Bank ಖಾತೆಯಿಂದ ಹಣ ವರ್ಗಾವಣೆ: ಮಲ್ಪೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣ
Team Udayavani, Nov 2, 2023, 12:01 AM IST
ಮಲ್ಪೆ: ತಮ್ಮ ಉಳಿತಾಯ ಖಾತೆಯಿಂದ ಹಣ ವರ್ಗಾವಣೆಗೊಂಡಿದೆ ಎಂದು ಮಲ್ಪೆ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಘಟನೆ 1
ಮಲ್ಪೆಯ ಜಯಂತಿಯವರ ಯೂನಿಯನ್ ಬ್ಯಾಂಕ್ ಮಲ್ಪೆ ಶಾಖೆಯ ಉಳಿತಾಯ ಖಾತೆಯಿಂದ 6 ಸಾವಿರ ರೂಪಾಯಿ ವರ್ಗಾವಣೆಗೊಂಡಿದೆ. ಜು. 2ರಂದು ಉಡುಪಿಯ ಉಪನೋಂದಾವಣೆ ಅಧಿಕಾರಿಯ ಕಚೇರಿಯಲ್ಲಿ ಜಾಗ ನೋಂದಾವಣೆ ಮಾಡಿದ್ದು, ಈ ವೇಳೆ ನೋಂದಾವಣೆ ಕಚೇರಿಯಲ್ಲಿ ಬೆರಳಿನ ಥಂಬ್ ಅನ್ನು ಪಡೆದುಕೊಂಡಿದ್ದರು. ಯಾರೋ ಆನ್‌ಲೈನ್‌ನಲ್ಲಿ ತನ್ನ ಬೆರಳಮುದ್ರೆಯನ್ನು ಕದ್ದು ಈ ರೀತಿಯಾಗಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರ.
ಘಟನೆ 2
ಇನ್ನೊಂದು ಪ್ರಕರಣದಲ್ಲಿ ಕೊಡವೂರಿನ ಹರೀಶ್ ಅವರ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಆ. 23ರಂದು 10 ಸಾವಿರ ರೂ., 24ರಂದು 5 ಸಾವಿರ ಒಟ್ಟು 15 ಸಾವಿರ ರೂಪಾಯಿ ಕಡಿತವಾಗಿದೆ. ಈ ಬಗ್ಗೆ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಎನೆಬಲ್ ಪೇಮೆಂಟಬ್ ಸಿಸ್ಟಂ (ಎಇಪಿಎಸ್) ಮುಖೇನ ಹಣ ಕಡಿತವಾಗಿದೆ ಎಂದು ಬ್ಯಾಂಕಿನವನರು ತಿಳಿಸಿದ್ದಾರೆ. ಹರೀಶ್ ಆ. 8ರಂದು ಬ್ಯಾಂಕ್ ಸಾಲದ ಸಲುವಾಗಿ ಜಾಗವನ್ನು ಉಪನೋಂದಣಾಧಿಕಾರಿಯಲ್ಲಿ ನೋಂದವಣೆ ಮಾಡಿದ್ದಾರೆ.
ಘಟನೆ 3
ದಿವಾಕರ ಅವರ ಕೆನರಾ ಬ್ಯಾಂಕಿನ ಉಳಿತಾಯ ಖಾತೆಯಿಂದ ಅ. 21ರಂದು 8 ಸಾವಿರ ರೂ., ಅ. 23ರಂದು 10 ಸಾವಿರ ರೂ., 24ರಂದು 10 ಸಾವಿರ ರೂ. ಕಡಿತಗೊಂಡಿದೆ. ಇವರೂ ಕೂಡ ಸೆ. 27ರಂದು ಬ್ಯಾಂಕ್ ಸಾಲದ ಸಲುವಾಗಿ ಜಾಗವನ್ನು ಉಪನೋಂದಾವಣೆ ಕಚೇರಿಯಲ್ಲಿ ನೋಂದವಣೆ ಮಾಡಿದ್ದರು.
ಘಟನೆ 4
ಮಲ್ಪೆಯ ರಮೇಶ್ ಮೆಂಡನ್ ಅವರ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಅ. 12ರಂದು 10 ಸಾವಿರ ರೂ. ಕಡಿತವಾಗಿದ್ದು, ಈ ಬಗ್ಗೆ ಸಂದೇಶ ಬಂದಾಗ ಅವರು ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಎಇಪಿಎಸ್ ಮುಖೇನ ಹಣ ವರ್ಗಾವಣೆಗೊಂಡಿರುವುದಾಗಿ ತಿಳಿಸಿದ್ದಾರೆ. ರಮೇಶ್ ಪಡುಕರೆ ವೀರಾಂಜನೇಯ ಮಂದಿರದ ಅಧ್ಯಕ್ಷರಾಗಿದ್ದು, ಮಂದಿರದ ಜಾಗವು ಬೇರೆಯವರು ಹೆಸರಿನಲ್ಲಿದ್ದ ಆ ಜಾಗವನ್ನು ಪೂಜಾ ಮಂದಿರದ ಹೆಸರಿಗೆ ದಾನಪತ್ರ ಮಾಡುವ ಬಗ್ಗೆ ಮೇ 6ರಂದು ನೋಂದಾವಣೆ ಮಾಡಿದ್ದಾರೆ. ಈ ವೇಳೆ ನೀಡಿದ ಥಂಬ್ ಅನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.