ಮಠಮಂದಿರ: ಸರಕಾರದ ಹಸ್ತಕ್ಷೇಪಕ್ಕೆ ಪ್ರಬಲ ಆಕ್ಷೇಪ
Team Udayavani, Nov 26, 2017, 6:00 AM IST
ಉಡುಪಿ: ಮಠ-ಮಂದಿರ ಸರಕಾರೀಕರಣ ಬೇಡ, ಅದು ಸಾಮಾಜೀಕರಣವಾಗಲಿ. ಸಂತರು, ಭಕ್ತರ ಕೈಯಲ್ಲಿ ದೇಗುಲಗಳ ಕೀಲಿ ಕೈ ಇರಲಿ. ಇದು ಉಡುಪಿಯಲ್ಲಿ ನಡೆಯುತ್ತಿರುವ ಐತಿ ಹಾಸಿಕ “ಧರ್ಮಸಂಸದ್ – 2017’ರಲ್ಲಿ ದೇವರ ನಾಡು ಕೇರಳದಿಂದ ಆರಂಭಿಸಿ ಹಿಮಾಚಲ ಪ್ರದೇಶ, ಹರಿದ್ವಾರ, ಮಧ್ಯಪ್ರದೇಶ ಸಹಿತ ವಿವಿಧ ರಾಜ್ಯಗಳ ಸಾಧುಸಂತರಿಂದ ವ್ಯಕ್ತವಾದ ಒಕ್ಕೊರಲ ದನಿ.
ಎರಡನೇ ದಿನ ಶನಿವಾರ ನಡೆದ ಗೋಷ್ಠಿಯಲ್ಲಿ ಮಠ ಮಂದಿರ, ದೇವಸ್ಥಾನಗಳ ಮೇಲೆ ಸರಕಾರದ ಹಸ್ತ ಕ್ಷೇಪದ ವಿರುದ್ಧ ಕೇರಳದ ಅಯ್ಯಪ್ಪ ದಾಸ್‌ಜಿ, ಪಶ್ಚಿಮ ಬಂಗಾಲದ ಭಾರತ್ ಸೇವಾಶ್ರಮದ ಗುರುಪದಾ ನಂದ್‌ಜಿ ಸಹಿತ ರಾಷ್ಟ್ರದ ಪ್ರಮುಖ ಸಂತರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಗುರುಪದಾನಂದ್‌ಜಿ ಅವರು ಮಾತನಾಡಿ, ಪಶ್ಚಿಮ ಬಂಗಾಲ ಸರಕಾರ ಮಠ ಮಂದಿರಗಳ ನಿಯಂತ್ರಣ ಮಾಡುತ್ತಿದೆಯೇ ಹೊರತು ಬೇರೆ ಸಮುದಾಯಗಳ ಪ್ರಾರ್ಥನಾ ಮಂದಿರಗಳನ್ನು ನಿಯಂತ್ರಣ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಮಾಚಲ ಪ್ರದೇಶದಲ್ಲೂ ಹೋರಾಟ: ಹಿಮಾಚಲ ಪ್ರದೇಶದ ರಾಮ್‌ಶಂಕರ್‌ದಾಸ್ ಅವರು “ಹಿಂದೂಗಳ ಶ್ರದ್ಧಾ ಕೇಂದ್ರ, ವೇದಾಧ್ಯಯನ ಕೇಂದ್ರಗಳನ್ನು ನಿಯಂತ್ರಿಸುವ ನಮ್ಮ ಸರಕಾರದ ವಿರುದ್ಧವೂ ಕಳೆದ 20 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಇತ್ತೀಚೆಗೆ ಅತ್ಯಂತ ಪುರಾತನವಾದ ಠಾಕೂರ್ ರಾಮ್‌ಗೊಪಾಲ್ ಮಂದಿರವನ್ನು ಕೂಡ ಸರಕಾರ ವಶಕ್ಕೆ ತೆಗೆದುಕೊಂಡಿತು’ ಎಂದು ಹೇಳಿದರು.
“ಸಂತರನ್ನು ಒಳಗೊಂಡ ಸಮಿತಿಯೇ ದೇವಸ್ಥಾನ ಗಳ ಅಧಿಕಾರವನ್ನು ನಡೆಸಲಿ’ ಎಂದು ಪ್ರೇಮ್‌ದಾಸ್ ಮಹಾರಾಜ್ ಮತ್ತು ಸಂಜಯ್‌ನಾಥ್ ಹೇಳಿದರೆ, “ಎಲ್ಲ ಸಮುದಾಯಗಳಿಗೆ ಒಂದೇ ಕಾನೂನು ಇರಲಿ. ಮಠ ಮಂದಿರಗಳು ಸುರಕ್ಷಿತವಾದರೆ ಮಾತ್ರ ಹಿಂದೂಗಳು ಸಂಘಟಿತರಾಗಿರಲು ಸಾಧ್ಯ’ ಎಂದು ಬಿಹಾರದ ಆಂಜನೇಯಾನಂದ ಹೇಳಿದರು.
ಕಾನೂನು ಹೋರಾಟ: ಮಠ ಮಂದಿರಗಳಲ್ಲಿ ಸರಕಾರದ ಹಸ್ತಕ್ಷೇಪದ ವಿರುದ್ಧ ನಡೆಯುತ್ತಿರುವ ಕಾನೂನು ಹೋರಾಟಗಳನ್ನು ವಿವರಿಸಿದ ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರು ಮಾತನಾಡಿ, ದೇವಸ್ಥಾನಗಳು ರಾಜಕೀಯ ಮುಕ್ತ ಸ್ಥಳಗಳಾಗಿರಬೇಕು. ಚುನಾವಣಾ ಆಯೋಗ ಇರುವಂತೆ
ರಾಜಕೀಯರಹಿತವಾದ ಸ್ವಾಯತ್ತ ಮಂಡಳಿ ಬೇಕು. ಇದು ಸಂತರ ಒಪ್ಪಿಗೆಯಂತೆಯೇ ನಡೆಯಬೇಕು.
ಅಲ್ಪಸಂಖ್ಯಾಕರಿಗೆ ಇಂತಹ ಸ್ವಾಯತ್ತ ಮಂಡಳಿ ಈಗಾಗಲೇ ಇದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಸಮಸ್ಯೆಗಳು ಮಠ ಮಂದಿರ ಗಳಿಗೆ ಇವೆ. ಮಂದಿರದ ಆಡಳಿತ ಭಕ್ತರ ಕೈಯಲ್ಲಿಯೇ ಇರಬೇಕು ಎಂದು ಹೇಳಿದರು. ಆಂಧ್ರ ಪ್ರದೇಶದ ಸಂಗ್ರಾಮ್‌ಜೀ ಅವರು ಸ್ವರ್ಣವಲ್ಲಿ ಶ್ರೀಗಳ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿ ಮಾತನಾಡಿದರು.
ಭಕ್ತರ ಇಚ್ಛೆಯಂತೆ ದೇವಸ್ಥಾನಗಳು ವ್ಯವಸ್ಥಿತವಾಗಿ ನಡೆಯಬೇಕು. ಗೊಂದಲಗಳಿಗೆ ಕಾರಣವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಸರ ಕಾರದ ಹಸ್ತಕ್ಷೇಪ ಸರಿಯಲ್ಲ ಎಂದು ಆನೆಗೊಂದಿ ಶ್ರೀ ಕಾಳ ಹಸ್ತೇಂದ್ರ ಸ್ವಾಮೀಜಿ ಹೇಳಿದರು. ಜಿತೇಂದ್ರ ಮಹಾ ರಾಜ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.ಅಲ್ಪಸಂಖ್ಯಾಕರಾಗುವ ಆತಂಕ: ರಾಜಸ್ಥಾನದ ಹರಿ ಶಂಕರ್ ಮಹಾರಾಜ್ ಅವರು ಮಾತನಾಡಿ, ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾಕರಾಗುವ ಸ್ಥಿತಿ ಬರುವ ಆತಂಕ ಉಂಟಾಗಿದೆ. ಏಕರೂಪ ನಾಗರಿಕ ಸಂಹಿತೆ ಜಾರಿ ಗೊಳಿಸುವಂತೆ ಒತ್ತಾಯಿಸಲು ಪ್ರಧಾನಮಂತ್ರಿ ಯವರ ಬಳಿ ತೆರಳುವ ಆವಶ್ಯಕತೆ ಇದೆ ಎಂದು ಹೇಳಿದರು.ಅಸ್ಪ ಶ್ಯತೆ ಹಿಂದೂ ಸಮಾಜದ ಒಗ್ಗಟ್ಟಿಗೆ ಅಡ್ಡಿ ಯಾಗಿದೆ. ಅಸ್ಪ ಶ್ಯತೆಯನ್ನು ಸಂಪೂರ್ಣ ತೊಡೆದು ಹಾಕಬೇಕು ಎಂಬ ಅಭಿಪ್ರಾಯ ಧರ್ಮಸಂಸದ್‌ನಲ್ಲಿ ವ್ಯಕ್ತವಾಯಿತು.
ಮಹತ್ವದ ಹೆಜ್ಜೆ
ಗೋಷ್ಠಿಯಲ್ಲಿ ನಿರ್ಣಯಕ್ಕಾಗಿ ಪರಿಗಣಿಸಿದ ಅಂಶಗಳ ಬಗ್ಗೆ ವಿವರಿಸಿದ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ವಿಹಿಂಪ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಗೋಪಾಲ್, “ಅಸ್ಪ ಶ್ಯತೆ ಅನಾದಿಕಾಲದಿಂದ ಬಂದದ್ದಲ್ಲ. ಇದು ಹಿಂದೂ ಏಕತೆಗೆ ಅಡ್ಡಿಯಾಗಿದೆ. ಪರದೇಶೀಯರ ಆಕ್ರಮಣದ ವೇಳೆ ಹಿಂದೂಗಳ ಒಗ್ಗಟ್ಟು ಮುರಿಯಲು ಅಸ್ಪ ಶ್ಯತೆಗೆ ಒತ್ತು ನೀಡಲಾಯಿತು. ಇದನ್ನು ಸಂಪೂರ್ಣ ತೊಡೆದು ಹಾಕಬೇಕಾಗಿದೆ. ಜಾತಿಯಿಂದ ಶ್ರೇಷ್ಠತೆ ಬರುವುದಿಲ್ಲ. ಬದಲಾಗಿ ಭಕ್ತಿಯಿಂದ ಮಾತ್ರ ಶ್ರೇಷ್ಠತೆ ಬರುತ್ತದೆ. ಮಠ ಮಂದಿರ, ಮನೆಗಳು ಪರಿಶಿಷ್ಟರು ಸೇರಿದಂತೆ ಎಲ್ಲ ವರ್ಗದವರಿಗೂ ಮುಕ್ತವಾಗಿರಬೇಕು. ಭಾರತದಲ್ಲಿ ಮಹಾತ್ಮರ ಸಂದೇಶ ಅನುಸರಿಸುವವರೆಲ್ಲರೂ ಹಿಂದೂಗಳು. ಧಾರ್ಮಿಕ ವಿಧಿ ವಿಧಾನಗಳಲ್ಲಿ ಕೆಳವರ್ಗದವರನ್ನು ಕೂಡ ಸೇರಿಸಿಕೊಳ್ಳಬೇಕು. ಪ್ರಲೋಭನೆಗೆ ಒಳಗಾಗಿ ಹಿಂದೂ ಧರ್ಮದಿಂದ ದೂರ ಆದವರು ವಾಪಸ್ ಬರಲು ಮುಕ್ತ ಮನಸ್ಸಿನಿಂದ ಅವಕಾಶ ನೀಡಬೇಕು. ಹೃದಯ ವೈಶಾಲ್ಯ ತೋರಿಸಬೇಕು. ಘರ್‌ವಾಪಸಿ ಪ್ರೋತ್ಸಾಹಿಸ ಬೇಕು ಎಂಬ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳ ಲಾಗಿದೆ ಎಂದು ತಿಳಿಸಿದರು.
– ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.