ಜಾತ್ಯತೀತ ಪಕ್ಷಗಳ ಹೊಂದಾಣಿಕೆ: ಸಿಎಂ
Team Udayavani, Apr 22, 2017, 10:16 AM IST
ಉಡುಪಿ: ಎಲ್ಲ ಜಾತ್ಯತೀತ ನೀತಿಯ ಪಕ್ಷಗಳು ಕೋಮುವಾದಿ ಶಕ್ತಿಗಳ ವಿರುದ್ಧ ಮತಗಳ ವಿಭಜನೆಯಾಗದಂತೆ ನೋಡಿಕೊಳ್ಳಲು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಆದರೆ ಕರ್ನಾಟಕದ ಸ್ಥಿತಿಯೇ ಬೇರೆ, ಕರ್ನಾಟಕ ಉತ್ತರಪ್ರದೇಶವಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಬಾರಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಡ್ಲುಪೇಟೆ, ನಂಜನಗೂಡು ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿಸದೆ ಇರುವುದೂ ಕಾಂಗ್ರೆಸ್ ಜಯ ಗಳಿಸಲು ಒಂದು ಕಾರಣ. ಆದರೆ ಅದೇ ಕಾರಣವಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು. ಶತ್ರುವೂ ಅಲ್ಲ, ಮಿತ್ರರೂ ಅಲ್ಲ ಇಂದು ನಿಮ್ಮೊಂದಿಗೆ ದೇವೇಗೌಡರು ಬರುವುದಿತ್ತು. ಈಗ ದೇವೇಗೌಡರ ಮೇಲೆ ಪ್ರೀತಿ ಹೆಚ್ಚಾಗಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನಿಮ್ಮ ಮೇಲೂ ಪ್ರೀತಿ ಇದೆ. ರಾಜಧಿಕೀಯದಲ್ಲಿ ಯಾರೂ ಖಾಯಂ ಶತ್ರುಗಳಿಲ್ಲ, ಯಾರೂ ಖಾಯಂ ಮಿತ್ರರಿಲ್ಲ. ದೇವೇಗೌಡರು ಬರುಧಿವುಧಿದಿತ್ತು. ಅವರಿಗೆ ಬೇರೊಂದು ಕಾರ್ಯಕ್ರಮವಿದ್ದ ಕಾರಣ ಬರಲು ಸಾಧ್ಯವಾಗಲಿಲ್ಲ ಎಂದರು.
ಶೀಘ್ರ ಸಂಪುಟ ವಿಸ್ತರಣೆ
ವೀರಶೈವರು ಇತ್ತೀಚಿನ ಚುನಾಧಿವಣೆಯಲ್ಲಿ ಕಾಂಗ್ರೆಸ್ ಕಡೆ ಒಲವು ತೋರಿಸಿದ್ದರಿಂದ ಅವಧಿರನ್ನು ಸಚಿವ ಸಂಪುಟ ಸೇರ್ಪಡೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಹೈಕಮಾಂಡ್ ಸೂಚನೆ ನೀಡಧಿಲಿದೆ. ಆದಷ್ಟು ಶೀಘ್ರ ಸಂಪುಟ ವಿಸ್ತರಿಸಲಾಗುವುದು. ವಿಧಾನ ಪರಿಷತ್ ಸ್ಥಾನಕ್ಕೂ ಹೈಕಮಾಂಡ್ ಸೂಚನೆ ನೀಡಲಿದೆ. ಮೊನ್ನೆಯ ಚುನಾವಣೆಯಲ್ಲಿ ಕೇವಲ ವೀರಶೈವರು ಮಾತ್ರವಲ್ಲ , ಎಲ್ಲ ಜಾತಿಯವರೂ ಮತ ಹಾಕಿದ್ದಾರೆ ಎಂದು ಹೇಳಿದರು.
ಪುನಶ್ಚೇತನ ಕಷ್ಟ
ಸಕ್ಕರೆ ಕಾರ್ಖಾನೆ ಲಾಭಧಿದಾಯಕಧಿವಾಗಿ ನಡೆಯುತ್ತಿಲ್ಲ. ಪಾಂಡವಧಿಪುರಧಿದಲ್ಲಿ ಕಬ್ಬಿನ ಇಳುವರಿ ಶೇ. 7-8, ಬೆಳಗಾವಿಧಿಯಲ್ಲಿ ಶೇ. 11, ಮೈಸೂರಿನಲ್ಲಿ 9.5-10 ಇದೆ. ಹೀಗಿರುವಾಗ ಬ್ರಹ್ಮಾವರಧಿದಲ್ಲಿ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದು ಕಷ್ಟ ಎಂದರು. ವಾರಾಹಿ ನೀರಾವರಿ ಯೋಜನೆ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ.
ಬಿಜೆಪಿಯಲ್ಲಿ ಜಗಳ ಶುರುವಾಗಿದೆಯಲ್ಲ ಎಂದಾಗ ಬಿಜೆಪಿಯಲ್ಲಿ ಯಾವತ್ತು ಒಗ್ಗಟ್ಟು ಇತ್ತು? ಅಲ್ಲಿ ಅಶಿಸ್ತೇ ಶಿಸ್ತು. ಈಶ್ವರಪ್ಪ ಬಣದವರು ಯಡಿಯೂರಪ್ಪನವರ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದಾರೆ ಎಂದರು. ಬಿಜೆಪಿಯ 150 ಸ್ಥಾನಗಳ ಟಾರ್ಗೆಟ್ ಕುರಿತು ಮಾತನಾಡಿದ ಸಿದ್ದರಾಮಯ್ಯ, ಯಾರ್ರೀ ಟಾರ್ಗೆಟ್ ಕೊಟ್ಟದ್ದು. ಜನರೇನು ಕೊಟ್ಟಿದ್ದಾರಾ? ಜನರ ಆಶೀರ್ವಾದ ಇದ್ದರೆ ಮಾತ್ರ ಗೆಲ್ಲುವುದು ಎಂದರು.
ಡಿಸಿ ಮೇಲೆ ಹಲ್ಲೆ: ನಿರ್ದಾಕ್ಷಿಣ್ಯ ಕ್ರಮ
ಜಿಲ್ಲಾಧಿಕಾರಿ ಮೇಲೆ ಮರಳು ಮಾಫಿಯಾ ನಡೆಸಿದ ಹಲ್ಲೆ ಪ್ರಕರಣಧಿದಲ್ಲಿ ಆರೋಪಿಗಳು ಎಷ್ಟೇ ಪ್ರಬಲಧಿರಾದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ರಕ್ಷಿಧಿಸುವುದಿಲ್ಲ. ಬಂಧನವಾಗದೆ ಉಳಿಧಿದವರನ್ನೂ ಬಂಧಿಸುತ್ತೇವೆ.
ಕರಾವಳಿಗೆ ಪ್ರತ್ಯೇಕ ಮರಳು ನೀತಿ
ಕರಾವಳಿಯ ಮರಳು ಸಮಸ್ಯೆ ನೀಗಿಸಲು ಪ್ರತ್ಯೇಕ ಮರಳು ನೀತಿ ಮಾಡುತ್ತೇವೆ.
ಕೆಂಪು ದೀಪ
ಕೆಂಪು ದೀಪದ ಬಗ್ಗೆ ಕೇಂದ್ರ ಸರಕಾರ ನಿರ್ಧಾರ ತಳೆದಿದೆ. ನಾವು ಪರಿಶೀಲನೆ ಮಾಡುತ್ತಿದ್ದೇವೆ. (ಮುಖ್ಯಧಿಮಂತ್ರಿಗಳು ಏರಿದ ಕಾರಿನಲ್ಲಿ ಕೆಂಪು ದೀಪ ಇರಲಿಲ್ಲ)
ದೇವರು- ಧರ್ಮ…
ನಾನು ದೇವರು, ಧರ್ಮದ ವಿರೋಧಿಯಲ್ಲ. ಆದರೆ ಪದೇ ಪದೇ ದೇವರ ಮೊರೆ ಹೋಗುವವನಲ್ಲ, ದೇವರನ್ನು ಎಲ್ಲೆಲ್ಲೋ ಹುಡುಕಿಕೊಂಡು ಹೋಗುವವನಲ್ಲ. ನಮ್ಮೂರ ದೇವರು ನನಗೆ ಸಾಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hindu Temple: ಸಂಭಲ್ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.