ಕೆಸರುಗದ್ದೆಯಾದ ಮೊಗೆಬೆಟ್ಟು – ಮೂಡುಬೆಟ್ಟು ಸಂಪರ್ಕ ರಸ್ತೆ
Team Udayavani, Jul 30, 2018, 6:00 AM IST
ತೆಕ್ಕಟ್ಟೆ : ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗೆಬೆಟ್ಟು – ಮೂಡುಬೆಟ್ಟು ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ನಿತ್ಯ ಪರದಾಟ
ಮೊಗೆಬೆಟ್ಟು ಶ್ರೀ ಚಿಕ್ಕಮ್ಮ ಹಾçಗುಳಿ ದೈವ ಸ್ಥಾನದಿಂದ ಸುಮಾರು ನೂರಕ್ಕೂ ಅಧಿಕ ಜನ ವಸತಿಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ 3 ಕಿ.ಮೀ. ಮಣ್ಣಿನ ರಸ್ತೆ ಮಳೆಗಾಲದಲ್ಲಿ ಸಂಚಾರಕ್ಕೆ ಅಯೋಗ್ಯವಾಗಿದೆ. ಪರಿಣಾಮ ನಿತ್ಯ ಸಂಚರಿಸುವ ಸಾರ್ವಜನಿಕರು, ವಿದ್ಯಾರ್ಥಿಗಳು, ಗ್ರಾಮೀಣ ಭಾಗದವರು ತೊಂದರೆ ಅನುಭವಿಸುತ್ತಿದ್ದಾರೆ.
ಇದೇ ಪ್ರಮುಖ ಮಾರ್ಗ
ಗ್ರಾಮೀಣ ಭಾಗದ ನೂರಾರು ಮಂದಿ ಈ ಮಾರ್ಗವನ್ನೇ ಅವಲಂಬಿಸು ವುದರಿಂದ ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಕೆಸರುಮಯವಾಗುತ್ತಿದೆ. ಕುಂದಾಪುರ, ತೆಕ್ಕಟ್ಟೆ, ಬ್ರಹ್ಮಾವರ ಸೇರಿದಂತೆ ವಿವಿಧ ವಿದ್ಯಾ ಸಂಸ್ಥೆಗಳಿಂದ ಬರುವ ಶಾಲಾ ವಾಹನಗಳ ಚಕ್ರ ಕೆಸರಿನಲ್ಲಿ ಹೂತು ಹೋಗಿ ವಾಹನ ಚಾಲಕರು ತೀವ್ರ ತೊಂದರೆ ಅನುಭವಿಸಿದ ಪ್ರಸಂಗಗಳೂ ಸಂಭವಿಸಿವೆ. ಇದರಿಂದ ಶಾಲಾ ವಾಹನಗಳು ಈ ಮಾರ್ಗದಲ್ಲಿ ಬರಲು ನಿರಾಕರಿಸುತ್ತಿವೆ.
ಬೇಡಿಕೆ ಈಡೇರಿಲ್ಲ
ಗ್ರಾ.ಪಂ. ಹಳೆಯದಾದ ಮಣ್ಣಿನ ರಸ್ತೆ ಇದಾಗಿದ್ದು. ಹಲವು ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ. ಗ್ರಾಮಸ್ಥರ ಹಲವು ವರ್ಷದ ಡಾಮರು ರಸ್ತೆಯ ಬೇಡಿಕೆ ಇದು ವರೆಗೂ ಕೂಡಾ ಸಾಕಾರಗೊಳ್ಳದಿರುವುದು ಬೇಸರದ ಸಂಗತಿ.
– ಬಿ. ಆನಂದ ಶೆಟ್ಟಿ,ನಿವೃತ್ತ ಪೊಲೀಸ್ ಅಧಿಕಾರಿ
1.30 ಲ.ರೂ. ವಿನಿಯೋಗ
ಹಿಂದಿನ ಗ್ರಾ.ಪಂ.ನ ಕ್ರಿಯಾಯೋಜನೆಯಲ್ಲಿ ಈ ರಸ್ತೆ ಒಳ ಚರಂಡಿ ಹಾಗೂ ಹೊಂಡ ಗುಂಡಿ ಮುಚ್ಚಿ ಸಮತಟ್ಟು ಮಾಡುವ ನಿರ್ವಹಣೆಗಾಗಿ ಸುಮಾರು 1.30 ಲಕ್ಷ ರೂ. ವಿನಿಯೋಗಿಸಿದ್ದೇವೆ .
– ಬಿ.ಕರುಣಾಕರ ಶೆಟ್ಟಿ , ಅಧ್ಯಕ್ಷರು, ಗ್ರಾ.ಪಂ. ಬೇಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.