ಗರೋಡಿ ಗುರಿಕಾರರಿಗೆ ಮಾಸಾಶನ: ಹರಿಪ್ರಸಾದ್‌ ಕರೆ


Team Udayavani, Apr 24, 2017, 3:06 PM IST

hariprasad.jpg

ಉಡುಪಿ ಜಿಲ್ಲಾ ಗರೋಡಿ ಗುರಿಕಾರರ  ಸಮ್ಮಾನ, ಸಮ್ಮಿಲನ  
ಉಡುಪಿ: ದೇವಸ್ಥಾನಗಳ ಅರ್ಚಕರಂತೆ ಗರೋಡಿಗಳ ಗುರಿಕಾರರಿಗೂ ಮಾಸಾಶನ ದೊರಕಬೇಕು ಎಂದು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌ ಆಗ್ರಹಿಸಿದರು. ಜಿಲ್ಲಾ ಬಿಲ್ಲವ ಯುವ ವೇದಿಕೆ ಪುರಭವನದಲ್ಲಿ ರವಿವಾರ ಆಯೋಜಿಸಿದ ಜಿಲ್ಲಾ ವ್ಯಾಪ್ತಿಯ ಗರೋಡಿ ಗುರಿಕಾರರ ಸಮ್ಮಾನ, ಪ್ರಮುಖರ ಸಮ್ಮಿಲನ ಸಮಾರಂಭ ಉದ್ಘಾಟಿಸಿ ಮಾತನಾಡಿದ
ಅವರು, ಕೋಟಿ ಚೆನ್ನಯರ ಸಿದ್ಧಾಂತ ಜಾರಿಗೆ ಬರುವಂತಾಗಬೇಕು ಎಂದರು. 

ಕೋಟಿ ಚೆನ್ನಯರು ಅನ್ಯಾಯ, ಶೋಷಣೆ ವಿರುದ್ಧ ಹೋರಾಡಿದವರು, ದುರ್ಬಲರಿಗೆ ನೆರವಾದವರು. ನಾವು ಬಹುಸಂಖ್ಯಾಕರಿದ್ದರೂ ಹಲವು ಜನಪ್ರತಿನಿಧಿಗಳನ್ನು ಹೊಂದಿಯೂ ಸಾಮಾ ಜಿಕ, ಆರ್ಥಿಕ ಸ್ವಾತಂತ್ರ್ಯ ಸಿಗಲಿಲ್ಲ. 2013ರಲ್ಲಿ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದಾಗ ಮಂಗಳೂರಿನಲ್ಲಿ ಒಂದು ಜಾಗ ಕೊಟ್ಟರು. ಅಲ್ಲಿ ನವೀನಚಂದ್ರ ಸುವರ್ಣ ಪ್ರಯತ್ನದಿಂದ ಹಾಸ್ಟೆಲ್‌ ನಿರ್ಮಾಣವಾಯಿತು. ನಾವು ಅಧಿಕಾರದಲ್ಲಿದ್ದು, ಸಮಾಜಕ್ಕೆ ಏನಾದರೂ ಕೆಲಸ ಮಾಡದೆ ಇದ್ದರೆ ಪ್ರಯೋಜನವಿಲ್ಲ. ನಾನು ಮಂಜೂರು ಮಾಡಿದರೂ ಎಷ್ಟೋ ಕೆಲಸಗಳನ್ನು ಅಧಿಕಾರಿಗಳು ಮಾಡಲಿಲ್ಲ. ಕಾರಣವೆಂದರೆ ಬಿಲ್ಲವರು ಸರಕಾರಿ ನೌಕರರಾಗಿಲ್ಲ  ಎಂದರು.

ದಿಕ್ಸೂಚಿ ಭಾಷಣ ಮಾಡಿದ ಶಾಸಕ ವಿ. ಸುನಿಲ್‌ ಕುಮಾರ್‌, ಕೋಟಿ ಚೆನ್ನಯರು ತುಳುನಾಡಿನ ಸಂಸ್ಕೃತಿ ಹರಿಕಾರರು. ಗರೋಡಿಗಳ ಗುರಿಕಾರ ರಿಗೆ ವೇತನ ಸಿಗಬೇಕು. ಗರೋಡಿಗಳ ಜೀರ್ಣೋದ್ಧಾರಕ್ಕೆ ವಿಶೇಷ ಪ್ಯಾಕೇಜ್‌ ರೂಪಿಸಬೇಕು. ಇದೊಂದು ಸಂಸ್ಕೃ ತಿಯ ಪುನರುಜ್ಜೀವನ ಕೆಲಸದಂತೆ ಆಗಬೇಕು. ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್‌ ಕೆಲಸ ಇನ್ನಷ್ಟು ಆಗ ಬೇಕು ಎಂದರು.

ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್‌, ಆದಿಉಡುಪಿ ಬ್ರಹ್ಮಬೈದ ರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ
ಅಧ್ಯಕ್ಷ ದಾಮೋದರ ಕಲ್ಮಾಡಿ ಅವರನ್ನು ಸಮ್ಮಾನಿಸಲಾಯಿತು. ಗುಜರಾತ್‌ ಬಿಲ್ಲವ ಸಂಘದ ಗೌರವಾಧ್ಯಕ್ಷ ದಯಾ
ನಂದ ಬೋಂಟ್ರ ಅವರ “ದೇಯಿ ಬೈದೆತಿ’ ಪುಸ್ತಕ ಬಿಡುಗಡೆ ಗೊಳಿಸ ಲಾಯಿತು.

ಮಾಜಿ ಶಾಸಕ ಕೆ. ರಘುಪತಿ ಭಟ್‌, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಎನ್‌. ಶಂಕರ ಪೂಜಾರಿ, ಕಲಾವಿದ ಸೂರ್ಯೋದಯ ಪೆರಂಪಳ್ಳಿ ಅತಿಥಿ ಗಳಾಗಿದ್ದರು.
ವೇದಿಕೆ ಅಧ್ಯಕ್ಷ ಪ್ರವೀಣ್‌ ಎಂ. ಪೂಜಾರಿ ಸ್ವಾಗತಿಸಿ ಗೌರವಾಧ್ಯಕ್ಷ ಅಚ್ಯುತ ಅಮೀನ್‌ ಕಲ್ಮಾಡಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕಲ್ಮಾಡಿ ವಂದಿಸಿದರು. ದಯಾನಂದ ಉಗ್ಗೇಲುಬೆಟ್ಟು, ಸಂತೋಷ್‌ ಬಡಾ
ನಿಡಿಯೂರು ಕಾರ್ಯಕ್ರಮ ನಿರ್ವಹಿಸಿದರು. ಆರಂಭದಲ್ಲಿ ಸೂಡ ಕೋಟಿ ಪೂಜಾರಿ, ಹೆಜಮಾಡಿ ಗುರುರಾಜ ಪೂಜಾರಿ ಜೋಡು ನಂದಾದೀಪ ಬೆಳಗಿದರು. 

ಸರಕಾರದ ಗಮನಕ್ಕೆ ಗರೋಡಿಗಳ ಸರ್ವೆ, ಮಾಸಾಶನ: ಕೋಟ ಶ್ರೀನಿವಾಸ ಪೂಜಾರಿ
ಕರಾವಳಿಯ 252 ಗರೋಡಿಗಳಿರುವ ಜಾಗ ಗರೋಡಿ ಹೆಸರಿನಲ್ಲಿಲ್ಲ. ಆದ್ದರಿಂದ ಈ ಭೂಮಿಯನ್ನು ಸರ್ವೆ ಮಾಡಿಸಿ ಜಾಗ ಗರೋಡಿ ಹೆಸರಿನಲ್ಲಿ ಬರುವಂತೆ ಮಾಡಬೇಕು. ಈ ವಿಷಯವನ್ನು ಕಂದಾಯ ಸಚಿವರ ಮುಂದೆ ಮಂಡಿಸುತ್ತೇನೆ. ಗುರಿಕಾರರಿಗೆ ಮಾಸಾಶನ ಕೊಡಲು ಸರಕಾರವನ್ನು ಆಗ್ರಹಿಸುತ್ತೇನೆ ಎಂದು ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸೌಲಭ್ಯ ಪಡೆಯುವಲ್ಲಿಯೂ ಹಿಂದುಳಿದವರು!
ನಾವು ಹಿಂದೆ ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿರುವಾಗ ಗರೋಡಿಗಳ ಪರಿಚಾರಕರ ಸಮ್ಮೇಳನದಲ್ಲಿ ಪರಿಚಾರಕರಿಗೆ ಮಾಸಾಶನ ದೊರಕಿಸಲು ವಿನಂತಿಸಿದ್ದೆವು. ಆದರೆ ಪಂಬದ, ಪರವ, ವಾದ್ಯದವರಿಗೆ ಮಾತ್ರ ಕಲಾವಿ
ದರ ನೆಲೆಯಲ್ಲಿ ಮಾಸಾಶನ ಸಾಧ್ಯ ಎಂದು ಹೇಳಿದರು. ಆಗ ಗುರಿಕಾರರ ಪ್ರಸ್ತಾವ ಬಿದ್ದು ಹೋಯಿತು. ಗರೋಡಿಗಳ ಅಭಿವೃದ್ಧಿಗೆ ಶಾಸಕರು, ಸಚಿವರಿಗೂ ಅನುದಾನವನ್ನು ನೇರವಾಗಿ ಕೊಡಲು ಆಗುತ್ತಿಲ್ಲ. ನಾವು ಹಿಂದುಳಿದ ವರ್ಗ ಎ ಗುಂಪಿನವರಾದರೂ, ಬಹುಸಂಖ್ಯಾಕರಾದರೂ ಸರಕಾರದ ಸೌಲಭ್ಯ ಪಡೆಯು ವಾಗಲೂ ಹಿಂದುಳಿಯುತ್ತಿದ್ದೇವೆ.    

- ಅಚ್ಯುತ ಅಮೀನ್‌ ಕಲ್ಮಾಡಿ

ಟಾಪ್ ನ್ಯೂಸ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

3-girish

Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ

16

Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.