ಮೋದಿ ಉಡುಪಿ ಆಗಮನ ಹಿನ್ನೆಲೆ ಸಂಚಾರ ಬದಲಾವಣೆ
Team Udayavani, Apr 30, 2018, 1:50 PM IST
ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನ, ಎಂಜಿಎಂ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಮೇ 1ರಂದು ಉಡುಪಿಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮೇ 1ರಂದು ಮಧ್ಯಾಹ್ನ 12 ಗಂಟೆಯಿಂದ ಕಾರ್ಯಕ್ರಮ ಮುಕ್ತಾಯದ ವರೆಗೂ ಈ ಆದೇಶ ಜಾರಿಯಲ್ಲಿರುತ್ತದೆ.
- ಕಾರ್ಕಳ, ಹೆಬ್ರಿ, ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ಎಲ್ಲ ಘನ ವಾಹನಗಳು ಇಂದ್ರಾಳಿ ಜಂಕ್ಷನ್ ಸೇತುವೆ ಬಳಿ ಯು- ಟರ್ನ್ ಪಡೆದು ಮರಳಬೇಕು.
- ಮಣಿಪಾಲದಿಂದ ಉಡುಪಿಗೆ ಬರುವ ಲಘು ವಾಹನಗಳು ಇಂದ್ರಾಳಿ, ಬುಡ್ನಾರು – ಬೀಡಿನಗುಡ್ಡೆ – ಮಿಷನ್ ಕಾಂಪೌಂಡ್ ಮಾರ್ಗವಾಗಿ ಉಡುಪಿಗೆ ಬರಬೇಕು.
- ಮಂಗಳೂರಿನಿಂದ ಉಡುಪಿಗೆ ಬರುವ ಎಲ್ಲ ಬಸ್ ಹಾಗೂ ವಾಹನ ಗಳು ಅಂಬಲಪಾಡಿ, ಅಜ್ಜರಕಾಡು, ಜೋಡುಕಟ್ಟೆಗೆ ಬಂದು ಕಿನ್ನಿಮೂಲ್ಕಿ – ಬಲಾಯಿಪಾದೆ ಮಾರ್ಗವಾಗಿ ಮಂಗಳೂರಿಗೆ ಹಿಂದಿರುಗಬೇಕು.
- ಮಲ್ಪೆಯಿಂದ ಉಡುಪಿಗೆ ಬರುವ ಎಲ್ಲ ಬಸ್ ಹಾಗೂ ವಾಹನಗಳು ಕಲ್ಮಾಡಿಯಾಗಿ ಅಂಬಲಪಾಡಿ- ಅಜ್ಜರ ಕಾಡು-ಜೋಡುಕಟ್ಟೆಗೆ ಬಂದು ಅಲ್ಲಿಂದ ಕಿನ್ನಿಮೂಲ್ಕಿ ಮುಖಾಂತರ ಮಲ್ಪೆಗೆ ಹಿಂದಿರುಗಬೇಕು.
- ಅಂಬಾಗಿಲಿನಿಂದ ಉಡುಪಿಗೆ ಬರುವ ಎಲ್ಲ ಬಸ್ ಹಾಗೂ ವಾಹನ ಗಳು ಗುಂಡಿಬೈಲು ರಸಿಕ ಬಾರ್ ಜಂಕ್ಷನ್ ನಿಂದಲೇ ಯು ಟರ್ನ್ ಪಡೆದು ವಾಪಸಾಗಬೇಕು.
- ಕುಂದಾಪುರ ಕಡೆಯಿಂದ ಉಡುಪಿಗೆ ಆಗಮಿಸುವ ಬಸ್ ಹಾಗೂ ಇತರ ವಾಹನಗಳು ಕರಾವಳಿಗೆ ಬಂದು ಶಾರದಾ ಹೋಟೆಲ್ ಬಳಿಯೇ ಯು ಟರ್ನ್ ಪಡೆದು ವಾಪಸಾಗಬೇಕು.
ಇತರ ಮಾರ್ಗ ಬದಲಾವಣೆ
- ಮಣಿಪಾಲ ಟೈಗರ್ ಸರ್ಕಲ್- ಅಲೆವೂರು- ಕುಕ್ಕಿಕಟ್ಟೆ- ಬೀಡಿನಗುಡ್ಡೆ ಅಥವಾ ಕೊರಂಗ್ರಪಾಡಿ ಜಂಕ್ಷನ್- ರಾ. ಹೆದ್ದಾರಿ
- ಸಿಂಡಿಕೇಟ್ ಜಂಕ್ಷನ್ – ಡಿಸಿ ಆಫೀಸ್ ಜಂಕ್ಷನ್-ಪೆರಂಪಳ್ಳಿ-ಅಂಬಾಗಿಲು
- ಅಂಬಲಪಾಡಿ-ಜೋಡುಕಟ್ಟೆ – ಕಿನ್ನಿಮೂಲ್ಕಿ- ಬಲಾಯಿಪಾದೆ
- ಅಂಬಾಗಿಲು-ಪೆರಂಪಳ್ಳಿ ಕ್ರಾಸ್-ಮಣಿಪಾಲ
- ಮಲ್ಪೆ- ಸಿಟಿಜನ್ ಸರ್ಕಲ್- ಆಶೀರ್ವಾದ್ ಜಂಕ್ಷನ್- ಸಂತೆಕಟ್ಟೆ
- ಮಲ್ಪೆ- ಕಲ್ಮಾಡಿ- ಕಿದಿಯೂರು- ಅಂಬಲಪಾಡಿ
ಪಾರ್ಕಿಂಗ್ ಎಲ್ಲೆಲ್ಲಿ ?
- ಉಡುಪಿ ಶಾರದಾ ಮಂಟಪ ಜಂಕ್ಷನ್ ಬಳಿಯ ಸುಧೀಂದ್ರ ಮಂಟಪ ರಸ್ತೆಯಲ್ಲಿ ಮೇ 1ರ ಬೆಳಗ್ಗೆ 10ರಿಂದ ರಾತ್ರಿ 8ರ ವರೆಗೆ ದ್ವಿಚಕ್ರ ವಾಹನ ಪಾರ್ಕಿಂಗ್‌ಗಾಗಿ ಅನ್ಯ ವಾಹನಗಳ ಓಡಾಟ ನಿಷೇಧಿಸಲಾಗಿದೆ.
- ಉಡುಪಿ ಗೋಸುಲಟ್ಟೆ ರಸ್ತೆ (ಎಂಜಿಎಂ ಲೇಡೀಸ್ ಹಾಸ್ಟೆಲ್ ಬಳಿ ರಸ್ತೆ) ಯಲ್ಲಿ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆಯ ವರೆಗೆ ದ್ವಿಚಕ್ರ ವಾಹನ ಪಾರ್ಕಿಂಗ್‌ಗಾಗಿ ಬೇರೆ ವಾಹನಗಳ ಓಡಾಟ ನಿಷೇಧಿಸಲಾಗಿದೆ.
- ಮಲ್ಪೆ ಭಾಗದಿಂದ ಬರುವ ದ್ವಿಚಕ್ರ ವಾಹನಗಳಿಗೆ ಕಡಿಯಾಳಿ ಕಮಲಾಬಾೖ ಹೈಸ್ಕೂಲ್ ಮೈದಾನ, ಕಾರುಗಳಿಗೆ ಕಡಿಯಾಳಿ ಆತೀಫ್ ಹುಸೇನ್ ಎಸ್ಟೇಟ್‌ನಲ್ಲಿ ಪಾರ್ಕಿಂಗ್.
- ಕುಂದಾಪುರ, ಕಾರವಾರ, ಬೈಂದೂರು ಮತ್ತು ಬ್ರಹ್ಮಾವರ ಭಾಗದ ದ್ವಿಚಕ್ರ ವಾಹನಗಳಿಗೆ ಶಾರದಾ ಮಂಟಪ ಜಂಕ್ಷನ್ ಬಳಿ ಇರುವ ಸುಧೀಂದ್ರ ಮಂಟಪ ರಸ್ತೆ, ಕಾರು ಗಳಿಗೆ ರಾಜಾಂಗಣ ಪಕ್ಕದ ಪಾರ್ಕಿಂಗ್ ಸ್ಥಳ, ಬಸ್ಸುಗಳಿಗೆ ರಾಯಲ್‌ಗಾರ್ಡನ್‌ನಲ್ಲಿ ನಿಲುಗಡೆ.
- ಕಾರ್ಕಳ, ಹೆಬ್ರಿ, ಚಿಕ್ಕಮಗಳೂರು ಭಾಗದಿಂದ ಬರುವ ದ್ವಿಚಕ್ರ ವಾಹನಗಳಿಗೆ ಎಂಜಿಎಂ ಕಾಲೇಜು ಲೇಡೀಸ್ ಹಾಸ್ಟೆಲ್ ರಸ್ತೆ, ಕಾರುಗಳಿಗೆ ಬೀಡಿನಗುಡ್ಡೆ, ಬಸ್ಸುಗಳಿಗೆ ಮಣಿಪಾಲ ಎಂಜೆಸಿ ಮೈದಾನದಲ್ಲಿ ಪಾರ್ಕಿಂಗ್.
- ಕಾಪು, ಪಡುಬಿದ್ರಿ, ಮೂಲ್ಕಿ, ಮಂಗಳೂರಿ ನಿಂದ ಬರುವ ದ್ವಿಚಕ್ರ ವಾಹನಗಳಿಗೆ ಸುಧೀಂದ್ರ ಮಂಟಪ ರಸ್ತೆ, ಕಾರು ಮತ್ತು ಬಸ್ಸುಗಳಿಗೆ ಬೀಡಿನಗುಡ್ಡೆಯಲ್ಲಿ ನಿಲುಗಡೆ.
- ಶಾರದಾ ರೆಸಿಡೆನ್ಸಿಯಲ್ ಹಾಸ್ಟೆಲ್ ಮೈದಾನ ವಿಐಪಿ ಪಾರ್ಕಿಂಗ್ ಸ್ಥಳವಾಗಿರುತ್ತದೆ. ಟಿ.ಎಂ.ಎ ಪೈ ಆಂಗ್ಲ ಮಾಧ್ಯಮ ಶಾಲೆ ಮೈದಾನ ಮಾಧ್ಯಮದವರು, ಪಕ್ಷದ, ಇತರ ವಿಐಪಿಗಳಿಗೆ ಪಾರ್ಕಿಂಗ್ ಸ್ಥಳ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.