ಸ್ಕೂಲ್ ಬಸ್ ಅಲ್ಲ ಸ್ಕೂಲೇ ಬಸ್ಸು!
Team Udayavani, Apr 6, 2018, 6:55 AM IST
ಕುಂದಾಪುರ: ನಾವುಂದ ಪಂಚಾಯತ್ ಕಚೇರಿ ಬಳಿ ಹಿಂದೆ ಸರಕಾರಿ ಶಾಲೆ ಇತ್ತು. ಈಗ ಅಲ್ಲಿ ಬಸ್ಸೊಂದು ನಿಂತಿದೆ.. ಅರೆ ಇದೇನಿದು.. ಎಂದು ಭಾವಿಸಿದಿರಾ..? ಶಾಲೆ ಎಲ್ಲಿ ಹೋಯಿತು ಎಂಬ ಅಚ್ಚರಿಯೇ? ಇದು ಸ್ಕೂಲ್ ಬಸ್ ಅಲ್ಲ ಸ್ಕೂಲೇ ಬಸ್ಸು. ಸರಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಥರಾವರಿ ಪ್ರಯತ್ನಗಳು ನಡೆಯುತ್ತಿರುವಂತೆಯೇ ನಾವುಂದ ಮಸ್ಕಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಸ್ಸಿನಂತೆ ಬಣ್ಣ ಬಳಿಯಲಾಗುತ್ತಿದೆ. ಈ ಮೊದಲು ನಾಗೂರು ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ (ಹಿಂದೂಸ್ತಾನಿ) ಶಾಲೆ ರೈಲಿನ ಮಾದರಿಯಲ್ಲಿ ಕಟ್ಟಡಕ್ಕೆ ಬಣ್ಣ ಬಳಿಯಲಾಗಿತ್ತು. ಅದೇ ರೀತಿ ಚಿಕ್ಕಮಗಳೂರಿನ ಕೊಪ್ಪದ ಸರಕಾರಿ ಶಾಲೆಯನ್ನು ರೈಲಾಗಿ ಸಲಾಗಿತ್ತು.
ಬಸ್ ಹಾಗೂ ಕೃಷಿ
ಶಾಲೆ ಕಟ್ಟಡವನ್ನು ಸಂಪೂರ್ಣ ಬಸ್ ಮಾದರಿಯಲ್ಲಿ ಚಿತ್ರಿಸಲಾಗುತ್ತಿದೆ. ಕಿಟಕಿಗಳು, ಬಾಗಿಲು, ಚಕ್ರ ಹೀಗೆ 3ಡಿ ಮಾದರಿಯಲ್ಲಿವೆ. ಚಾಲಕ, ಶಾಲಾ ಮಕ್ಕಳನ್ನು ಕೂಡಾ ಚಿತ್ರಿಸಲಾಗಿದ್ದು ಬಸ್ ನೋಂದಣಿ ಸಂಖ್ಯೆ ಹಾಕುವ ನಂಬರ್ ಪ್ಲೇಟಿನಲ್ಲಿ ಶಾಲಾ ಡಯಾಸ್ ನಂಬರ್ ಹಾಕಲಾಗಿದೆ. ಇದರೊಂದಿಗೆ ಸರ್ವ ಶಿಕ್ಷಣ ಅಭಿಯಾನ ವತಿಯಿಂದ ನಿರ್ಮಾಣವಾದ ಕಟ್ಟಡದ ಗೋಡೆಗಳಲ್ಲಿ ಕರಾವಳಿ ಪ್ರಾಂತ್ಯದ ಕೃಷಿ ಚಟುವಟಿಕೆಗಳ ಮಾಹಿತಿ ನೀಡುವ ಉಳುಮೆ, ಬಿತ್ತನೆ, ಭತ್ತ ನೆಡುವ ಚಿತ್ರ, ಬಯಲುಸೀಮೆಯ ಕೃಷಿ ಚಟುವಟಿಕೆಗಳ ಚಿತ್ರಗಳಿವೆ.
ಕಲಾಶಿಕ್ಷಕರೇ ಕಲಾವಿದರು
ಶಾಲೆಗೆ ಬಸ್ಸಿನ ಬಣ್ಣ ಬಳಿಯುವವರು ಕಲಾಶಿಕ್ಷಕರೇ. ಉಪ್ಪುಂದ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಚಿತ್ರಕಲಾ ಶಿಕ್ಷಕ ಕಾಳಿದಾಸ ಬಿ. ಬಡಿಗೇರ್ ಹಾಗೂ ನಾವುಂದ ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ಕಲಾಶಿಕ್ಷಕ ಈರಯ್ಯ ಹಿರೇಮಠ್ ಅವರು ಪ್ರಧಾನ ಚಿತ್ರಕಾರರು. ಇವರಿಗೆ ನಾವುಂದ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಶ್ರೀಕಾಂತ್ ಉಪ್ರಳ್ಳಿ ಹಾಗೂ ಹಟ್ಟಿಯಂಗಡಿಯ 10ನೇ ತರಗತಿ ವಿದ್ಯಾರ್ಥಿ ಸಿದ್ದಲಿಂಗಯ್ಯ ಸಹಾಯ ಮಾಡುತ್ತಿದ್ದಾರೆ. ಬಣ್ಣಗಾರಿಕೆಗೆ 10 ದಿನಗಳು ಬೇಕಾಗಬಹುದೆಂದು ಅಂದಾಜಿಸಲಾಗಿದೆ.
ಕಲಾವಿದ ಬಡಿಗೇರ್
ಯಕ್ಷಗಾನ ಪ್ರಿಯ ಕೆ.ಬಿ.ಬಡಿಗೇರ್ ಅವರು ವಂಡ್ಸೆ ಶಾಲೆಯಲ್ಲಿದ್ದಾಗ ಮಕ್ಕಳಿಗೆ ಕಲಿಸಲೆಂದು ಯಕ್ಷಭಾರತಿ ಕಲಾಕೇಂದ್ರ ಆರಂಭಿಸಿದರು. ಸಂಗೀತ ಶಿಕ್ಷಕರನ್ನು ನೇಮಿಸಿ, ಸಂಗೀತ, ಕುಂಚ, ನೃತ್ಯ ಕಲಿಸುತ್ತಿದ್ದರು. ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರ ತಂಡದಲ್ಲಿ ಯಕ್ಷ ಗಾನ ನಾಟ್ಯ ಕುಂಚ ವೈಭವದಲ್ಲಿ ಭಾಗವಹಿಸಿ ಅದರಲ್ಲಿ ದೊರೆತ ಗೌರವ ಸಂಭಾವನೆಯನ್ನು ಯಕ್ಷಭಾರತಿಗೆ ನೀಡುವ ಪರಿಪಾಠ ಆರಂಭಿಸಿ ಈಗಲೂ ಮುಂದುವರಿಸುತ್ತಿದ್ದಾರೆ. ಪತ್ರಿಕೆಗಳಿಗೆ ವ್ಯಂಗ್ಯಚಿತ್ರ, ವ್ಯಕ್ತಿಚಿತ್ರ ಬರೆಯುವ ಇವರು ಬಿಡುವಿನ ಅವಧಿಯಲ್ಲಿ ಮಕ್ಕಳನ್ನು ಕೂಡಿಕೊಂಡು ಕಲಾ ಹಂಚೋಣ ನಡೆಸುತ್ತಿದ್ದಾರೆ.
ಕಲಿಕಾಪೂರಕ ವಾತಾವರಣ
21 ವರ್ಷದ ಈ ಶಾಲೆಯಲ್ಲಿ 5 ತರಗತಿಗಳಲ್ಲಿ 39 ವಿದ್ಯಾರ್ಥಿಗಳಿದ್ದಾರೆ. ಸಹಶಿಕ್ಷಕಿ ಸುಲೇಖಾ ಹಾಗೂ ನಮ್ಮ ಒತ್ತಾಸೆಯಿಂದ ಸಮಾಜದವರ ಸಹಕಾರದಲ್ಲಿ ಕುಂಚಗಾರಿಕೆ ನಡೆಯುತ್ತಿದೆ. ಸೌರಮಂಡಲ, ಕೃಷಿ ಸೇರಿದಂತೆ ಮಕ್ಕಳಿಗೆ ಕಲಿಕಾಪೂರಕ ವಾತಾವರಣಕ್ಕಾಗಿ ಇದನ್ನು ಮಾಡುತ್ತಿದ್ದೇವೆ.
– ಗಣಪ ಬಿಲ್ಲವ, ಮುಖ್ಯೋಪಾಧ್ಯಾಯರು
ಪ್ರಾಯೋಗಿಕ ಕಲಿಕೆ
ನಮ್ಮೊಂದಿಗಿರುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಗೆ ಉತ್ತಮ ಅವಕಾಶ ದೊರೆತಂತಾಗಿದೆ. ಇಲ್ಲಿನ ಮಕ್ಕಳಿಗೂ ಚಿತ್ರಗಳು ಕಲಿಕೆಗೆ ಪೂರಕವಾಗಿವೆ. ಇದನ್ನು ಕಲಾಪ್ರೀತಿಯಿಂದ ಮಾಡುತ್ತಿದ್ದು, ಹಣಕ್ಕೆ ಬೇಡಿಕೆ ಇಟ್ಟಿಲ್ಲ. ರೈಲು ಮಾದರಿ ಶಾಲಾ ಕಟ್ಟಡ ನೋಡಿ ಮುಖ್ಯಶಿಕ್ಷಕರು ಬೇಡಿಕೆ ಇಟ್ಟಿದ್ದರು. ಆದರೆ ಕಟ್ಟಡ ಸಣ್ಣದಾದ್ದರಿಂದ ಬಸ್ಸಿನ ರಚನೆಗೆ ಮುಂದಾದೆವು.
– ಕೆ.ಬಿ.ಬಡಿಗೇರ್, ಕಲಾಶಿಕ್ಷಕರು
ಅಮ್ಮನ ಬಳಿ ಹಠ ಹಿಡಿದಿತ್ತು
ಶಾಲೆ ಸಮೀಪ ವಠಾರವನ್ನು ನಮ್ಮ ತಂಡ ಶುಚಿಗೊಳಿಸಿ ಕಲಿಕಾ ವಾತಾವರಣ ನಿರ್ಮಿಸಿದೆ. ಸರಕಾರಿ ಶಾಲೆಗೆ ಇನ್ನಷ್ಟು ಮಕ್ಕಳ ಸೇರ್ಪಡೆಯಾಗಬೇಕು. ಇಲ್ಲಿನ ಬಸ್ಸಿನ ಚಿತ್ರ ನೋಡಿ ಮಗುವೊಂದು ನಮ್ಮ ಎದುರೇ “ನಾನು ಇದೇ ಶಾಲೆಗೆ ಸೇರುತ್ತೇನೆ’ ಎಂದು ಅಮ್ಮನ ಬಳಿ ಹಠ ಹಿಡಿದಿತ್ತು.
– ಗಿರೀಶ್ ಎಸ್. ಖಾರ್ವಿ, ಸ್ಥಳೀಯರು
— ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.