ಕಟಪಾಡಿ: ಕಾಲೇಜಿಗೆ ಹೋದ ವಿದ್ಯಾರ್ಥಿನಿ ನಾಪತ್ತೆ
Team Udayavani, Sep 17, 2022, 7:13 AM IST
ಕಾಪು: ಉಡುಪಿಯ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಕಟಪಾಡಿ ಮಟ್ಟು ಅಳಿಂಜೆ ನಿವಾಸಿ ನವ್ಯಾ (20) ಗುರುವಾರ ಕಾಲೇಜಿಗೆ ತೆರಳಿದವಳು ನಾಪತ್ತೆಯಾಗಿರುವ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವ್ಯಾ ಸೆ. 15ರಂದು ಎಂದಿನಂತೆ ಕಾಲೇಜಿಗೆ ಹೋದವಳು ಮಧ್ಯಾಹ್ನ 1.30ಕ್ಕೆ ತಾಯಿಗೆ ಕರೆ ಮಾಡಿ ಬಸ್ಸಿನಲ್ಲಿ ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದು, ಅಪರಾಹ್ನ 2.30 ಆದರೂ ಮನೆಗೆ ತಲುಪಿಲ್ಲ. ಮನೆಯವರು ಮೊಬೈಲ್ಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ಆಫ್ ಆಗಿತ್ತು. ನವ್ಯಾ ಪತ್ತೆಯಾಗದ ಕಾರಣ ಆಕೆಯ ಹೆತ್ತವರು ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣಕ್ಕೆ ತಿರುವು
ಇದೇ ವೇಳೆ ಪಣಿಯೂರು ನಿವಾಸಿ ದೀಕ್ಷಿತ್ ಎಂಬಾತ ತಾನು ಕಟಪಾಡಿ ಮಟ್ಟು ಗ್ರಾಮದ ನವ್ಯಾ ವಿ. ಎಂಬಾಕೆ ಯೊಂದಿಗೆ ಹಿಂದೂ ಧರ್ಮದ ಪ್ರಕಾರದಲ್ಲಿ ಸೆ. 7ರಂದು ವಿವಾಹ ವಾಗಿದ್ದು, ಸೆ. 15ರಂದು ಉಡುಪಿ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದೇವೆ. ಈ ಬಗ್ಗೆ ಯಾರಾದರೂ ದೂರು ನೀಡಿದರೆ ಪೊಲೀಸ್ ತನಿಖೆ ನಡೆಸದಂತೆ ಮದುವೆಯ ಫೋಟೋ ಸಹಿತವಾಗಿ ಕಟಪಾಡಿ ಹೊರ ಠಾಣೆಯ ಮೂಲಕ ವಾಗಿ ಕಾಪು ಪೊಲೀಸ್ ಠಾಣೆಗೆ ನೀಡಿ ರುವ ಮನವಿಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.