ಅಮೃತ ಕಾಲದಲ್ಲಿ ವಿಶ್ವವನ್ನು ಭಾರತ ಮುನ್ನಡೆಸಲಿದೆ: ಸಚಿವ ಡಾ| ಜೈಶಂಕರ್‌


Team Udayavani, Mar 20, 2023, 7:12 AM IST

ಅಮೃತ ಕಾಲದಲ್ಲಿ ವಿಶ್ವವನ್ನು ಭಾರತ ಮುನ್ನಡೆಸಲಿದೆ: ಸಚಿವ ಡಾ| ಜೈಶಂಕರ್‌

ಉಡುಪಿ: ಆರ್ಥಿಕತೆ, ತಂತ್ರಜ್ಞಾನ, ಡಿಜಿಟಲೈಜೇಶನ್‌ -ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಭಾರತ ಗಣನೀಯ ಸಾಧನೆ ಮಾಡುತ್ತಿದೆ. ಯುವ ಜನತೆ ತಮ್ಮ ಕೌಶಲ, ಪ್ರತಿಭೆಯನ್ನು ಜಾಗತಿಕ ಕಾರ್ಯಕ್ಷೇತ್ರವಾಗಿ ಪರಿಗಣಿಸಿ ಮುನ್ನಡೆದರೆ ಅಮೃತ ಕಾಲದಲ್ಲಿ ಭಾರತ ವಿಶ್ವವನ್ನು ಮುನ್ನಡೆಸಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಡಾ| ಎಸ್‌. ಜೈಶಂಕರ್‌ ಹೇಳಿದರು.

ಮಾಹೆ ವಿ.ವಿ.ಯ ಟಿ.ಎ.ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ (ಟ್ಯಾಪ್ಮಿ) ವತಿಯಿಂದ ಅಂಬಲಪಾಡಿಯ ಅಮೃತ್‌ ಗಾರ್ಡನ್‌ನಲ್ಲಿ ರವಿವಾರ ಹಮ್ಮಿಕೊಂಡಿದ್ದ 29ನೇ ಲೀಡರ್‌ಶಿಪ್‌ ಉಪನ್ಯಾಸದಲ್ಲಿ “ಅಮೃತ ಕಾಲದಲ್ಲಿ ಭಾರತ’ ಎಂಬ ವಿಷಯದ ಮೇಲೆ ಅವರು ವಿಶೇಷ ಉಪನ್ಯಾಸ ನೀಡಿದರು.

ಕಳೆದ ಒಂದು ದಶಕದಲ್ಲಿ ದೇಶದಲ್ಲಿ ಬಡತನದ ಪ್ರಮಾಣ ಕುಸಿತವಾಗಿದೆ, ಮಾನವ ಅಭಿವೃದ್ಧಿ ಸೂಚ್ಯಂಕ ಹೆಚ್ಚಿದೆ. ಬೇಟಿ ಪಡಾವೊ-ಬೇಟಿ ಬಚಾವೋ, ಸ್ವತ್ಛಭಾರತ ಕಾರ್ಯಕ್ರಮಗಳ ಜತೆಗೆ ಆರೋಗ್ಯ, ಶಿಕ್ಷಣ ಮತ್ತು ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಭಾರತ ತನ್ನದೇ ಮೈಲಿಗಲ್ಲು ಸಾಧಿಸುತ್ತಿದೆ. ಮುಂದಿನ 25 ವರ್ಷಗಳಲ್ಲಿ ಆಗ ಬೇಕಿರುವ (ಅಮೃತ ಕಾಲ) ಅಭಿವೃದ್ಧಿಗೆ ಹಿಂದಿನ ಒಂದು ದಶಕದ ಕಾರ್ಯಸಾಧನೆ ಮತ್ತು ಎದುರಿಸಿದ ಸವಾಲುಗಳು ಅಡಿಪಾಯವಾಗಿರಲಿವೆ ಎಂದರು.

ದೇಶದ ವಿದೇಶಾಂಗ ನೀತಿ ಮತ್ತು ಆರ್ಥಿಕತೆಗೆ ನೇರ ಸಂಬಂಧವಿದೆ. ವಿದೇಶಾಂಗ ನೀತಿಯಲ್ಲಿನ ಕೆಲವು ಬದ ಲಾವಣೆಗಳಿಂದ ಆರ್ಥಿಕತೆಗೆ ಹೆಚ್ಚು ಉತ್ತೇಜನ ಸಿಗಲಿದೆ. ರಫ್ತುದಾರರಿಗೆ ಅನುಕೂಲವಾದಂತೆ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಲಭ್ಯವಾಗು ತ್ತವೆ ಎಂದರು.

ಜಾಗತಿಕ ಕಾರ್ಯಕ್ಷೇತ್ರ
ಕೌಶಲ, ಪ್ರತಿಭೆಯ ನೆಲೆಯಲ್ಲಿ ಭಾರತವನ್ನು ಯುವಜನತೆ ಜಾಗತಿಕ ಕಾರ್ಯ ತತ್ಪರತೆಯ ಕ್ಷೇತ್ರವಾಗಿ ಪರಿ ಗಣಿಸಿ ದುಡಿದರೆ ಅಮೃತ ಕಾಲದಲ್ಲಿ ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯವಿದೆ. ಜಾಗತಿಕವಾಗಿ ಸೆಮಿ ಕಂಡಕ್ಟರ್‌, ಚಿಪ್‌ ವಿನ್ಯಾಸಕಾರರು, ಎಂಜಿನಿಯರ್‌ಗಳ ಸಹಿತ ಉತ್ಪಾದನೆಯಲ್ಲಿ ತೀವ್ರ ಕೊರತೆಯಿದೆ. 40 ಸಾವಿರ ಭಾರತೀಯರು ಚಿಪ್‌ ವಿನ್ಯಾಸ ಕ್ಷೇತ್ರದಲ್ಲಿ ದ್ದರೂ ಸಾಕಾಗುತ್ತಿಲ್ಲ. ದೇಶೀಯ ನೆಲೆಯಲ್ಲಿ ಮಾತ್ರವಲ್ಲದೆ ಜಾಗತಿಕ ಸವಾಲುಗಳಿಗೂ ಸ್ಪಂದಿಸಿ, ಪರಿಹಾರ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.

ದೇಶದಲ್ಲಿ ಆ್ಯಪಲ್‌ ಮೊಬೈಲ್‌ ಉತ್ಪಾ ದನೆ ಆರಂಭವಾಗಿದೆ. ಜಾಗತಿಕ ವೇದಿಕೆಯಲ್ಲಿ ಒಂದೇ ದಿನದಲ್ಲಿ ಉನ್ನತಿ ಸಾಧಿಸಲು ಸಾಧ್ಯವಿಲ್ಲ. ತಲತಲಾಂತರದ ಸಾಧನೆ, ಕಾರ್ಯ ತತ್ಪರತೆ ಬೇಕಾಗುತ್ತದೆ. ಜಾಗತಿಕವಾದ ಹಲವು ಸಮಸ್ಯೆಗಳಿಗೆ ಸಾಂಸ್ಕೃತಿಕವಾಗಿಯೂ ಸ್ಪಂದಿಸ ಬೇಕಾಗುತ್ತದೆ. ಅಮೃತ ಕಾಲದ ಸಾಧನೆಯಲ್ಲಿ ಯುವ ಜನರ ತೊಡಗಿಸಿ ಕೊಳ್ಳುವಿಕೆಯೂ ಮುಖ್ಯವಾಗುತ್ತದೆ ಎಂದು ವಿಶ್ಲೇಷಿಸಿದರು.

ಮಾಹೆ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕುಲಸಚಿವ ಡಾ| ಗಿರಿಧರ್‌ ಕಿಣಿ ಉಪಸ್ಥಿತರಿದ್ದರು.
ವಿ.ವಿ. ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಸ್ವಾಗತಿಸಿದರು. ಸಹ ಕುಲಪತಿ ಹಾಗೂ ಟ್ಯಾಪ್ಮಿ ನಿರ್ದೇ ಶಕ ಡಾ| ಮಧು ವೀರರಾಘವನ್‌ ಕೇಂದ್ರ ಸಚಿವರ ಪರಿಚಯ ಮಾಡಿ ದರು. ಟ್ಯಾಪ್ಮಿ ಪ್ರಾಧ್ಯಾಪಕ ರಾದ ಪ್ರೊ| ಪೂರ್ಣಿಮಾ ವೆಂಕಟ್‌ ವಂದಿಸಿ, ಡಾ| ಜೀವನ್‌ ಜೆ. ಅರಕಳ ನಿರೂಪಿಸಿದರು.

ಮೌನ ಕ್ರಾಂತಿ
ಕೋವಿಡ್‌ ಕಾಲದಲ್ಲಿ ದೇಶದ 80 ಕೋಟಿ ಜನರಿಗೆ ಆಹಾರ ಒದಗಿಸಿರುವುದು ಮತ್ತು ಅದರ ಮುಂದುವರಿಕೆ, ಸಾಮಾಜಿಕ ಪಿಂಚಣಿ ಯೋಜನೆ, ಬಡವರಿಗೆ 3 ಕೋಟಿ ಮನೆ ನಿರ್ಮಾಣ ಸಹಿತ ಮೂಲ ಸೌಲಭ್ಯ ಅಭಿವೃದ್ಧಿಯ ಜತೆಗೆ ಸೋರಿಕೆ ತಡೆದು, ಆಡಳಿತದಲ್ಲಿ ಸುಧಾರಣೆ, ಬದಲಾವಣೆಗೆ ಡಿಜಿಟಲ್‌ ಇಂಡಿಯಾ ವೇದಿಕೆಯಾಗಿದೆ. ಮೂಲಸೌಕರ್ಯದಲ್ಲಿ ಆಗುತ್ತಿರುವ ಬದಲಾವಣೆಗಳು ದಿನೇದಿನೆ ಕಾಣಸಿಗುತ್ತಿವೆ. ಇವೆಲ್ಲವೂ ಪ್ರಜಾಪ್ರಭುತ್ವದಲ್ಲಿ ಮೌನ ಕ್ರಾಂತಿ ಎಂದು ಸಚಿವರು ಹೇಳಿದರು.

ಪಾಸ್‌ಪೋರ್ಟ್‌ ಕೇಂದ್ರ ಹೆಚ್ಚಳ
ಹಿಂದೆಲ್ಲ ಪಾಸ್‌ಪೋರ್ಟ್‌ ಪಡೆಯಲು ಎಷ್ಟು ಕಷ್ಟ ಇತ್ತು ಎಂಬುದು ಬಹುತೇಕರಿಗೆ ಅರಿವಿದೆ. ಈಗ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಪಾಸ್‌ಪೋರ್ಸ್‌ಗೆ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಪಾಸ್‌ಪೋರ್ಟ್‌ ಸಿಗುತ್ತದೆ. ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್‌ ಕೇಂದ್ರ ತೆರೆಯಲಾಗಿದೆ ಎಂದು ಸಚಿವ ಜೈಶಂಕರ್‌ ಹೇಳಿದರು.

ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆ ಭಾರತೀಯರ ಮನೋಭಾವವನ್ನು ಬದಲಿಸಿದೆ. ಉತ್ಪಾದನ ಕ್ಷೇತ್ರದಲ್ಲಿ ದೇಶ ಹೊಸ ಮೈಲಿಗಲ್ಲು ಸಾಧಿಸಿದೆ. ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯನ್ನು ರಾಜಕೀಯದಲ್ಲೂ ಅಳವಡಿಸಿಕೊಳ್ಳುವ ಆಂತರಿಕ ಚಿಂತನೆಯಿದೆ. ಭಾರತ ಸಮಗ್ರ ಶಕ್ತಿಯಾದರೆ ಜಾಗತಿಕವಾಗಿ ಅನ್ಯ ರಾಷ್ಟ್ರಗಳ ಮಾನ್ಯತೆ ತಾನಾಗಿಯೇ ಸಿಗಲಿದೆ.
– ಡಾ| ಜೈಶಂಕರ್‌, ಕೇಂದ್ರ ವಿದೇಶಾಂಗ ಸಚಿವ

ಟಾಪ್ ನ್ಯೂಸ್

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

7(1

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

4

Karkala: ಈ ರಸ್ತೆಯಲ್ಲಿ ಬಸ್‌ ತಂಗುದಾಣಗಳೇ ಇಲ್ಲ!

3-mit

Manipal MIT: ಅಂತಾರಾಷ್ಟ್ರೀಯ ಕಾರ್ಯಾಗಾರ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

7(1

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.