ಮೋರಿಗೆ ದುಡ್ಡು; ಚರಂಡಿಗೆ ಮಣ್ಣು !
Team Udayavani, Apr 9, 2019, 6:30 AM IST
ಶಿರ್ವ: ಉಡುಪಿ -ಕಾರ್ಕಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೆಲ್ಲಿಕಟ್ಟೆ, ಮಡಿಕೆಟ್ಟು ಮತ್ತು ಗಣಪನ ಕಟ್ಟೆ ಬಳಿ ಲೋಕೋಪಯೋಗಿ ಇಲಾಖೆಯಿಂದ ರಸ್ತೆಯನ್ನು ಅಗೆದು ಕಲ್ವರ್ಟ್ ಮೋರಿಯನ್ನು ರಚಿಸಲಾಗಿದೆ. ವಿಪರ್ಯಾಸವೆಂದರೆ ಸರಕಾರ ಹಣ ವ್ಯಯಿಸಿ ಮೋರಿಗಳನ್ನೇನೋ ಮಾಡಿದೆ, ಆದರೆ ಕಾಮಗಾರಿ ವೇಳೆ ಚರಂಡಿಗೆ ಬಿದ್ದಿದ್ದ ಮಣ್ಣಿನ ರಾಶಿಯನ್ನು ತೆರವುಗೊಳಿಸದೆ ಕಾಮಗಾರಿಯ ಉದ್ದೇಶವೇ ವಿಫಲವಾದಂತಾಗಿದೆ.
ಕಳೆದ ಬಾರಿ ಮಳೆಗೆ ನೀರು ರಸ್ತೆಯಲ್ಲೇ ಹರಿದು ಸಂಚಾರ ಸಂಕಟವಾಗಿದ್ದ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆಯಾಗಿ ಮೋರಿಗಳನ್ನು ರಚಿಸಲಾಗಿದೆ.ಆದರೆ ಚರಂಡಿಯ ಮಣ್ಣನ್ನು ತೆಗೆಯದೆ ಹಾಗೆಯೇ ಬಿಟ್ಟಿರುವುದರಿಂದ ಮಳೆ ಬಂದಲ್ಲಿ ಈ ಮಣ್ಣೆಲ್ಲ ಮೋರಿಯ ಒಳಗೆ ಸೇರ್ಪಡೆಗೊಂಡು ಬ್ಲಾಕ್ ಆಗಿ ಸಂಚಾರ ದುಸ್ತರವಾಗಲಿದೆ.
ಬೆಳ್ಳೆ ಗ್ರಾಪಂ ಸದಸ್ಯ ರಾಜೇಂದ್ರ ಶೆಟ್ಟಿ ಅವರ ದೂರಿನ ಮೇರೆಗೆ ಬೆಳ್ಳೆ ಗ್ರಾಪಂ ಪಿಡಿಒ ಅವರು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಹೊಣೆ ಯಾರು?
ಕಲ್ವರ್ಟ್ ಮೋರಿ ರಚಿಸಲು ಅನುದಾನ ಬಂದಿದ್ದು ಲೋಕೋಪಯೋಗಿ ಇಲಾಖೆ ಕಾಮಗಾರಿ ಗುತ್ತಿಗೆ ನೀಡಿದೆ. ಗುತ್ತಿಗೆದಾರರು ಮೋರಿ ರಚಿಸಿ ತೆರಳಿದ್ದಾರೆ. ಅಧಿಕಾರಿಗಳು ಕಾಮಗಾರಿಯನ್ನು ಮಾತ್ರ ಪರಿಶೀಲಿಸಿದ್ದಾರೆಯೇ ಹೊರತು, ಕಾಮಗಾರಿಯಿಂದಾಗಿ ಮುಚ್ಚಿರುವ ಚರಂಡಿಗಳನ್ನು ತೆರೆಯುವುದು ತಮ್ಮ ಹೊಣೆಯಲ್ಲ ಎಂಬ ನಿರ್ಲಕ್ಷ ದಲ್ಲಿದ್ದಾರೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.