ಮಾತೃಭಾಷಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಅಗತ್ಯ: ಶೋಭಾ ಕರಂದ್ಲಾಜೆ
ಬೇಳೂರು: ನೆರವಿನ ಕೈಗಳು ಸಮಾರಂಭ ಉದ್ಘಾಟನೆ
Team Udayavani, Jun 11, 2019, 6:00 AM IST
ತೆಕ್ಕಟ್ಟೆ: ಪೋಷಕರು ಮಕ್ಕಳಿಗೆ ಮಾತೃಭಾಷಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾದ ಅನಿವಾರ್ಯತೆ ಇದೆ. ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸ್ವಂತಿಕೆ ಇರುತ್ತದೆ ಈ ನಿಟ್ಟಿನಲ್ಲಿ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಕಲಿಕಾ ವಾತಾವರಣ ನಿರ್ಮಿಸಬೇಕಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಬೇಳೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತ್ ಬೇಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸಮನ್ವಯಾಧಿಕಾರಿ ಕಚೇರಿ ಕುಂದಾಪುರ ಹಾಗೂ ಸರಕಾರಿ ಪ್ರೌಢಶಾಲೆ ಬೇಳೂರು, ಸರಕಾರಿ ಪ್ರಾಥಮಿಕ ಶಾಲೆ ಬೇಳೂರು, ಬಡಾಬೆಟ್ಟು, ಗುಳ್ಳಾಡಿ ಶಾಲೆಗಳ ಸಹಯೋಗದೊಂದಿಗೆ ನೆರವಿನ ಕೈಗಳು ಬೇಳೂರು ಗ್ರಾ.ಪಂ.ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವಂತೆ ಉಚಿತ ಶಾಲಾ ಬಸ್ ಹಾಗೂ ಕುಡಿಯುವ ನೀರಿನ ಘಟಕ ಹಸ್ತಾಂತರ ಮತ್ತು ಉಚಿತ ನೋಟ್ ಪುಸ್ತಕ , ಶಾಲಾ ಬ್ಯಾಗ್ , ವಾಟರ್ ಕ್ಯಾನ್ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಪ್ರತಿಭೆಯನ್ನು ಗುರುತಿಸುವ ಜತೆಗೆ ಸರಕಾರದ ಸಹಕಾರವೂ ಕೂಡಾ ಅತೀ ಅಗತ್ಯ. ಈ ನಿಟ್ಟಿನಲ್ಲಿ ಮಾದರಿ ಕನ್ನಡ ಶಾಲೆಯನ್ನಾಗಿಸುವ ನಿಟ್ಟಿನಿಂದ ಸಮಾಜದ ಶಕ್ತಿಯನ್ನು ಜತೆಯಾಗಿ ಕೊಂಡೊಯ್ಯುವ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಚುನಾವಣೆಯಲ್ಲಿ ಪಕ್ಷದ ಚಿಹ್ನೆಯಲ್ಲಿ ಆಯ್ಕೆಯಾಗುತ್ತೇವೆ. ಆಯ್ಕೆಯಾದ ಮೇಲೆ ನಾವು ಪಕ್ಷವಲ್ಲ ಬದಲಾಗಿ ಜನರ ಪ್ರತಿನಿಧಿಗಳು. ಆದ್ದರಿಂದ ಗ್ರಾಮದಲ್ಲಿರುವ ಕನ್ನಡ ಶಾಲೆಯನ್ನು ಮಾದರಿಯಾಗಿಸುವ ನಿಟ್ಟಿನಿಂದ ರಾಜಕೀಯ ರಹಿತವಾಗಿ ಅಭಿವೃದ್ಧಿ ಮಾಡುವತ್ತ ಚಿಂತನೆ ನಡೆಸಬೇಕು ಎಂದರು.
ಮುಖ್ಯ ಅತಿಥಿ ಶೃಂಗೇರಿ ಗೌರಿಗದ್ದೆ ದತ್ತಾತ್ರೇಯ ಪೀಠದ ಶ್ರೀ ವಿನಯ ಗುರೂಜಿ ಮಾತನಾಡಿ, ಮಕ್ಕಳಲ್ಲಿ ಶಿಸ್ತು ಬಂದರೆ ಮುಂದೆ ದೇಶದಲ್ಲಿ ಶಿಸ್ತು ಬರುತ್ತದೆ ಎನ್ನುವ ನಂಬಿಕೆ ನಮ್ಮದು. ಗ್ರಾಮದಲ್ಲಿ ಜ್ಞಾನದ ಕಿಡಿಯನ್ನು ಹಚ್ಚಿದ್ದೇವೆ. ಇಂದು ಬೇಳೂರು ಗ್ರಾಮ ಬೆಳಕಿನ ಗ್ರಾಮವಾಗುತ್ತಿದೆ. ಕಾಣದ ದೇವರನ್ನು ಕಾಣಲು ಪ್ರಯತ್ನ ಮಾಡೋಣ ಎಂದರು.
ಮಾನವನಿಗೆ ಸಮಾಧಾನವನ್ನು ಕೊಡುವ ದೇವಸ್ಥಾನ ಶಾಲೆ, ಯಾರಿಗೆ ಅವನ ಅಸ್ತಿತ್ವದ ಅರಿವಾಗಬೇಕೋ ಅವರಿಗೆ ಜ್ಞಾನದ ಬೆಳಕು ಅಗತ್ಯ. ಸರಕಾರಿ ಶಾಲೆಗಳ ಇಂತಹ ದುಸ್ಥಿತಿಗೆ ಪೋಷಕರಲ್ಲಿರುವ ಮನಸ್ಥಿತಿಯೇ ಕಾರಣ ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳು ಸಹಕಾರಿ ಶಾಲೆಗಳಾಗಬೇಕಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸರಕಾರಿ ಶಾಲೆಗಳು ವ್ಯವಸ್ಥಿತವಾಗಿ ನಡೆಯಬೇಕು ಎನ್ನುವ ಹಂಬಲ ನಮ್ಮದು. ಹೀಗೇ ಮುಂದವರಿದಲ್ಲಿ ಇನ್ನು ಮೂರು ವರ್ಷದಲ್ಲಿ ಏಳು ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಉಚಿತ ಬಸ್ ಕೊಡುಗೆಯಾಗಿ ನೀಡಿದ ದಾನಿ ಅಕ್ಕಯ್ಯ ಎನ್. ಶೆಟ್ಟಿ ಬಾಳ್ಕಟ್ಟುಮನೆ, ಬಯಲ ಸಭಾಭವನ ಕೊಡುಗೆಯಾಗಿ ನೀಡಿದ ಆನಂದ ಸಿ. ಕುಂದರ್, ಬೇಳೂರು ಮಡಿಯಾಣ ಮನೆಯವರನ್ನು ಹಾಗೂ ಶಾಲಾ ಬ್ಯಾಗ್ ಮತ್ತು ವಾಟರ್ ಕ್ಯಾನ್ ಕೊಡುಗೆಯಾಗಿ ನೀಡಿದ ಡಾ| ಬಿ.ಆರ್.ಶೆಟ್ಟಿ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆಯಾಗಿ ನೀಡಿದ ಡಾ| ಬಿ.ಆರ್.ಶೆಟ್ಟಿ, ನೋಟ್ ಬುಕ್ ಕೊಡುಗೆಯಾಗಿ ನೀಡಿದ ಬೇಳೂರು ಕೇದಿಗೆ ಮನೆಯವರು, ಮಹೇಶ್ ಶೆಟ್ಟಿ ಹಾಗೂ ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.ಬೇಳೂರು ಗ್ರಾ.ಪಂ.ಅಧ್ಯಕ್ಷ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದರು.
ಜಿ.ಪಂ. ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ರಾಜ್ಯ ಬಿಜೆಪಿ ಕಾರ್ಯದರ್ಶಿ ಡಾ| ಬಿ.ಆರ್. ಶೆಟ್ಟಿ, ಬೆಂಗಳೂರಿನ ಶ್ರೀ ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಕಂಪೆನಿಯ ಪ್ರಶಾಂತ್ ಶೆಟ್ಟಿ, ಕಲ್ಪತರು ಪವರ್ ಟ್ರಾನ್ಸ್‌ಮಿಷನ್ ಲಿ. ಬೆಂಗಳೂರು ಇದರ ಡೆಪ್ಯೂಟಿ ಜನರಲ್ ಮ್ಯಾನೇಜರ್ ಭಾಸ್ಕರ ಮೊಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸದಾನಂದ ಬೈಂದೂರು, ಬೇಳೂರು ಗ್ರಾ.ಪಂ.ಸದಸ್ಯರು ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು ಹಾಗೂ ವಿವಿಧ ಶಾಲಾ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಸ್ವಾಗತಿಸಿ, ಬೇಳೂರು ಗ್ರಾ.ಪಂ.ಅಧ್ಯಕ್ಷ ಕರುಣಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಐಆರ್‌ಟಿಇ ಸೀತಾರಾಮ ಶೆಟ್ಟಿ , ಶಿಕ್ಷಕಿ ಸವಿತಾ ಆಚಾರ್ ನಿರೂಪಿಸಿದರು. ಗ್ರಾ.ಪಂ. ಸದಸ್ಯೆ ಪ್ರಭಾವತಿ ಟಿ.ಶೆಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
MUST WATCH
ಹೊಸ ಸೇರ್ಪಡೆ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.