡುವ 14 ಕೆ.ಜಿ. ತೂಕದ ಚಿನ್ನದ ಪಲ್ಲಕ್ಕಿಯನ್ನು ಉಡುಪಿ ಆಭರಣ ಜುವೆಲರ್ಸ್ ವರ್ಕ್‌ಶಾಪ್‌ನಲ್ಲಿ ತಯಾರಿಸಲಾಗಿದ್ದು, ಸ್ವರ್ಣ ಪಲ್ಲಕ್ಕಿ ಮತ್ತು ಪರಿಕರಗಳಿಗೆ ಮಂಗಳವಾರ ಉಡುಪಿ ಆಭರಣ ಮಳಿಗೆಯಲ್ಲಿ ಧಾರ್ಮಿಕ ವಿಧಾನಗಳನ್ನು ನೆರವೇರಿಸಿ ದೇವಸ್ಥಾನದ ಟ್ರಸ್ಟಿಗಳಿಗೆ ಹಸ್ತಾಂತರಿಸಲಾಯಿತು.
ಅರ್ಚಕರಾದ ಕೆ. ಶ್ರೀಕಾಂತ್ ಅವಧಾನಿ, ಎಂ. ಪುರುಷೋತ್ತಮ ಆಚಾರ್ಯ ಧಾರ್ಮಿಕ ಕಾರ್ಯ ನೆರವೇರಿಸಿದರು. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೋಟೇಶ್ವರ ದಿನೇಶ್ ಜಿ. ಕಾಮತ್, ಟ್ರಸ್ಟಿಗಳಾದ ಛತ್ರಪತಿ ಶಿವಾಜಿ ಪ್ರಭು, ಯೊಗೀಶ್ ಆರ್. ಕಾಮತ್, ಎಂ. ಕೃಷ್ಣ ಭಟ್, ರಾಘವೇಂದ್ರ ಪ್ರಭು, ಅಜಿತ್ ಕುಮಾರ್ ಶೆಣೈ ಮತ್ತು 18 ಪೇಟೆಯ ಸದಸ್ಯರು, ಪದಾಧಿಕಾರಿಗಳು, ಸ್ವಯಂ ಸೇವಕರು ಭಾಗವಹಿಸಿದ್ದರು. ಆಭರಣ ಜುವೆಲರ್ಸ್ ನಿರ್ದೇಶಕರಾದ ಮಧುಕರ್ ಎಸ್. ಕಾಮತ್, ದಯಾನಂದ್ ಕಾಮತ್, ಸುಭಾಸ್ ಎಂ. ಕಾಮತ್ ಹಾಗು ಮಹೇಶ್ ಎಂ. ಕಾಮತ್, ವಿಜಯಾ ಡಿ. ಕಾಮತ್, ಸಂಧ್ಯಾ ಎಸ್. ಕಾಮತ್, ವೀಣಾ ಎಂ. ಕಾಮತ್ ಉಪಸ್ಥಿತರಿದ್ದರು.
ಉಡುಪಿಯಿಂದ ಮಂಜೇಶ್ವರದ ವರೆಗೆ ತೆರೆದ ವಾಹನದಲ್ಲಿ ಪಲ್ಲಕ್ಕಿ ಸಾಗಲಿದ್ದು, ಮೂರು ದಿನಗಳ ಕಾಲ ಉಡುಪಿ, ದ.ಕ. ಜಿಲ್ಲೆಯ ಪ್ರಮುಖ ಜಿಎಸ್‌ಬಿ ಸಮಾಜದ ದೇವಸ್ಥಾನಗಳಿಗೆ ಭೇಟಿ ನೀಡಿ ನ. 3ರಂದು ಮಂಜೇಶ್ವರದ ದೇಗುಲಕ್ಕೆ ತೆರಳಲಿದೆ. ನ. 6ರಂದು ಮಂಜೇಶ್ವರದ ಅನಂತೇಶ್ವರ ದೇಗುಲದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಶ್ರೀಪಾದರ ಸಮ್ಮುಖದಲ್ಲಿ ದೇಗುಲದ ಶ್ರೀ ಭದ್ರ ನರಸಿಂಹ ಮತ್ತು ಶೇಷ ದೇವರಿಗೆ ಪಲ್ಲಕ್ಕಿಯನ್ನು ಸಮರ್ಪಿಸಲಾಗುತ್ತದೆ ಎಂದು ದಿನೇಶ್ ಕಾಮತ್ ತಿಳಿಸಿದರು.
ವಜ್ರ, ಮಾಣಿಕ್ಯ, ನವರತ್ನಗಳಿಂದ ಪೋಣಿಸಿದ ಚಿನ್ನದ ಪಲ್ಲಕ್ಕಿಯನ್ನು ಆಭರಣ ಜ್ಯುವೆಲ್ಲರ್ಸ್‌ನ ವರ್ಕ್‌ಶಾಪ್‌ನಲ್ಲಿ 40 ದಿನಗಳಲ್ಲಿ 5 ಮಂದಿ ನುರಿತ ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
Rohit Sharma: ತನುಷ್ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ
Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.