ಮಣ್ಣಪಳ್ಳಕ್ಕೆ ಹಸಿರುಡಿಸುವ ಕೆಲಸ
Team Udayavani, Jun 9, 2018, 7:10 AM IST
ಮಣಿಪಾಲ: ಮಣಿಪಾಲದ ಪ್ರಮುಖ ತಾಣ, ಮಣ್ಣಪಳ್ಳ ಕೆರೆಯ ಸುತ್ತಲಿನ ಪರಿಸರವನ್ನು ಮತ್ತಷ್ಟು ಹಸಿರೀಕರಣಗೊಳಿಸುವ ಸಣ್ಣ ಪ್ರಯತ್ನವೊಂದು ಇದೀಗ ನಡೆಯುತ್ತಿದೆ. ಈ ಮೂಲಕ ಮತ್ತಷ್ಟು ಸಸಿಗಳಿಗೆ ಆಶ್ರಯಕೊಟ್ಟು, ಪ್ರಕೃತಿಯನ್ನು ಸುಂದರಗೊಳಿಸುವ ಕೆಲಸ ಇದಾಗಿದೆ.
ಸುಮಾರು ನೂರು ಎಕ್ರೆ ವಿಸ್ತೀರ್ಣ ಹೊಂದಿರುವ ಈ ಕೆರೆಯ ದಂಡೆಯಲ್ಲಿ ಸುಮಾರು 350 ಬಗೆಯ ಗಿಡಗಳನ್ನು ನೆಡುವುದರ ಹಸಿರು ವೃದ್ಧಿಯ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದ್ದು, ಇದಕ್ಕೆ ಗುರುವಾರ ಚಾಲನೆ ಸಿಕ್ಕಿದೆ.
ಮಣ್ಣಪಳ್ಳ ಕೆರೆ ಸುತ್ತ ಮುಂಗಾರು ಆರಂಭದಲ್ಲಿ ಗಿಡ ನೆಡುವ ಕಾರ್ಯ ನಡೆಯುತ್ತಿದ್ದು, ಇದರ ಜವಾಬ್ದಾರಿಯನ್ನು ಉಡುಪಿ ನಗರ ಸಭೆ, ರೋಟರಿ ಕ್ಲಬ್ ಹೊತ್ತುಕೊಳ್ಳುತ್ತದೆ. ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡುವ ಹೊತ್ತಿನಲ್ಲಿ ಅರಣ್ಯಾಧಿಕಾರಿಗಳಾದ ದಯಾನಂದ ಮತ್ತು ಕೇಶವ ಪೂಜಾರಿ, ಉಡುಪಿ ನಗರಸಭೆಯ ಮುಖ್ಯಾಧಿಕಾರಿ ನರಸಿಂಹ ನಾಯಕ್,ರೋಟರಿ ಕ್ಲಬ್‌ನ ಅಧ್ಯಕ್ಷೆ ತಾರಾ ಶೆಟ್ಟಿ, ಸದಸ್ಯರಾದ ಜಾಹ್ನವಿ, ಸವಿತಾ ಭಟ್ ಹಾಗೂ ಸುಂದರ್ ಶೆಟ್ಟಿ ಉಪಸ್ಥಿತರಿದ್ದರು.
ಕಾಡು ಉಳಿಸೋಣ
ಕಾಡು ನಾಶವಾದರೆ ಮಳೆ ಸರಿಯಾಗಿ ಆಗುವುದಿಲ್ಲ. ಇದರಿಂದ ಬೆಳೆಯೂ ಇಲ್ಲ ಇದು ಒಂದಕ್ಕೊಂದು ಕೊಂಡಿ ಇದ್ದಂತೆ. ನಮ್ಮಿಂದ ನಾಶವಾಗುತ್ತಿರುವ ಪ್ರಕೃತಿಯನ್ನು ನಾವೇ ಕಟ್ಟಬೇಕು.
– ದಯಾನಂದ್, ಅರಣ್ಯಾಧಿಕಾರಿ
ಪರಿಸರ ಆರೋಗ್ಯಕರ
16 ವರ್ಷದ ಸತತ ಪ್ರಯತ್ನದಿಂದ ಬಂಜರು ಭೂಮಿಯಂತಿದ್ದ ಮಣಿಪಾಲದ ಮಣ್ಣಪಲ್ಲ ಕೆರೆ ಗಿಡ-ಮರಗಳಿಂದ ಹಚ್ಚ ಹಸಿರಿನ ರೂಪು ಪಡೆದಿದೆ.ಯಾವುದೇ ಪ್ರದೇಶವಾದರೂ ಹಸುರಿನ ಸೊಬಗು ಹೊಂದಿದ್ದರೆ ಅದರ ಸೌಂದರ್ಯ ದುಪ್ಪಟ್ಟಾಗುತ್ತದೆ ಹಾಗೂ ಸುತ್ತಮುತ್ತಲಿನ ಪರಿಸರವೂ ಆರೋಗ್ಯಕರವಾಗಿ ಕಾಣುತ್ತದೆ.
– ನರಸಿಂಹ ನಾಯಕ್
ಉಡುಪಿ ನಗರ ಸಭೆಯ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.