ಕಾರ್ಕಳ: ಮನೆಯಿಂದ ಹೊರಹೋದ ಮಹಿಳೆ ನಾಪತ್ತೆ
Team Udayavani, May 11, 2022, 7:35 PM IST
ಕಾರ್ಕಳ: ನಿಟ್ಟೆ ಪರಪ್ಪಾಡಿ ನಿವಾಸಿ ಸಹನಾ (23) ಕಾಣೆಯಾದ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಹನಾ ಮಂಗಳೂರಿನ ದಿನೇಶ್ ಕುಮಾರ್ ಅವರನ್ನು ವಿವಾಹವಾಗಿದ್ದು, ಎರಡು ತಿಂಗಳು ಸಂಸಾರ ನಡೆಸಿದ ಬಳಿಕ ವೈಮನಸ್ಸು ಉಂಟಾಗಿ ವಿವಾಹ ವಿಚ್ಛೇದನ ಪಡೆದು ತಾಯಿ ಮನೆಯಲ್ಲಿ ವಾಸವಿದ್ದರು.
ಎ. 14ರಂದು ಮಧ್ಯಾಹ್ನ ಎರಡು ಗಂಟೆ ವೇಳೆಗೆ ಮನೆಯಿಂದ ಹೊರ ಹೋದವರು ಬಳಿಕ ವಾಪಸು ಬಾರದೆ ಕಾಣೆಯಾಗಿದ್ದಾರೆ.
ಮಹಿಳೆ 5.4 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು ಹಳದಿ ಬಣ್ಣದ ಚೂಡಿದಾರ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕನ್ನಡ, ತುಳು, ಕೊಂಕಣಿ ಭಾಷೆ ಮಾತನಾಡುತ್ತಾರೆ. ಈ ಚಹರೆಯುಳ್ಳ ಮಹಿಳೆ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಕಾರ್ಕಳ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಬೆಳ್ಮಣ್: ಮಹಿಳೆ ನಾಪತ್ತೆ
ಕಾರ್ಕಳ: ಕಾಪು ತಾಲೂಕಿನ ಶಿರ್ವ ತುಪ್ಪಪಾದೆ ಪದವು ನಿವಾಸಿ ನಂಜಮ್ಮ ಅವರ ಪುತ್ರಿ ಆಶಾ (32) ನಾಪತ್ತೆಯಾದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿದೇಶಕ್ಕೆ ತೆರಳಿದ್ದ ಅವರು ಎ. 24ಕ್ಕೆ ವಾಪಸಾಗಿದ್ದು ಕಾರ್ಕಳದ ಬೆಳ್ಮಣ್ ಗ್ರಾಮದ ಜಂತ್ರದಲ್ಲಿ ಗಂಡನ ಮನೆಯಲ್ಲಿದ್ದರು. ಎ. 25ರಂದು ಮಧ್ಯಾಹ್ನ ಮನೆಯಿಂದ ಹೇಳದೆ ಹೊರಗೆ ಹೋಗಿದ್ದು ವಾಪಸು ಬಂದಿರುವುದಿಲ್ಲ. ಈಕೆ ಪತ್ತೆಯಾದಲ್ಲಿ ಹತ್ತಿರದ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
AjekarCase: ತನಿಖೆ ದಿಕ್ಕು ತಪ್ಪುತ್ತಿದೆ: ದಿಲೀಪ್ ತಂದೆ ವಿರುದ್ದ ಬಾಲಕೃಷ್ಣ ಮನೆಯವರ ಆರೋಪ
Katpadi: ಭತ್ತದ ತೆನೆಯಿಂದಲೇ ಆಟೋ ರಿಕ್ಷಾ ಅಲಂಕರಿಸಿ ಸಂಭ್ರಮಿಸಿದ ಚಾಲಕ
Udupi: ಗೀತಾರ್ಥ ಚಿಂತನೆ-83: ಅಪೇಕ್ಷಿತ-ಅನಪೇಕ್ಷಿತ ವಂಶವಾಹಿಗಳು
Congress Govt.,: ರಾಜ್ಯ ಸರಕಾರದ ವಿರುದ್ಧ ಮೂರು ಹಂತದ ಪ್ರತಿಭಟನೆ: ಕಿಶೋರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.