Malpe; ಬಲರಾಮನ ಪ್ರತಿಷ್ಠೆ ಹಿಂದೂ ರಾಷ್ಟ್ರದ ಪ್ರೇರಕ ಶಕ್ತಿಯಾಗಲಿ: ಪಲಿಮಾರು ಶ್ರೀ
ಶ್ರೀ ವಡಭಾಂಡ ಬಲರಾಮ ದೇವಸ್ಥಾನ ಬ್ರಹ್ಮಕಲಶೋತ್ಸವ
Team Udayavani, Mar 21, 2024, 1:19 AM IST
ಮಲ್ಪೆ: ಊರಿನ ದೇವಸ್ಥಾನಗಳು ನಮ್ಮದೇ ಎಂಬ ಭಾವನೆ ಎಲ್ಲರಲ್ಲೂ ಸಮೃದ್ಧವಾಗಿ ಮೂಡಬೇಕು. ಆಯೋದ್ಯೆಯಲ್ಲಿ ರಾಮ ದೇವಸ್ಥಾನವು ಹೇಗೆ ಹಿಂದೂ ರಾಷ್ಟ್ರವಾಗಲು ಕಾರಣವಾಗಿದೆಯೋ ಅದೇ ರೀತಿ ವಡಭಾಂಡೇಶ್ವರದಲ್ಲಿ ಬಲರಾಮ ದೇವರ ಪ್ರತಿಷ್ಠೆಯೂ ಹಿಂದೂ ರಾಷ್ಟ್ರಕ್ಕೆ ಕಾರಣವಾಗಲಿ. ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಂಡ ಮಾತೆಯರು, ಯುವಜನತೆ ಸೇರಿದಂತೆ ಎಲ್ಲರಿಗೂ ದೇವರ ಅನುಗ್ರಹ ದೊರೆಯಲಿ ಎಂದು ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.
ಅವರು ಮಂಗಳವಾರ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆದ ಹೊರಕಾಣಿಕೆ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಅಪೂರ್ವ ಕಾರ್ಯ
ಧಾರ್ಮಿಕ ಚಿಂತಕ ಕೆ.ಎಲ್. ಕುಂಡಂತಾಯ ಮಾತನಾಡಿ, ಬಲರಾಮ ದೇವಸ್ಥಾನದ ಜೀರ್ಣೋದ್ಧಾರ ಕೆಲಸದಲ್ಲಿ ಪ್ರಾಚೀನತೆಗೆ ಆಧಾರವಾಗಬಲ್ಲ ಪೂರ್ವದ ವಿನ್ಯಾಸ, ಇತಿಹಾಸ, ಒಟ್ಟಿನಲ್ಲಿ ಮೂಲ ಸ್ವರೂಪವನ್ನು ಇಟ್ಟುಕೊಂಡು ಯಥಾವತ್ತಾಗಿ ನಿರ್ಮಿಸಲಾಗಿದೆ. ಕೆಲವೊಂದು ಭಿನ್ನಗೊಂಡ ಶಿಲೆಯ ಭಾಗಗಳನ್ನು ಹೊಸತಾಗಿ ನಿರ್ಮಿಸಿ ಮರುಜೋಡಣೆ ಮಾಡಲಾಗಿದೆ ಇದು ಬಹಳ ಅಪರೂಪದ ಕೆಲಸವಾಗಿದೆ ಎಂದರು.
ದೇವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಶ್ರೀಶ ಭಟ್ ಕಡೆಕಾರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಇಸ್ಕಾನ್ ಮಂಗಳೂರು ವಿಭಾಗದ ಉಪಾಧ್ಯಕ್ಷ ಸನಂದನದಾಸ್ ಪ್ರಭು, ಮಲ್ಪೆ ಮತೊÕéàದ್ಯಮಿ ರಮೇಶ್ ಕೋಟ್ಯಾನ್, ಉದ್ಯಮಿಗಳಾದ ದಯಾನಂದ ಶೆಟ್ಟಿ ಕೊಜಕುಳಿ, ಅಶೋಕ್ ಶೆಟ್ಟಿ ಕೊಜಕುಳಿ, ಉಡುಪಿ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್, ವಡಭಾಂಡೇಶ್ವರ ಭಕ್ತವೃಂದದ ಅಧ್ಯಕ್ಷ ಹರೀಶ್ ಕಾಂಚನ್, ದೇವಸ್ಥಾನದ ಪ್ರಧಾನ ತಂತ್ರಿ ಸುಬ್ರಹ್ಮಣ್ಯ ತಂತ್ರಿ, ಮೊಕ್ತೇಸರ ಟಿ. ಶ್ರೀನಿವಾಸ ಭಟ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗರಾಜ ಮೂಲಿಗಾರ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಜಿ. ಕೊಡವೂರು, ಕಾರ್ಯದರ್ಶಿ ಜನಾರ್ದನ ಕೊಡವೂರು, ವೇದಿಕೆ ಸಂಚಾಲಕರಾದ ವಿಕ್ರಮ ಟಿ. ಶ್ರಿಯಾನ್, ಬಾಲಕೃಷ್ಣ ಮೆಂಡನ್ ಉಪಸ್ಥಿತರಿದ್ದರು.
ದೇವಸ್ಥಾನದ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಶಶಿಧರ ಎಂ. ಅಮೀನ್ ಸ್ವಾಗತಿಸಿದರು. ಡಾ| ವಂಶಿಕೃಷ್ಣ ಆಚಾರ್ಯ ಪುರೋಹಿತ್ ನಿರೂಪಿಸಿ, ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಸುನೀತಾ ಗಿರೀಶ್ ಕೆದ್ಲಾಯ ಅವರಿಂದ ವೀಣಾ ವಾದನ, ಮಂದಾರ್ತಿ ಸಮರ್ಪಣ ಮತ್ತು ತಂಡದವರಿಂದ ಭರತನಾಟ್ಯ ನಡೆಯಿತು.
ಬಲರಾಮ ಕೃಷಿಯ ಪ್ರತೀಕ
ಕೃಷಿ ಪ್ರಧಾನ ದೇಶ ನಮ್ಮದು. ಉಳುಮೆ ಮಾಡುವ ನೇಗಿಲು, ಭತ್ತ ಕುಟ್ಟುವ ಒನಕೆ ಈ ಎರಡೂ ಆಯುಧ ಗಳು ಕೃಷಿಗೆ ಸಂಬಂಧಿಸಿದವು. ಬಲರಾಮನ ಕೈಯಲ್ಲಿರುವ ಆಯುಧ ನೇಗಿಲು ಮತ್ತು ಒನಕೆ, ಇಂದು ಬಲರಾಮನ ಆಯುಧದ ಪ್ರತೀಕವಾಗಿ ತಂದ ಭತ್ತ ಮತ್ತು ತರಕಾರಿಗಳು ಹೊರೆಕಾಣಿಕೆ ಮೂಲಕ ದೇವರಿಗೆ ಸಮರ್ಪಿತ ವಾಗಿವೆ. ಕೃಷಿ ಸಂಸ್ಕೃತಿಯನ್ನು ಪ್ರೀತಿಸುವ ಬಲರಾಮ ನಮ್ಮ ಈ ನಾಡಿನಲ್ಲಿಯೂ ಕೃಷಿಯನ್ನು ಸಂಪದ್ಭರಿತ ವಾಗಿಸಲಿ ಎಂದು ಪಲಿಮಾರು ಶ್ರೀಗಳು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.