ಮೋದಿ ಸಮಾವೇಶಕ್ಕೆ ಉಡುಪಿಯಲ್ಲಿ ಭರ್ಜರಿ ಸಿದ್ಧತೆ
Team Udayavani, Apr 29, 2018, 6:00 AM IST
ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರು ಮೇ 1ರಂದು ಉಡುಪಿ ಎಂಜಿಎಂ ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಬೃಹತ್ ವೇದಿಕೆಯನ್ನು ಸಿದ್ಧಪಡಿಸುವ ಕಾರ್ಯ ಬಹುತೇಕ ಪೂರ್ಣಗೊಳ್ಳುವ ಹಂತ ತಲುಪಿದೆ. ಎ. 29ರ ವೇಳೆಗೆ ವೇದಿಕೆ ಪೂರ್ಣಗೊಳ್ಳಲಿದೆ ಎಂದು ವೇದಿಕೆ ಜವಾಬ್ದಾರಿ ಹೊತ್ತಿರುವ ಬಿಜೆಪಿ ಮುಂದಾಳುಗಳು ತಿಳಿಸಿದ್ದಾರೆ.
ನರೇಂದ್ರ ಮೋದಿಯವರ ಜತೆಗೆ ಯಾವ ನಾಯಕರೆಲ್ಲ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂಬುದು ಇನ್ನಷ್ಟೆ ಅಂತಿಮಗೊಳ್ಳಬೇಕಾಗಿದೆ. ಸುಮಾರು 40 ಗಿ 30 ಅಡಿ ವಿಸ್ತೀರ್ಣದ ವೇದಿಕೆ ನಿರ್ಮಾಣ ಕೆಲಸ ನಡೆದಿದೆ. ಮೈದಾನ ಒಂದು ಲಕ್ಷ ಮಂದಿಯ ಸಾಮರ್ಥ್ಯ ಹೊಂದಿದೆ. ಸದ್ಯ ಬೀಡಿನಗುಡ್ಡೆ ಬಯಲು ರಂಗಮಂದಿರ ಹೊರತು ಪಡಿಸಿದರೆ ಉಡುಪಿ ಕೇಂದ್ರ ಭಾಗದಲ್ಲಿ ಲಭ್ಯವಿರುವ ದೊಡ್ಡ ಮೈದಾನವೆಂದರೆ ಎಂಜಿಎಂ ಮೈದಾನ ಮಾತ್ರ. ಈ ಬಾರಿ ಉಡುಪಿಯಲ್ಲಿ ಜರಗಿದ ಧರ್ಮಸಂಸದ್ ಸಂದರ್ಭದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಕೂಡ ಇದೇ ಮೈದಾನದಲ್ಲಿ ನಡೆದಿತ್ತು. ಮೋದಿ ಸಮಾವೇಶಕ್ಕೆ 10,000ದಷ್ಟು ಬೈಕ್ ಮತ್ತು 2,000ದಷ್ಟು ಕಾರುಗಳಲ್ಲಿ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ. ನೀತಿ ಸಂಹಿತೆ ಪಾಲಿಸಬೇಕಾಗಿರುವುದರಿಂದ ಯಾವುದೇ ರ್ಯಾಲಿ ಹಮ್ಮಿಕೊಂಡಿಲ್ಲ ಎಂದು ಜಿಲ್ಲಾ ಬಿಜೆಪಿ ಮುಖಂಡರು ತಿಳಿಸಿದ್ದಾರೆ.
1992ರಲ್ಲಿ ಉಡುಪಿಗೆ ಮೋದಿ ಪ್ರಥಮ ಭೇಟಿ
ಉಡುಪಿ: ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಥಮ ಬಾರಿಗೆ ಮೇ 1ರಂದು ಭೇಟಿ ನೀಡುತ್ತಿದ್ದರೆ ಇದಕ್ಕೂ ಹಿಂದೆ 3 ಬಾರಿ ಆಗಮಿಸಿದ್ದರು. 1992ರಲ್ಲಿ ಉಡುಪಿಗೆ ಬಂದದ್ದು ಪ್ರಥಮ ಬಾರಿ. ಆಗ ಲಾಲ್‌ಕೃಷ್ಣ ಆಡ್ವಾಣಿ ಅವರ ರಥಯಾತ್ರೆ ಸಂಯೋಜನೆಗಾಗಿ ನರೇಂದ್ರ ಮೋದಿ ಕರಾವಳಿಗೆ ಭೇಟಿ ಕೊಟ್ಟರು. ಮೋದಿ ಅಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ರಥಯಾತ್ರೆ ಪೂರ್ವತಯಾರಿ ಸಭೆ ನಡೆದದ್ದು ಡಾ| ವಿ.ಎಸ್. ಆಚಾರ್ಯರ ಮನೆಯಲ್ಲಿ. ನಾಯಕರಾದ ಡಾ|ವಿ.ಎಸ್. ಆಚಾರ್ಯ, ಯೋಗೀಶ ಭಟ್, ಮೋನಪ್ಪ ಭಂಡಾರಿ, ಕೃಷ್ಣಾನಂದ ಕಾಮತ್, ಕೈಯೂರು ನಾರಾಯಣ ಭಟ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ನಡೆದ ಬಳಿಕ ಡಾ| ಆಚಾರ್ಯರ ಮನೆ ಆವರಣದಲ್ಲಿ ಚಿತ್ರವನ್ನು ತೆಗೆಯಲಾಯಿತು.
1991ರಲ್ಲಿ ರಾಜಸ್ಥಾನದ ಜೈಪುರದಲ್ಲಿ ಬಿಜೆಪಿ ಆರ್ಥಿಕನೀತಿ ಕುರಿತುರಾಷ್ಟ್ರೀಯಅಧಿವೇಶನ ನಡೆದಾಗ ಮೋದಿಯವರು ಕರ್ನಾಟಕದವರ ಸಭೆ ನಡೆಸಿದ್ದರು. ಆಗ ಜಿಲ್ಲಾವಾರು ವರದಿ ತೆಗೆದುಕೊಂಡಿದ್ದರು. ಆ ಸಭೆಯಲ್ಲಿ ಡಾ| ಆಚಾರ್ಯ, ಸೋಮ
ಶೇಖರ ಭಟ್, ಪ. ವಸಂತ ಭಟ್, ಪಂಢರೀನಾಥ ಭಟ್, ಶ್ಯಾಮಲಾ ಪಂಢರೀನಾಥ ಭಟ್, ಮೋಹನ ಉಪಾಧ್ಯ, ರಾಮಚಂದ್ರ ಆಚಾರ್ಯ ಮೊದಲಾದವರು ಪಾಲ್ಗೊಂಡಿದ್ದೆವು ಎಂದು ಎರಡೂ ಸಭೆಯಲ್ಲಿದ್ದ ಉಡುಪಿಯ ಹಿರಿಯ ಕಾರ್ಯಕರ್ತ ಗುಜ್ಜಾಡಿ ಪ್ರಭಾಕರ ನಾಯಕ್ ನೆನಪಿಸಿಕೊಳ್ಳುತ್ತಾರೆ. ಮೋದಿ 2004ರಲ್ಲಿ ಚಿತ್ತರಂಜನ್ ಸರ್ಕಲ್, 2008ರಲ್ಲಿ ಮಲ್ಪೆ ಕಡಲ ತೀರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.