ಗ್ರಾಮಾಭಿವೃದ್ಧಿ ಕೃಷಿ ನಿರ್ದೇಶಕರ ಕೃಷಿ ತಾಕು ಭೇಟಿ
Team Udayavani, Jul 8, 2019, 5:26 AM IST
ಕುಂದಾಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ.ಸಿ. ಟ್ರಸ್ಟ್ ಕೇಂದ್ರ ಕಚೇರಿ ಧರ್ಮಸ್ಥಳದ ಕೃಷಿ ವಿಭಾಗದ ನಿರ್ದೇಶಕ ಮನೋಜ್ ಮಿನೆಜಸ್ ಅವರು ತಾಲೂಕಿನ ಪ್ರಗತಿಪರ ರೈತರ ಕೃಷಿ ತಾಕುಗಳಿಗೆ ಭೇಟಿ ನೀಡಿದರು.
ರೈತರ ಕೃಷಿ ಬದುಕಿನ ಸಾಧನೆಗಳ ಬಗ್ಗೆ ವಿಮರ್ಶಿಸಿ, ಸವಾಲುಗಳ ಬಗ್ಗೆ ಮಾಹಿತಿ ಪಡೆದು ಮಾರ್ಗದರ್ಶನ ನೀಡಿದರು.
ಹೈಕಾಡಿ ಶಂಕರ್ ಪ್ರಭು ಅವರ ಸುವರ್ಣಗಡ್ಡೆ ಕೃಷಿ, ವೀಳ್ಯ ಕೃಷಿ, ಯಾಂತ್ರೀಕೃತ ಭತ್ತ ನಾಟಿ, ತೊಂಬತ್ತು ಬ್ರಹ್ಮಲಿಂಗೇಶ್ವರ ಪ್ರಗತಿಬಂಧು ತಂಡದ ವಾರದ ಶ್ರಮ ವಿನಿಮಯ, ಅಮಾಸೆಬೈಲು ಸಂತೋಷ ಅವರ ಕೃಷಿ ನರ್ಸರಿ, ಜಡ್ಡಿನಗದ್ದೆ ಸತೀಶ್ ಹೆಗ್ಡೆ ಅವರ ಮಿಶ್ರ ತಳಿ ಅಡಿಕೆ, ಮೀನು ಕೃಷಿ, ಪಪ್ಪಾಯಿ ಕೃಷಿ, ತಮ್ಮಯ್ಯ ನಾಯ್ಕ ಅವರ ಹಾಳೆತಟ್ಟೆ ತಯಾರಿ ಘಟಕಕ್ಕೆ ಭೇಟಿ ನೀಡಿದರು.
ತಾ| ಕೃಷಿ ಅಧಿಕಾರಿ ಚೇತನ್ ಕುಮಾರ್, ಅಮಾಸೆಬೈಲು ವಲಯ ಮೇಲ್ವಿಚಾರಕ ದೀಪಕ್, ಹಾಲಾಡಿ ವಲಯ ಮೇಲ್ವಿಚಾರಕಿ ಮಾಲತಿ, ಸೇವಾ ಪ್ರತಿನಿಧಿ ಮಂಜುನಾಥ್ ಶೆಟ್ಟಿ , ಪ್ರಶಾಂತ್, ಶ್ರೀಮತಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.