ಹೆಬ್ರಿ ಗ್ರಾ.ಪಂ.ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ
ಕುಂದುಕೊರತೆಗಳ ಬಗ್ಗೆ ಮನವಿ: ಶೀಘ್ರ ಈಡೇರಿಸುವ ಭರವಸೆ
Team Udayavani, Sep 23, 2019, 5:47 AM IST
ಹೆಬ್ರಿ: ಹೆಬ್ರಿ ತಾಲೂಕು ಕಚೇರಿಗೆ ಸೆ. 21ರಂದು ಮೀನುಗಾರಿಕೆ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿ ಕುಂದು ಕೊರತೆಗಳ ಬಗ್ಗೆ ವಿಚಾರಿಸಿದರು.
ಈ ಸಂದರ್ಭ ಹೆಬ್ರಿ ತಾಲೂಕಿನ ತಹಶೀಲ್ದಾರ್ ಮಹೇಶ್ಚಂದ್ರ ಅವರು ಹೆಬ್ರಿಯ ತಾಲೂಕು ಕಚೇರಿ ಯಲ್ಲಿ ವಿವಿಧ ಇಲಾಖೆಗಳು ನಿರ್ಮಾಣವಾಗದೇ ಇರುವು ದುದರಿಂದ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗುತ್ತದೆ. ಅಗತ್ಯವಾಗಿ ಅಟಲ್‌ಜೀ ಸೇವಾ ಕೇಂದ್ರ ಮೊದಲಾದ ಸೇವಾ ಕಚೇರಿಗಳು ಶೀಘ್ರ ನಿರ್ಮಾಣವಾಗಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಿದರು.
ಶೀಘ್ರ ಪರಿಶೀಲನೆ
ಸಮಸ್ಯೆಗಳನ್ನು ಆಲಿಸಿ ಉತ್ತರಿಸಿದ ಕೋಟ ಶ್ರೀನಿವಾಸ ಪೂಜಾರಿ ಅವರು, ಆಧಾರ್ ಕಾರ್ಡ್, ರೇಶನ್ ಕಾರ್ಡ್, ಪಹಣಿ ಪತ್ರ, 94ಸಿ, ಡೀಮಡ್ ಫಾರೆಸ್ಟ್ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ ಹೆಬ್ರಿಯನ್ನು ಪೂರ್ಣ ಪ್ರಮಾಣದ ತಾಲೂಕನ್ನಾಗಿ ಮಾಡಲು ಸಂಬಂಧಪಟ್ಟವರ ಗಮನಕ್ಕೆ ತರುತ್ತೇನೆ ಎಂದರು.
ಕೂಡ್ಲು ರಸ್ತೆ ಅಭಿವೃದ್ಧಿಗೆ ತಡೆ
ಇತ್ತೀಚೆಗೆ ಕೂಡ್ಲು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸರಕಾರದಿಂದ ಹಣ ಮಂಜೂರು ಆದರೂ ಕೂಡ ಕಾಮಗಾರಿಗೆ ವನ್ಯಜೀವಿ ಇಲಾಖೆಯವರು ತಡೆ ಯೊಡಿದ್ದಾರೆ.ಈ ಹಿನ್ನೆಲೆ ಕಾಮಗಾರಿಯನ್ನು ನಿಲ್ಲಿಸಲಾಗಿದೆ ಎಂದು ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್ ಸಚಿವರ ಗಮಕ್ಕೆ ತಂದರು. ಅದಕ್ಕೆ ಉತ್ತರಿಸಿದ ಸಚಿವರು ಆ ಬಗ್ಗೆ ಸ್ಥಳದಲ್ಲಿಯೇ ಎಸಿಎಫ್ ಅವರಿಗೆ ದೂರವಾಣಿಯಿಂದ ಸಂಪರ್ಕಿಸಿ ನಾಡಾ³ಲು ಭಾಗದಲ್ಲಿ 3,500 ಸೆ.ಮೀ ನಷ್ಟು ಮಳೆಯಾಗುತ್ತಿದೆ. ಇಂತಹ ಪ್ರದೇಶದ ರಸ್ತೆ ಕಾಂಕ್ರೀಟ್ ಆದಾಗ ಮಾತ್ರ ಉಳಿಯುತ್ತದೆ. ಈ ಬಗ್ಗೆ ಕೂಡಲೇ ಅನುಮತಿ ನೀಡಿ ಸಮಸ್ಯೆ ಬಗೆಹರಿಸಿ ಎಂದರು.
ಹೆಬ್ರಿ ಗ್ರಾ.ಪಂ. ಸದಸ್ಯ ಎಚ್.ಕೆ. ಸುಧಾಕರ, ಕೆರೆಬೆಟ್ಟು ಸಂಜೀವ ಶೆಟ್ಟಿ, ಪಾಂಡುರಂಗ ಪೂಜಾರಿ ಮೊದಲಾದವರು ಹೆಬ್ರಿಯ ಹಲವು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.
ನಾನಿದ್ದೇನೆ ಹೆದರಬೇಡ
ತಾಲೂಕು ಕಚೇರಿಯ ಎದುರಿನಲ್ಲಿ ಚಪ್ಪಲ್ ಹೊಲಿಯುವ ಅಂಗಡಿ ಇದ್ದು ಇದನ್ನು ಕೂಡಲೇ ತೆರವುಗೊಳಿಸುತ್ತೇವೆ ಎಂದು ಅಧಿಕಾರಿಗಳಿಂದ ಆದೇಶ ಬಂದಿದೆ ಎಂದು ಅಂಗಡಿಯ ಮಾಲಕ ಸಚಿವರ ಗಮನಕ್ಕೆ ತಂದು ಅತ್ತರು. ನಾನು ಬಡವ ಸರ್, ನನಗೆ ಇದರಿಂದಲೇ ಜೀವನ ಸಾಗಬೇಕು ದಯವಿಟ್ಟು ಸಹಕರಿಸಿ ಎಂದಾಗ ಸಚಿವರು ನಾನಿದ್ದೇನೆ ಹೆದರಬೇಡ. ಶೀಘ್ರವಾಗಿ ಇದಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಿ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಅಭಯ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.