ಮಣಿಪಾಲದಲ್ಲೊಂದು “ಮಿನಿ ಪಳ್ಳ’!
Team Udayavani, Jul 20, 2019, 5:24 AM IST
ಮಣಿಪಾಲದಲ್ಲಿ ನಿರ್ಮಿಸಲಾದ ಮಿನಿ ಪಳ್ಳ.
ಉಡುಪಿ: ಬೇಸಗೆಯಲ್ಲಿ ನೀರಿನ ಬವಣೆಯನ್ನು ನೋಡಿದ ಮಣಿಪಾಲದ ಮಾಹೆ ವಿ.ವಿ. ಆಡಳಿತವು ಜಲಸಂಗ್ರಹಕ್ಕಾಗಿ “ಮಿನಿ ಪಳ್ಳ’ವನ್ನು ಸೃಷ್ಟಿಸಿದೆ. ಎಂಡ್ ಪಾಯಿಂಟ್ ಸಮೀಪದಲ್ಲಿ 2 ಎಕ್ರೆ ಭೂಮಿಯಲ್ಲಿ ಮಳೆ ನೀರು ಸಂಗ್ರಹಕ್ಕಾಗಿ “ಮಿನಿ ಪಳ್ಳ’ ಯೋಜನೆ ರೂಪಿತವಾಗಿದೆ.
ಈ ಜಾಗದಲ್ಲಿ ಸುಮಾರು 80 ಲಕ್ಷ ಲೀ. ನೀರು ಸಂಗ್ರಹವಾಗುವಂತೆ ತೋಡಲಾಗಿದೆ. ಇದು ಈಗಾಗಲೇ ಇರುವ ಕೊಳವೆಬಾವಿಗಳಿಗೆ ನೀರನ್ನು ಮರುಪೂರಣಗೊಳಿಸುತ್ತದೆ. ಮದಗದ ಆಳ ವಿವಿಧೆಡೆಗಳಲ್ಲಿ ಸುಮಾರು 8-10 ಅಡಿ ಆಳವಿದೆ ಎಂದು ಮಾಹೆ ವಿ.ವಿ.ಯ ಉಪ ಯೋಜನಾ ನಿರ್ದೇಶಕ ಐವನ್ ಡಿ’ಸೋಜಾ ಹೇಳಿದ್ದಾರೆ.
ಸುರಕ್ಷಾ ಕ್ರಮವಾಗಿ ಸುತ್ತಲೂ ಬೇಲಿಗಳನ್ನು ನಿರ್ಮಿಸಲಾಗಿದೆ. ಮಾಹೆ ಕ್ಯಾಂಪಸ್‌ನಲ್ಲಿ ಇನ್ನೂ ಎರಡು ಇಂತಹ ಮಿನಿ ಪಳ್ಳಗಳನ್ನು ನಿರ್ಮಿಸುವ ಯೋಜನೆ ಇದೆ. ವೈಜ್ಞಾನಿಕವಾಗಿ ಮಳೆ ನೀರಿನ ಸಂಗ್ರಹ, ಸಂರಕ್ಷಣೆ ಮತ್ತು ಪುನರ್ಬಳಕೆಯನ್ನು ಜಾರಿಗೊಳಿಸಲಾಗುತ್ತದೆ. ಮಳೆ ನೀರಿನ ಜತೆಗೆ ಅಂತರ್ಜಲಕ್ಕೆ ಮರುಪೂರಣ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಮಾಡಿನಿಂದ ಸಂಗ್ರಹವಾಗುವ ಮಳೆ ನೀರನ್ನು ಸಂಗ್ರಹಿಸುವ ಕೆಲಸಕ್ಕೆ ಈಗಾಗಲೇ ಕ್ರಮವಹಿಸಲಾಗಿದೆ. ಈ ನೀರನ್ನು ಮರಳಿನ ಮೂಲಕ ಸೋಸಿ ತಳಮಟ್ಟದಲ್ಲಿ ಸಂಪ್‌ನಲ್ಲಿ ಸಂಗ್ರಹಿಸಿ ಬಳಸುವ ಯೋಜನೆ ಕಾರ್ಯಗತಗೊಳ್ಳುತ್ತಿದೆ. ಇದು ವಿದ್ಯಾರ್ಥಿಗಳು ಮತ್ತು ಸಿಬಂದಿಯ ಸಾಮಾನ್ಯ ಬಳಕೆಗೆ ಉಪಯುಕ್ತವಾಗಲಿದೆ ಎಂದು ಡಿ’ಸೋಜಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.