ಪಶ್ಚಿಮಘಟ್ಟ: ಮಂಗಗಳ ಸಾವು ಹೆಚ್ಚಳ, ರೋಗ ಭೀತಿ


Team Udayavani, Jan 11, 2019, 8:25 PM IST

monkey-group-11-1.jpg

ಸಿದ್ದಾಪುರ: ಪಶ್ಚಿಮಘಟ್ಟದ ಪ್ರದೇಶಗಳಲ್ಲಿ ಮಂಗಗಳ ಸಾವು ಹೆಚ್ಚುತ್ತಿದೆ. ಇದರಿಂದ ನಾಗರಿಕರಲ್ಲಿ ಮಂಗನ ಕಾಯಿಲೆಯ ರೋಗದ ಭೀತಿ ಹೆಚ್ಚುತ್ತಿರುವುದರಿಂದ ಆತಂಕ ದೂರ ಮಾಡಲು ನಡೆಯಬೇಕಾಗಿದೆ ಜಾಗೃತಿ ಸಭೆಗಳು.

ಶಿವಮೊಗ್ಗ ಜಿಲ್ಲೆಯ ಸಾಗರ ಪರಿಸರದಲ್ಲಿ ಮತ್ತೆ ವ್ಯಾಪಿಸುತ್ತಿರುವ ಮಂಗನ ಕಾಯಿಲೆ ಇದೀಗ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಉಡುಪಿ ಜಿಲ್ಲೆಗೂ ವ್ಯಾಪಿಸುವ ಭೀತಿ ಎದುರಾಗಿದೆ. ಕುಂದಾಪುರ ತಾಲೂಕಿನ ಸಿದ್ಧಾಪುರದಲ್ಲಿ ಒಂದು, ಹೊಸಂಗಡಿಯಲ್ಲಿ ಮೂರು, ಬೈಂದೂರಿನ ಶಿರೂರಿನಲ್ಲಿ ಎರಡು, ಬೆಳ್ವೆಯ ಅಲ್ಪಾಡಿಯಲ್ಲಿ ಒಂದು, ಕಾರ್ಕಳ ತಾಲೂಕಿನ ಹಿರ್ಗಾನದಲ್ಲಿ ಒಂದು, ಕಂಡ್ಲೂರಿನಲ್ಲಿ ಒಂದು ಹೀಗೆ ಒಟ್ಟು  9 ಮಂಗಗಳ  ಮೃತ ದೇಹ ಪತ್ತೆಯಾಗಿವೆ. ಇನ್ನೂ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಪರಿಣಾಮ ಸಾರ್ವಜನಿಕರಲ್ಲಿ ಸ್ವಾಭಾವಿಕವಾಗಿ ಮಂಗನ ಕಾಯಿಲೆಯ ಭೀತಿ ಎದುರಾಗಿದೆ.

ಇಲಾಖೆಗಳ ಶ್ರಮ
ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಂಗಗಳ‌ ಸಾವು ಹೆಚ್ಚಾಗುತ್ತಿರುವುದರಿಂದ ಇಲಾಖೆಗಳು ಕೂಡ ಜಾಗೃತಗೊಂಡು ಶ್ರಮವಹಿಸಿ ಕೆಲಸ ಮಾಡುತ್ತಿವೆ. ಸ್ಥಳೀಯ ಪಂಚಾಯತ್‌ಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪಶು ಚಿಕಿತ್ಸಾಲಯಗಳು, ಅರಣ್ಯ ಇಲಾಖೆಗಳು ಜಂಟಿಯಾಗಿ ಕಾರ್ಯಚರಣೆ ನಡೆಸುತ್ತಿವೆ. ಮಂಗಗಳ ಮೃತ ದೇಹ ಪತ್ತೆಯ ಸುದ್ಧಿ ತಿಳಿಯುತ್ತಿದ್ದಂತೆ ಇಲಾಖೆಗಳು ಸ್ಥಳಕ್ಕೆ ಭೆೇಟಿ ನೀಡಿ, ಮೃತ ದೇಹದ ಸುತ್ತ ಯಾರೂ ಬರದ ಹಾಗೆ ಜಾಗೃತಿ ಮಾಡುತ್ತಿದ್ದಾರೆ.

ವೈದ್ಯರ ತುರ್ತು ಸಭೆ
ಪರಿಸರದಲ್ಲಿ ಕರಪತ್ರಗಳನ್ನು ಹಂಚಲಾಗುತ್ತಿದೆ. ಕುಂದಾಪುರ, ಬೈಂದೂರು ಹಾಗೂ ಕಾರ್ಕಳಗಳ ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರ ತುರ್ತು ಸಭೆಯನ್ನು ಕರೆದು, ಅವರಿಗೆ ತೆಗೆದುಕೊಳ್ಳಬೇಕಾದ ಎಲ್ಲ ಕ್ರಮಗಳನ್ನು ವಿವರಿಸಲಾಗುವುದು. ಜ್ವರ ಬಂದರೆ ಕಡೆಗಣಿಸದೇ ತತ್‌ಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ರೋಹಿಣಿ ಅವರು ತಿಳಿಸಿದ್ದಾರೆ.

ಅಧಿಕೃತವಾಗಿ ದೃಢಪಟ್ಟಿಲ್ಲ
ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಇದೆ. ಉಡುಪಿ ಜಿಲ್ಲೆಯಲ್ಲಿ ಈ ಕಾಯಿಲೆಯ ಬಗ್ಗೆ ಅಧಿಕೃತವಾಗಿ ದೃಢಪಟ್ಟಿಲ್ಲ. ಪಶ್ಚಿಮ ಘಟ್ಟ ಪ್ರದೇಶ ಶಿವಮೊಗ್ಗ ಗಡಿಗೆ ತಾಗಿಕೊಂಡಿರುವುದರಿಂದ ಸತ್ತ ಮಂಗನ ಮರಣೋತ್ತರ ಪರೀಕ್ಷೆ ನಡೆಸುವ ಮೂಲಕ ಸ್ಯಾಂಪಲ್‌ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕಾಯಿಲೆಯ ಬಗ್ಗೆ ದೃಢೀಕರಿಸಿಕೊಳ್ಳುತ್ತೇವೆ. ಮಂಗನ ಕಾಯಿಲೆ ಉಣ್ಣೆಯಿಂದ ಹರಡುವ ಕಾಯಿಲೆಯಾಗಿದೆ. ಆದರಿಂದ ಭಯಪಡುವ ಅಗತ್ಯತೆ ಇಲ್ಲ. ಜಾಗೃತೆ ವಹಿಸಿದರೆ ಸಾಕಾಗುತ್ತದೆ. ಕಾಡಿಗೆ ಹೋಗುವಾಗ ಡಿಎಂಪಿ ತೈಲ ಮೈಗೆ ಸವರಿಕೊಂಡು ಹೋದರೆ ಸಾಕಾಗುತ್ತದೆ. ಗಡಿ ಭಾಗಗಳ ಗ್ರಾ. ಪಂ.ಗಳು ವಿಶೇಷ ಗ್ರಾಮ ಸಭೆ ಕರೆಯುವಂತೆ ಸೂಚಿಸಿದ್ದೇವೆ. ಇಲಾಖೆ ಬಂದು ಮಾಹಿತಿ ನೀಡುತ್ತದೆ ಎಂದು ಉಡುಪಿ ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ| ಪ್ರಶಾಂತ ಭಟ್‌ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಜನರಲ್ಲಿ  ಹೀಗೊಂದು ಭಯ…
ಶಿವಮೊಗ್ಗ ಜಿಲ್ಲೆಯ ಗಡಿ ಭಾಗಗಳಲ್ಲಿ ವ್ಯಾಪಕವಾದ ಮಂಗನ ಕಾಯಿಲೆ ಹರಡುತ್ತಿದೆ. ಗಡಿ ಭಾಗಗಳ ಮಂಗಗಳು ಉಡುಪಿ ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಲಗ್ಗೆ ಇಡುತ್ತಿವೆ. ಈಗಾಗಲೇ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಂಗಗಳ ಹಾವಳಿ ಅತೀ ಹೆಚ್ಚಾಗಿವೆ. ಕೃಷಿ ತೋಟಗಳಿಗೆ ಸೇರದಂತೆ ಆಗಾಗ ಮನೆಗಳಿಗೂ ದಾಳಿ ಇಡುತ್ತಿವೆ. ಕಾಯಿಲೆ ಇರುವ ಮಂಗಗಳು ಕೂಡ ಇರುವುದರಿಂದ ಅವುಗಳನ್ನು ಗುರುತಿಸುವುದು ಮತ್ತು ನಿಯಂತ್ರಣ ಹೇಗೆ? ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಎಲ್ಲರೂ ಕೃಷಿ ಕುಟುಂಬಗಳೇ ಇರುವುದರಿಂದ ಕೃಷಿ ಚಟುವಟುಕೆಗಾಗಿ ಕಾಡಿಗೆ ಹೋಗಬೇಕಾದ ಪರಿಸ್ಥಿತಿ. ಇಂತಹ ಸಂದರ್ಭದಲ್ಲಿ ಕಾಯಿಲೆಗಳು ಆವರಿಸಿಕೊಂಡಲ್ಲಿ ಎನ್ನು ಮಾಡುವುದು? ಚಿಕಿತ್ಸೆಗೆ ಮೊದಲು ಎಲ್ಲಿಗೆ ಹೋಗಬೇಕು? ಮಂಗನ ಕಾಯಿಲೆಯ ಲಕ್ಷಣಗಳು ಏನು? ಕೃಷಿ ಚಟುವಟಿಕೆ ನಡೆಸುವವರಿಗೆ ಆಗಾಗ ಸಣ್ಣಪುಟ್ಟ ಜ್ವರಗಳು ಬರುತ್ತಿರುತ್ತವೆ. ಹಾಗಿರುವಾಗ ಮೊದಲು ಏನು ಮಾಡಬೇಕು ಎನ್ನುವ ಹಲವಾರು ಪ್ರಶ್ನೆಗಳು ಇಂದು ಗ್ರಾಮೀಣ ಜನರು ಕೇಳುತ್ತಿದ್ದಾರೆ. ಮಂಗನ ಕಾಯಿಲೆಯ ಭೀತಿಯಿಂದ ಕೆಲವು ಕಡೆಗಳಲ್ಲಿ ಕಾಡಿನ ಕಡೆಗೆ ಹೋಗುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.

ಮುಂಜಾಗ್ರತೆ ವಹಿಸಿ
ಮಂಗಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ತುರ್ತು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪರಿಸರದ ಜನರು ಕಾಡುಗಳಿಗೆ ತೆರಳುವುದನ್ನು ನಿಯಂತ್ರಿಸಬೇಕು. ಅನಗತ್ಯವಾಗಿ ಯಾರೂ ಕಾಡು ಪ್ರದೇಶಗಳಿಗೆ ಹೋಗಬೇಡಿ. ಅನಿವಾರ್ಯವಾದರೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಹೋಗಿ. ಸಾಕು ಪ್ರಾಣಿಗಳನ್ನು ಕಾಡಿನತ್ತ ಬಿಡಬೇಡಿ. ಕಾಡಿಗೆ ಹೋಗಬೇಕಾದ ಸಂದರ್ಭದಲ್ಲಿ ಡಿಎಂಪಿ ತೈಲವನ್ನು ಮೈಗೆ ಸವರಿಕೊಂಡು ಹೋಗಬಹುದ್ದಾಗಿದೆ. ಪಶ್ವಿ‌ಮಘಟ್ಟ ತಪ್ಪಲಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡಿಎಂಪಿ ತೈಲ ಲಭ್ಯ ಇದೆ. 
– ಡಾ| ನಾಗಭೂಷಣ ಉಡುಪ, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ

ಟಾಪ್ ನ್ಯೂಸ್

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agri

State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ

Byndoor-Vahical

Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.