ಪ್ರಸ್ತುತ ಚುನಾವಣೆಗೆ ಹಣ ಬಲವೇ ಮುಖ್ಯ
Team Udayavani, Mar 29, 2018, 6:30 AM IST
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿ ಪರಾಜಿತಗೊಂಡ ಬಿಜೆಪಿ ಅಭ್ಯರ್ಥಿ ಕೆ.ಪಿ. ಶೆಣೈ. ಪುರಸಭೆಯ ಅಧ್ಯಕ್ಷರಾಗಿ, ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. 1979ರಿಂದ 2008ರ ವರೆಗೆ ರಾಜಕೀಯದಲ್ಲಿ ತೊಡಗಿಸಿಕೊಂಡವರು.
ಅಂದಿನ ಚುನಾವಣೆಗೂ ಇಂದಿನ ಚುನಾವಣೆಗೂ ಇರುವ ವ್ಯತ್ಯಾಸ?
ಪ್ರಮುಖ ವ್ಯತ್ಯಾಸವೆಂದರೆ ಇಂದಿನ ಚುನಾವಣೆ ಹಣ ಬಲದಿಂದ ನಡೆಯುತ್ತದೆ. ಕೆಲವು ವರ್ಷಗಳ ಹಿಂದೆ ಎಲ್ಲರೂ ತಮ್ಮ ತಮ್ಮ ಪಕ್ಷಗಳ ಸಿದ್ಧಾಂತಕ್ಕೆ ಬದ್ಧರಾಗಿ, ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು. ಈಗ ಆ ರೀತಿಯಲ್ಲಿ ಇಲ್ಲ. ಅಧಿಕಾರದ ಆಸೆಯಿಂದಾಗಿ ಗೆಲ್ಲುವ ಪಕ್ಷದೆಡೆಗೆ ವಾಲುವವರು ಹೆಚ್ಚಾಗಿದ್ದಾರೆ. ಅಂದು ಹಾಗಿರಲಿಲ್ಲ.
ಎರಡು ಬಾರಿ ಸ್ಪರ್ಧಿಸಿದ್ದೀರಿ ಸೋಲಿಗೆ ಕಾರಣ?
ನಾನು ಸ್ಪರ್ಧಿಸಿರುವುದು 20 ವರ್ಷಗಳ ಹಿಂದೆ. ಒಂದು ಬಾರಿ ಡಾ| ಎಂ. ವೀರಪ್ಪ ಮೊಲಿ, ಮತ್ತೂಮ್ಮೆ ಎಚ್. ಗೋಪಾಲ ಭಂಡಾರಿ ನನ್ನ ವಿರುದ್ಧ ಇದ್ದರು. ಅಂದು ಕಾರ್ಕಳದಲ್ಲಿ ಕಾಂಗ್ರೆಸ್ ಪ್ರಬಲ ಪಕ್ಷವಾಗಿತ್ತು. ದೇಶದಲ್ಲಿಯೇ ಬಲಿಷ್ಠವಾಗಿತ್ತು.
ಈ ಬಾರಿಯ ಚುನಾವಣೆ ಬಗ್ಗೆ?
ಬಿಜೆಪಿಗೆ ಬಹುಮತ ಸಿಗಬಹುದು. ಕಾರ್ಕಳದಲ್ಲಿಯೂ ವಿ. ಸುನಿಲ್ ಕುಮಾರ್ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಜನರೊಂದಿಗೆ ಅವರ ಸಂಪರ್ಕ ಉತ್ತಮವಾಗಿದೆ. ಆದ ಕಾರಣ ಅವರಿಗೆ ಗೆಲುವು ಕಷ್ಟವಾಗದು. ಮೋದಿ ಅವರ ಪ್ರಭಾವ ಈ ಚುನಾವಣೆಯಲ್ಲಿಯೂ ಕೆಲಸ ಮಾಡಬಹುದು.
ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ?
ಇಂದಿನ ರಾಜಕೀಯ ಗೊಂದಲಮಯವಾಗಿದೆ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಹುದು ಅನ್ನುವ ಕಾಲವಿದು. ಕುಟುಂಬ ರಾಜಕಾರಣವೂ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಹೊಡೆತ ನೀಡಿದೆ.
ಮುಂದೆ ರಾಜಕೀಯದಲ್ಲಿ ತೊಡಗಿಕೊಳ್ಳುವ ಸಾಧ್ಯತೆ?
ಇಲ್ಲ. 1979ರಿಂದ 2008ರ ತನಕ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಂಡಿದ್ದೆ. 25 ವರ್ಷಕ್ಕೂ ಅಧಿಕ ಕಾಲ ಪುರಸಭೆಯ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ. ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದ್ದೇನೆ. ರಾಜಕೀಯ ರಂಗದ ಸೇವೆಯಲ್ಲಿ ಸಂತೃಪ್ತಿ ಇದೆ. ಕಳೆದ 10 ವರ್ಷಗಳ ಹಿಂದೆ ರಾಜಕೀಯ ನಿವೃತ್ತಿ ಹೊಂದಿದ್ದೇನೆ.
– ಜಿವೇಂದ್ರ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.