ಮರದಿಂದ ಬಿದ್ದು ಹಾಸಿಗೆ ಹಿಡಿದ ವ್ಯಕ್ತಿ: ನೆರವಿಗೆ ಮನವಿ
Team Udayavani, May 25, 2017, 9:30 PM IST
ಉಡುಪಿ: ತೆಂಗಿನಕಾಯಿ ಕೊಯ್ಯುವ ವೃತ್ತಿ ಮಾಡುತ್ತಿದ್ದ ಉದ್ಯಾವರ ಕಲೈಬೈಲು ದಿ| ದೇಜು ಪೂಜಾರಿಯವರ ಮಗ ವಿಠ್ಠಲ ಜತ್ತನ್ (48) ಅವರು ತೆಂಗಿನ ಮರದಿಂದ ಬಿದ್ದು ಗಂಭೀರವಾಗಿ ಪೆಟ್ಟಾಗಿ ಹಾಸಿಗೆ ಹಿಡಿದಿದ್ದಾರೆ. ಇದರಿಂದಾಗಿ ಜೀವನ ಮುನ್ನಡೆಸಲು ಮನೆಮಂದಿ ಕಂಗಾಲಾಗಿದ್ದು, ಸಾರ್ವಜನಿಕ ಸಹಾಯ ಯಾಚಿಸಿದ್ದಾರೆ. ಅವರ ಪತ್ನಿ ಲಲಿತಾ ಮತ್ತು 4ನೇ ತರಗತಿ ಓದುತ್ತಿರುವ ಮಗಳೊಂದಿಗೆ ಜೀವನ ಸಾಗುತ್ತಿದೆ. ಯಾವುದೇ ದುಶ್ಚಟಗಳಿಲ್ಲದ ವಿಠಲ್ ಅವರು ಇದ್ದುದರಲ್ಲಿ ಸುಖೀ ಸಂಸಾರ ನಡೆಸುತ್ತಿದ್ದರು. ಇದ್ದ ತೀರಾ ಹಳೆಯ ಮನೆಯನ್ನು ಕೆಡವಿ ಪುಟ್ಟ ಹೊಸದೊಂದು ಮನೆಯನ್ನು ಕಟ್ಟುವ ಕನಸು ಕಾಣುತ್ತಿದ್ದರು. ಈ ನಡುವೆ ಕಳೆದ ಜನವರಿಯಲ್ಲಿ ಕಟಪಾಡಿಯ ತೆಂಗಿನ ತೋಟವೊಂದರಲ್ಲಿ ಮರ ಹತ್ತಿ ಕಾಯಿ ಕೀಳುವಾಗ ಆಕಸ್ಮಿಕವಾಗಿ ಜಾರಿ ಬಿದ್ದಿದ್ದರು.
ಮಣಿಪಾಲದ ಆಸ್ಪತ್ರೆಯಲ್ಲಿ 20 ದಿನಗಳು ಜೀವನ್ಮರಣ ಸ್ಥಿತಿಯಲ್ಲಿದ್ದು, ಬದುಕಿದರಾದರೂ ಬೆನ್ನೆಲುಬು, ಸೊಂಟದ ಕೀಲು, ಕಾಲು ಒಟ್ಟು 5 ಕಡೆ ಮೂಳೆ ಮುರಿತದಿಂದ ಗಂಭೀರ ಹಾನಿಯಾಗಿದೆ. ಎದ್ದು ಕುಳಿತುಕೊಳ್ಳಲು ಕೂಡ ಆಗದ ಸ್ಥಿತಿ ಇದೆ. ಎಲ್ಲದಕ್ಕೂ ಇತರರನ್ನು ಅವಲಂಬಿಸಬೇಕಾಗಿದೆ. ಇದ್ದ ಒಬ್ಬನೇ ದುಡಿಮೆಗಾರನ ದುಡಿಮೆ ನಂಬಿ ಜೀವನ ನಡೆಸುತ್ತಿದ್ದ ಕುಟುಂಬ ಇತ್ತ ಜೀವನಾಧಾರದ ದುಡಿಮೆಯೂ ಇಲ್ಲದೆ ಅತ್ತ ನಾಲ್ಕು ತಿಂಗಳಲ್ಲಿ ಚಿಕಿತ್ಸೆಗೆ ಎಲ್ಲೆಡೆ ಸಾಲ ಮಾಡಿ ಆಸ್ಪತ್ರೆಗೆ ಸುಮಾರು 3 ಲಕ್ಷದಷ್ಟು ಹಣ ಖರ್ಚು ಮಾಡಿ ಕಂಗಾಲಾಗಿ ಬಿಟ್ಟಿದೆ. ಇನ್ನೂ ಹಲವು ತಿಂಗಳುಗಳ ಚಿಕಿತ್ಸೆಯ ಅಗತ್ಯವಿದೆ. ಇದನ್ನು ನಿಭಾಯಿಸುವುದು ಹೇಗೆಂದು ಪತ್ನಿ ಲಲಿತಾ ಚಿಂತಾಕ್ರಾಂತರಾಗಿ ಬಿಟ್ಟಿದ್ದಾರೆ.
ಸಂಕಷ್ಟ ಪರಿಸ್ಥಿತಿಯಲ್ಲಿರುವ ಬಡ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಬಯಸುವ ಸಹೃದಯೀ ದಾನಿಗಳು ಸಿಂಡಿಕೇಟ್ ಬ್ಯಾಂಕ್ ಪಿತ್ರೋಡಿ ಶಾಖೆಯಲ್ಲಿರುವ ಅವರ ಉಳಿತಾಯ ಖಾತೆ ಸಂಖ್ಯೆ 02162200004381 (ಐಎಫ್ಎಸ್ಸಿ ಕೋಡ್-ಎಸ್ವೈಎನ್ಬಿ0000216) ಇದಕ್ಕೆ ಜಮೆ ಮಾಡಬಹುದು. ನೇರವಾಗಿ ಸಂಪರ್ಕಿಸ ಬಯಸುವವರು 9945382767 ಈ ನಂಬರಿಗೆ ಕರೆ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.