ಪ್ರಮೋದ್ ಪರ ಹೈಟೆಕ್ ಪ್ರಚಾರ ರಥ ಸಂಚಾರ
Team Udayavani, Mar 18, 2018, 7:15 AM IST
ಉಡುಪಿ: ಕಾಂಗ್ರೆಸ್ ಪಕ್ಷದ ಶಾಸಕ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ 5 ವರ್ಷಗಳ ಸಾಧನೆಯನ್ನು ಪ್ರಚುರಪಡಿಸಲು ಪ್ರಚಾರ ರಥ (2 ಹೈಟೆಕ್ ವಾಹನಗಳು) ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚಾರ ಪ್ರಾರಂಭಿಸಿದೆ. ವಾಹನದಲ್ಲಿ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.
ಸಚಿವ ಪ್ರಮೋದ್ ಅವರ ಅಭಿಮಾನಿಗಳ ತಂಡ ಪ್ರಚಾರ ಕಾರ್ಯದ ಹಿಂದಿದೆ. ಎರಡು ದೊಡ್ಡ ವಾಹನಗಳನ್ನು ಪ್ರಚಾರಕ್ಕಾಗಿ ಸಿದ್ಧಗೊಳಿಸಲಾಗಿದ್ದು, ಒಂದು ವಾಹನದಲ್ಲಿ ಹೈಟೆಕ್ ಎಲ್‌ಇಡಿ ಪರದೆಯಲ್ಲಿ ಸಚಿವರ ಸಾಧನೆಗಳನ್ನು ಬಿಂಬಿಸುವ ಚಿತ್ರಗಳು, ಹಿನ್ನೆಲೆ ಸ್ವರದೊಂದಿಗೆ ಇದೆ. ಇನ್ನೊಂದು ವಾಹನದಲ್ಲಿ ವೃತ್ತಿಪರ ಸಂಗೀತಗಾರರು ಪ್ರಮೋದ್ ಅವರ ಸಾಧನೆಗಳನ್ನು ಸಂಗೀತ ರೂಪದಲ್ಲಿ ಹಾಡಿ ಜನರನ್ನು ಸೆಳೆಯುತ್ತಿದ್ದಾರೆ.
ಕೀಬೋರ್ಡ್, ತಬಲಾ ವಾದಕರೂ ಇದರಲ್ಲಿದ್ದಾರೆ. ಮಲ್ಪೆಯ ಸಿಂಪೋನಿ ತಂಡದವರು ಹಾಡುಗಳನ್ನು ರಚಿಸಿದ್ದು, ಅವರ ಹಾಡುಗಾರರು ಸಂಗೀತ ಹಾಡಿ ಕಾರ್ಯಕ್ರಮ ನೀಡುತ್ತಿದ್ದಾರೆ. ಜನಸಂಚಾರವಿರುವ ಸ್ಥಳಗಳಿಗೆ ವಾಹನವು ತೆರಳಿ ಕಾರ್ಯಕ್ರಮ ನೀಡುತ್ತಲಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಎಲ್ಲೆಡೆ ಸಂಚರಿಸಿ ಪ್ರಚಾರ ಕಾರ್ಯವನ್ನು ಈ ಎರಡೂ ವಾಹನಗಳು ನಡೆಸಲಿದೆ.
ಪಕ್ಷದ್ದಲ್ಲ, ಅಭಿಮಾನಿಗಳಿಂದ ಪ್ರಚಾರ ಕಾಂಗ್ರೆಸ್ ಪಕ್ಷದ ಶಾಸಕರಾದರೂ, ವಾಹನದಲ್ಲಿ ಎಲ್ಲಿಯೂ ಕಾಂಗ್ರೆಸ್‌ನ ಇತರೆ ನಾಯಕರು, ಪಕ್ಷದ ಅಧಿಕೃತ ಚಿಹ್ನೆ, ಲೋಗೊಗಳು ಪ್ರಚಾರ ಕಾರ್ಯದಲ್ಲಿ ಯಾಕೆ ಬಳಕೆಯಾಗಿಲ್ಲ ಎನ್ನು ಕುರಿತು ಕೇಳಿದಾಗ, ಇದು ಪಕ್ಷದ ಪ್ರಚಾರವಲ್ಲ. ಪ್ರಮೋದ್ ಮಧ್ವರಾಜ್ ಅವರ ಅಭಿಮಾನಿಗಳಾದ ನಾವು ಪ್ರಮೋದ್ ಮಧ್ವರಾಜ್ ಅಭಿಮಾನಿಗಳ ಸಮಾಜಸೇವಾ ಸಂಘ ಬೆಂಗಳೂರು ಇದರ ವತಿಯಿಂದ ಹಮ್ಮಿಕೊಂಡಿರುವ ಪ್ರಚಾರ ಕಾರ್ಯಕ್ರಮ ಇದಾಗಿದೆ. ಇದಕ್ಕೆ ತಗಲುವ ಖರ್ಚನ್ನು ಕೂಡ ಸಂಘವೇ ಭರಿಸುತ್ತದೆ. ಹಾಗಾಗಿ ಪಕ್ಷದ ಚಿಹ್ನೆಯನ್ನು ಎಲ್ಲಿಯೂ ಬಳಸಿಕೊಂಡಿಲ್ಲ ಎಂದು ಸಂಘದ ರಾಜ್ಯಾಧ್ಯಕ್ಷ ಎಲ್. ರಾಹುಲ್ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.