ಗಮನ ಸೆಳೆದ ವಿದ್ಯಾರ್ಥಿಗಳ ಸಾಂಪ್ರದಾಯಿಕ ಕುಟೀರ, ಆಹಾರ ಮೇಳ
ಎಂಜಿಎಂ ಕಾಲೇಜು: ವಾರ್ಷಿಕ ಕ್ರೀಡಾಕೂಟ
Team Udayavani, Jan 8, 2023, 7:00 AM IST
ಉಡುಪಿ: ಎಂಜಿಎಂ ಕಾಲೇಜು ಮೈದಾನದಲ್ಲಿ ಶನಿವಾರ ಎಂಜಿಎಂ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಜತೆಗೆ ಆಹಾರ ಉತ್ಸವ, ಕೌಶಲತೆ ಅನಾವರಣಗೊಂಡಿತು.
ಕ್ರೀಡಾಕೂಟದ ಜತೆಗೆ ವಿದ್ಯಾರ್ಥಿಗಳ ಆಹಾರ ಮೇಳ, ಸಾಂಪ್ರದಾಯಿಕ ಕಲೆಗಳ ಪ್ರದರ್ಶನ ಸಹಿತ ಇತರ ಆಟೋಟಗಳು ಗಮನ ಸೆಳೆದವು.
1500ಕ್ಕೂ ಅಧಿಕ ವಿದ್ಯಾರ್ಥಿಗಳು ಕೂಟದಲ್ಲಿ ಭಾಗಿಯಾಗಿದ್ದರು. ಬಿ.ಎ, ಬಿ. ಕಾಂ. ಬಿ.ಎಸ್ಸಿ. ಬಿಸಿಎ, ಎಂಎಸ್ಸಿ ವಿಭಾಗದ ವಿದ್ಯಾರ್ಥಿಗಳು ಓಟ, ಲಾಂಗ್‌ಜಂಪ್, ಡಿಸ್ಕಸ್ ತ್ರೋ, ಹೈಜಂಪ್ ಮೊದಲಾದ ಆ್ಯತ್ಲೆಟಿಕ್‌ನಲ್ಲಿ ಭಾಗವಹಿಸಿದರು.
ವಿದ್ಯಾರ್ಥಿ ಗಳಿಗೆ ಶಿಕ್ಷಣ ಮತ್ತು ಕ್ರೀಡೆಯ ಜತೆಗೆ ಮಾರುಕಟ್ಟೆ, ಆಹಾರ ಉತ್ಪನ್ನಗಳ ತಯಾರಿಕೆ, ಡೆಕೊರೇಶನ್ ಉದ್ಯಮಗಳ ಕೌಶಲದ ಬಗ್ಗೆ ಪೂರಕ ಜ್ಞಾನ ಮೂಡಿಸುವಂತೆ ಹಳ್ಳಿಮನೆ, ಅಜ್ಜಿಮನೆ ಕುಟೀರಗಳನ್ನು ಹಳ್ಳಿ ಸೊಗಡಿನ ಸಾಂಪ್ರದಾಯಿಕ ಶೈಲಿಯಲ್ಲಿ ರೂಪಿಸಿದ್ದು, ವಿಶೇಷವಾಗಿತ್ತು. ಇದರಲ್ಲಿ ಆಹಾರೋತ್ಪನ್ನಗಳು, ತಂಪು ಪಾನೀಯಗಳನ್ನು ವಿದ್ಯಾರ್ಥಿಗಳು ಮಾರಾಟ ಮಾಡಿದರು.
ಸ್ಥಳೀಯ ತಿಂಡಿ, ತಿನಿಸುಗಳು, ಹಣ್ಣಿನ ರಸ, ಚಾಟ್ಸ್ ಮಾದರಿಯ ತಿನಿಸುಗಳು ಇಲ್ಲಿನ ವಿಶೇಷವಾಗಿದ್ದವು.
ಕ್ರೀಡಾ ಸಾಧಕ, ಹಳೆ ವಿದ್ಯಾರ್ಥಿ ಅಭಿನ್ ದೇವಾಡಿಗ ಅವರನ್ನು ಸಮ್ಮಾನಿಸಲಾಯಿತು. ಪ್ರಾಂಶುಪಾಲ ಪ್ರೊ| ಲಕ್ಮಿà ನಾರಾಯಣ ಕಾರಂತ್ ಅಧ್ಯಕ್ಷತೆ ವಹಿಸಿದ್ದರು.
ಪ. ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ| ರಮೇಶ್ ಕಾರ್ಲ ಉಪಸ್ಥಿತರಿದ್ದರು. ಉಪನ್ಯಾಸಕ ಸುಚಿತ್ ಕೋಟ್ಯಾನ್ ನಿರೂಪಿಸಿದರು.
ದೈ. ಶಿ. ನಿರ್ದೇಶಕಿ ಜಯಶ್ರೀ ನಾಯಕ್ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ವಿನೋಥ್ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಪ್ರ. ಕಾರ್ಯದರ್ಶಿ ಅನಘ ವಂದಿಸಿದರು.
ಯುವಕರ ಶಕ್ತಿ ಕುಂದಿಸುವ ಮೊಬೈಲ್
ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಕರಾವಳಿ ಕಾವಲು ಪೊಲೀಸ್ ಪಡೆ ನಿರೀಕ್ಷಕ ಪ್ರಮೋದ್ ಕುಮಾರ್ ಪಿ. ಚಾಲನೆ ನೀಡಿ, ಪ್ರಸ್ತುತ ಯುವ ಜನಾಂಗದ ಶಕ್ತಿಯನ್ನು ಮೊಬೈಲ್ ಕುಂದಿಸುತ್ತಿದ್ದು, ಕ್ರೀಡೆಯು ದೇಹ ಮತ್ತು ಮನಸ್ಸಿಗೆ ಚೈತನ್ಯ ತುಂಬಿ ಒತ್ತಡ ನಿವಾರಿಸುತ್ತದೆ. ಹೀಗಾಗಿ ಮಾನಸಿಕ ಹಾಗೂ ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಕ್ರೀಡೆ ಆವಶ್ಯಕ. ಹಾಗೆಯೇ ದೇಹ ಮತ್ತು ಮನಸ್ಸಿನ ಸಮತೋಲನಕ್ಕೆ ಕ್ರೀಡೆ ಅಗತ್ಯ. ಕ್ರೀಡಾ ಸಾಧಕರಿಗೆ ಸರಕಾರಿ ಕೆಲಸಗಳಲ್ಲೂ ಆದ್ಯತೆ ಇದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.