ಕಾಂಗ್ರೆಸ್‌ನವರಿಗೆ ಮತದಾರರೇ ಸರಿಯಿಲ್ಲ ಎನಿಸೀತು: ಸಚಿವ ಸುನಿಲ್ ಕುಮಾರ್ ವ್ಯಂಗ್ಯ
Team Udayavani, Dec 4, 2022, 5:50 AM IST
ಉಡುಪಿ : ಕಾಂಗ್ರೆಸ್‌ಗೆ ಆರೋಪ ಮಾಡುವುದರಲ್ಲಿ ಗಂಭೀರತೆ ಇದೆಯೇ ಹೊರತು, ವಾಸ್ತವತೆ ಅರಿಯುವುದರಲ್ಲಿ ಇಲ್ಲ. ಈ ಹಿಂದೆ ಮತದಾನ ಯಂತ್ರ ಸರಿಯಿಲ್ಲ ಎಂದಿದ್ದರು, ಈಗ ಮತದಾರ ಪಟ್ಟಿ ಸರಿಯಿಲ್ಲ ಎನ್ನುತ್ತಿದ್ದಾರೆ. 2024ರ ವೇಳೆಗೆ ಮತದಾರರೇ ಸರಿಯಿಲ್ಲ ಎನ್ನಬಹುದು ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ಉಡುಪಿಯಲ್ಲಿ ಶನಿವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜನ ಮಾನಸದಿಂದ ಸಂಪೂರ್ಣ ದೂರವಾಗಿದೆ. ಚುನಾವಣೆಯಲ್ಲಿ ಸೋತಾಗಲೆಲ್ಲ ಒಂದೊಂದು ಆರೋಪ ಮಾಡುವುದು ಸಾಮಾನ್ಯ ವಾಗಿಬಿಟ್ಟಿದೆ. ಈಗ ಮತದಾರರ ಪಟ್ಟಿ ಸರಿಯಿಲ್ಲ ಎನ್ನುತ್ತಿದ್ದಾರೆ ಎಂದರು.
ಕಾರ್ಕಳದಲ್ಲೇ ಸ್ಪರ್ಧೆ
ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ನವರು ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ವೈಯಕ್ತಿಕ ಟೀಕೆ, ಸರಕಾರ ಹಾಗೂ ಶಾಸಕ, ಸಚಿವರ ವಿರುದ್ಧ ಅಪಪ್ರಚಾರ, ಸುಳ್ಳು ಆರೋಪ ಮಾಡವುದರಲ್ಲಿ ನಿರತರಾಗುತ್ತಾರೆ. ಸುನಿಲ್ ಕುಮಾರ್ ಬೇರೆ ಕಡೆ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುಳ್ಳು ಸುದ್ದಿಯನ್ನು ಕಾಂಗ್ರೆಸ್‌ನವರೇ ಹಬ್ಬಿಸಿದ್ದು. ನಾನು ಪಕ್ಷದಿಂದ ಕಾರ್ಕಳದಲ್ಲೇ ಟಿಕೆಟ್ ನೀಡಬೇಕು ಎಂದು ಕೋರಿಕೊಂಡಿದ್ದೇನೆ ಹಾಗೂ ಕಾರ್ಕಳದಿಂದಲೇ ರಾಜಕೀಯ ಆರಂಭಿ ಸಿದ್ದು, ಇಲ್ಲಿಯೇ ಮುಂದು ವರಿಯಲಿದ್ದೇನೆ ಎಂದು ತಿಳಿಸಿದರು.
ರೌಡಿಗಳಿಗೆ ಅವಕಾಶವಿಲ್ಲ
ರೌಡಿಗಳನ್ನು ಅಥವಾ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನು ಪಕ್ಷಕ್ಕೆ ಆಹ್ವಾನಿ ಸುವ ಪ್ರಶ್ನೆಯೇ ಇಲ್ಲ ಮತ್ತು ಅಂಥವರನ್ನು ವೈಭವಿಕರಿಸುವುದು ಸರಿಯಲ್ಲ. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಸೂಕ್ತ ನಿರ್ದೇಶನ ನೀಡಿದ್ದಾರೆ. ಸಣ್ಣಪುಟ್ಟ ತಪ್ಪುಗಳು ಆಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲಾಗುವುದು ಎಂದರು.
ವಿದ್ಯುತ್ ದರ ಇಳಿಸಲು ಕ್ರಮ
ರಾಜ್ಯದಲ್ಲಿ ಇಂಧನ ಇಲಾಖೆಯಿಂದ ಸಾಕಷ್ಟು ಸುಧಾರಣೆ ತರುತ್ತಿದ್ದೇವೆ. ಈಗಾಗಲೇ ಎಲ್‌ಎನ್‌ಡಿಯಿಂದ ಆಗಿರುವ ನಷ್ಟ ಪತ್ತೆ ಮಾಡಿ ಅದನ್ನು ಸರಿದೂಗಿಸುವ ಹಾಗೂ ನಷ್ಟ ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸಂಸ್ಥೆಗಳ ಜತೆಗೆ ಮಾತುಕತೆ ಮಾಡಿದ್ದೇವೆ. ಇಂಧನ ಇಲಾಖೆಯ ಶುಲ್ಕ/ಟ್ಯಾರಿಫ್ ಕಡಿಮೆ ಮಾಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದ್ದೇವೆ. ಈಗಾಗಲೇ ಎಸ್ಕಾಂ ಇದೇ ವಿಚಾರವಾಗಿ ಮುಂದೆ ಬಂದಿದೆ. 70 ಪೈಸೆಯಿಂದ 20 ರೂ. ವರೆಗೂ ಕಡಿಮೆ ಮಾಡುವ ಪ್ರಸ್ತಾವನೆ ಮುಂದಿಟ್ಟಿದೆ. ಕೆಲವು ದಿನದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಈ ಮೂಲಕ ಜನಸ್ನೇಹಿ ಆಡಳಿತ ನೀಡಲಿದ್ದೇವೆ. ಈಗಾಗಲೇ 100ಕ್ಕೂ ಅಧಿಕ ಸಬ್‌ಸ್ಟೇಷನ್ ಉನ್ನತೀಕರಿಸಿ, 40 ಹೊಸ ಸಬ್‌ಸ್ಟೇಷನ್ ಆರಂಭಿಸಿದ್ದೇವೆ ಎಂದು ಸಚಿವ ಸುನಿಲ್ ಕುಮಾರ್ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.