ಕೋಡಿಗೆ ಶಾಸಕ ಹಾಲಾಡಿ ಭೇಟಿ : ತೆರವಿಗೆ ಸೂಚನೆ
Team Udayavani, Jul 8, 2018, 6:40 AM IST
ಕುಂದಾಪುರ: ಕೋಡಿ ಬ್ರೇಕ್ ವಾಟರ್ ನಿರ್ಮಾಣ ಕಾಮಗಾರಿಯಿಂದಾಗಿ ಸಮುದ್ರದಲ್ಲಿ ಮರಳು ದಿಬ್ಬದಿಂದಾಗಿ ಮೀನುಗಾರರಿಗೆ ತೊಂದರೆಯಾಗಿದ್ದು, ಮುಂದಿನ ಮೀನುಗಾರಿಕೆ ಋತುವಿಗೆ ಮುನ್ನ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭರವಸೆ ನೀಡಿದರು.
ಅವರು ಶನಿವಾರ ಕೋಡಿಯಲ್ಲಿ ನಿರ್ಮಾಣವಾಗುತ್ತಿರುವ ತಡೆಗೋಡೆ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೋಡಿಯ ಸಮುದ್ರದಲ್ಲಿ ಸಂಗ್ರಹವಾದ ಮರಳು ದಿಬ್ಬದಿಂದ ಮುಂದಿನ ಋತುವಿನಲ್ಲಿ ಬೋಟುಗಳು ತೆರಳಲು ತೊಂದರೆಯಾಗಲಿದೆ ಎನ್ನುವ ಮೀನುಗಾರರ ಮನವಿಗೆ ಸ್ಪಂದಿಸಿದ ಶಾಸಕರು ಈ ಕುರಿತು ಬೆಳಗ್ಗೆ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಇಂಜಿನಿಯರ್ ಹಾಗೂ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಮೀನುಗಾರಿಕೆ ಆರಂಭವಾಗುವುದರೊಳಗೆ ಆ ಮರಳನ್ನು ತೆರವು ಮಾಡಲು ಸೂಚನೆ ನೀಡಿದ್ದೇನೆ ಎಂದರು.
ಕೋಡಿಯ ಮೀನುಗಾರರ ಸಮಸ್ಯೆ ಕುರಿತು ಮೀನುಗಾರ ನಾಗರಾಜ್ ಕಾಂಚನ್ ಮಾತನಾಡಿ, ಕೋಡಿಯ ಬ್ರೇಕ್ ವಾಟರ್ ಕಾಮಗಾರಿ ವೇಳೆ ಹೂಳೆತ್ತಿ, ಅದನ್ನು ಸಮುದ್ರದ ಹೊರಗೆ ಹಾಕದೇ ಅಲ್ಲಿಯೇ ರಾಶಿ ಹಾಕಿದ್ದಾರೆ. ಇದರಿಂದ ಈಗ ಸಮಸ್ಯೆ ಉದ್ಭವವಾಗಿದೆ. ಅದನ್ನು ಕೂಡಲೇ ಅಲ್ಲಿಂದ ತೆರವು ಮಾಡದಿದ್ದರೆ, ಆಗಸ್ಟ್ ನಲ್ಲಿ ಮೀನುಗಾರಿಕಾ ಋತು ಪ್ರಾರಂಭವಾದ ಬೋಟುಗಳು ತೆರಳಲು ತೊಂದರೆಯಾಗಲಿದೆ ಎಂದವರು ಹೇಳಿದರು.
ಈ ಬಗ್ಗೆ ಜೂ. 15ರಂದು ವಿಸ್ತೃತವಾಗಿ ಉದಯವಾಣಿ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನಸೆಳೆದಿತ್ತು.ಈ ಸಂದರ್ಭದಲ್ಲಿ ಕೋಡಿ ಭಾಗದ ಅನೇಕ ಮಂದಿ ಮೀನುಗಾರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.