ಮಟ್ಟುಗುಳ್ಳ ಗದ್ದೆಗೆ ನುಗ್ಗಿದ ಪಿನಾಕಿನಿ ಉಪ್ಪು ನೀರು
Team Udayavani, Jan 9, 2021, 6:00 AM IST
ಕಟಪಾಡಿ: ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಮಟ್ಟುವಿನಲ್ಲಿ ಪಿನಾಕಿನಿ ಹೊಳೆ ಉಕ್ಕಿದ್ದು ಸನಿಹದ ಮಟ್ಟುಗುಳ್ಳ ಗದ್ದೆಗಳಿಗೆ ನುಗ್ಗಿದೆ. ಇದರಿಂದ ಬೆಳೆ ನಷ್ಟವಾಗುವ ಭೀತಿ ಬೆಳೆಗಾರರನ್ನು ಕಾಡಿದೆ.
ಕಳೆದ ನವೆಂಬರ್‌ನಲ್ಲೂ ಇದೇ ರೀತಿ ಪರಿಸ್ಥಿತಿಯಿಂದ ರೈತರು ನಷ್ಟ ಅನುಭವಿಸಿದ್ದರು. ಆದರೆ ಮತ್ತೆ ಮಲಿcಂಗ್ ಶೀಟ್ ಅಳವಡಿಸಿ ಸಸಿ ನಾಟಿ ಮಾಡಿ, ಗೊಬ್ಬರ ಹಾಕಿ ಬೆಳೆ ಬೆಳೆದಿದ್ದರು. ಅಲ್ಪ ಬೆಳೆ ಮಾರಾಟ ಮಾಡಿದ್ದು, ಹೆಚ್ಚಿನ ಬೆಳೆ ಕೈಗೆ ಬರುವ ಹೊತ್ತಿಗೆ ಮತ್ತೆ ಹೊಳೆ ಉಪ್ಪು ನೀರು ನುಗ್ಗಿದೆ. ಇದರೊಂದಿಗೆ ಕೆಲ ಗದ್ದೆಗಳಲ್ಲಿ ಹೆಸರು, ಉದ್ದು, ಆವಡೆ, ಜೋಳ, ಕಲ್ಲಂಗಡಿ ಸಹಿತ ಇತರ ದವಸ ಧಾನ್ಯ, ತರಕಾರಿ ಬೆಳೆದಿದ್ದು ಹಾನಿಯಾಗಿದೆ ಎಂದು ಬೆಳೆಗಾರರಾದ ನಾರಾಯಣ ಟಿ. ಬಂಗೇರ, ರವಿ ಶೇರಿಗಾರ, ಯಶೋಧರ ಕೋಟ್ಯಾನ್ ಮಟ್ಟು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಬಂದರೂ ಪರಿಹಾರ ಬಂದಿಲ್ಲ :
ಕಳೆದ ನವೆಂಬರ್‌ನಲ್ಲಾದ ಬೆಳೆ ಹಾನಿ ಬಗ್ಗೆ ಪರಿಶೀಲನೆಗೆ ಖುದ್ದು ಜಿಲ್ಲಾಧಿಕಾರಿ, ಶಾಸಕರು, ಅಧಿಕಾರಿಗಳು ಬಂದಿದ್ದರು. ಪರಿಹಾರದ ಭರವಸೆಯನ್ನೂ ನೀಡಿದ್ದರು. ಆದರೆ ಈವರೆಗೆ ಚಿಕ್ಕಾಸು ಪರಿಹಾರ ದೊರೆತಿಲ್ಲ ಮಟ್ಟುಗುಳ್ಳ ಬೆಳೆಗಾರ ಸಂತೋಷ್ ಮಟ್ಟು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.