“ಯಾಗ, ಯಜ್ಞಾದಿಗಳಿಂದ ನಾಡು ಸಮೃದ್ಧವಾಗಲಿ’
Team Udayavani, Dec 26, 2019, 12:50 AM IST
ಶಿರ್ವ: ಗ್ರಹಣ ದುಷ್ಪರಿ ಣಾಮಗಳನ್ನು ಬೀರಬಾರದು ಎಂಬ ಉದ್ದೇಶದಿಂದ ಯಾಗ ನಡೆಸುತ್ತಿರುವುದು ಸ್ವಾಗತಾರ್ಹ. ಯಜ್ಞ ಯಾಗಾದಿಗಳಿಂದ ಉತ್ತಮ ವಾತಾವರಣ ಸೃಷ್ಟಿಯಾಗಿ ಶಾಂತಿ ನೆಲೆಸಲಿ, ನಾಡು ಸಮೃದ್ಧವಾಗಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಉಡುಪಿ ಜಿಲ್ಲೆ ಕಾಪು ತಾಲೂಕಿನ ಕುತ್ಯಾರು ಯಾಗ ಸಂಘಟನ ಸಮಿತಿಯ ಆಶ್ರಯದಲ್ಲಿ ಕುತ್ಯಾರು ವಿದ್ಯಾದಾಯಿನಿ ಹಿ.ಪ್ರಾ. ಶಾಲೆಯ ಪ್ರಾಂಗಣದಲ್ಲಿ ಐದು ದಿನಗಳ ಕಾಲ ಲೋಕ ಕಲ್ಯಾಣಾರ್ಥ ಜರಗಲಿರುವ ಸಹಸ್ರಮಾನ ನವಕುಂಡ ಶ್ರೀ ಮಹಾಗಣಪತಿ ಅಥರ್ವಶೀರ್ಷ ಮಹಾಯಾಗ, ಸನಾತನ ಧರ್ಮ ಸಂಸತ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಯಾಗ ಸಂಕಲ್ಪದ ಬಳಿಕ ಮುಖ್ಯಮಂತ್ರಿ ಗೋಪೂಜೆ ನಡೆಸಿ ದರು. ಬಳಿಕ ವೇದಿಕೆಯಲ್ಲಿ ಅಟಲ್ ಜನ್ಮಜಯಂತಿಯ ಪ್ರಯುಕ್ತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಗೌರವಾರ್ಪಣೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಳುಗಳಾದ ಕುತ್ಯಾರಿನ ಪ್ರತೀಕ್ಷಾ ಕುಲಾಲ್ ಮತ್ತು ವಂದನಾ ಎಸ್. ಅವರನ್ನು ಮುಖ್ಯಮಂತ್ರಿ
ಗಳು ಗೌರವಿಸಿದರು. ಯಾಗ ಸಂಘಟನ ಸಮಿತಿಯ ವತಿ ಯಿಂದ ಮುಖ್ಯಮಂತ್ರಿಗಳನ್ನು ಗೌರವಿಸ ಲಾಯಿತು.
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರವಾಸೋ ದ್ಯಮ ಸಚಿವ ಸಿ.ಟಿ. ರವಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಲಾಲಾಜಿ ಮೆಂಡನ್, ರಘುಪತಿ ಭಟ್, ಸುನಿಲ್ ಕುಮಾರ್, ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ಕುತ್ಯಾರು ಗ್ರಾ.ಪಂ. ಅಧ್ಯಕ್ಷ ಧೀರಜ್ ಶೆಟ್ಟಿ, ಯಾಗ ಸಮಿತಿಯ ಗೌರವಾಧ್ಯಕ್ಷ ಜಿನೇಶ್ ಬಲ್ಲಾಳ್, ನಾರಾಯಣ ತಂತ್ರಿ, ಶಾಲಾ ಮುಖ್ಯ ಶಿಕ್ಷಕಿ ಶರ್ಮಿಳಾ, ಪ್ರವೀಣ್ ಆಚಾರ್ಯ ವೇದಿಕೆಯಲ್ಲಿದ್ದರು.
ಯಾಗದ ಮಹಾ ಸಂಚಾಲಕ ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಪ್ರಸ್ತಾವನೆಗೈದರು. ಕಾರ್ಯಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿದರು. ಕುತ್ಯಾರು ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕ ಅನಂತ ಮೂಡಿತ್ತಾಯ ವಂದಿಸಿದರು.
ಶಾಂತಿ, ಸುಭಿಕ್ಷೆ ನೆಲೆಸಲಿ: ಪುತ್ತಿಗೆ ಶ್ರೀ
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ನಿಸ್ವಾರ್ಥ ಕರ್ಮ ಭಗವಂತನನ್ನು ಸೇರುತ್ತದೆ. ಭಕ್ತಿ, ಶ್ರದ್ಧೆಗಳಿಂದ ದೇವರನ್ನು ಒಲಿಸಿಕೊಂಡಾಗ ಅನುಗ್ರಹ ಪ್ರಾಪ್ತಿಯಾಗಿ ಮಳೆ, ಬೆಳೆ, ಸಮೃದ್ಧಿಯುಂಟಾಗುತ್ತದೆ. ಲೋಕಕಲ್ಯಾಣಾರ್ಥ ಯಾಗದಲ್ಲಿ ಮುಖ್ಯಮಂತ್ರಿಗಳು ಭಕ್ತಿ, ಶ್ರದ್ಧೆಯಿಂದ ಭಾಗವಹಿಸಿ ಸಂಕಲ್ಪ ಮಾಡಿದ್ದು, ಅವರ ಮೂಲಕ ಲೋಕದಲ್ಲಿ ಸುಭಿಕ್ಷೆ, ಶಾಂತಿ ನೆಲೆಸುವಂತಾಗಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.