ಮೂಡ್ಲಕಟ್ಟೆ ರೈಲು ನಿಲ್ದಾಣ ಸಂಪರ್ಕ ರಸ್ತೆ ವಿಸ್ತರಣೆಗೆ ಬೇಡಿಕೆ
Team Udayavani, Aug 4, 2018, 6:55 AM IST
ಕೋಣಿ: ಮೂಡ್ಲಕಟ್ಟೆಯಲ್ಲಿರುವ ಕುಂದಾಪುರದ ರೈಲು ನಿಲ್ದಾಣ ಸಂಪರ್ಕಿಸುವ ಮೂಡ್ಲಕಟ್ಟೆ – ರೈಲು ನಿಲ್ದಾಣ ರಸ್ತೆ
ಕಿರಿದಾಗಿದ್ದು, ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ರಸ್ತೆ ವಿಸ್ತರಣೆಗೆ ಬೇಡಿಕೆ ಹೆಚ್ಚಾಗಿದೆ.
ಕುಂದಾಪುರ ನಗರದಿಂದ ಸುಮಾರು 4 ಕಿ.ಮೀ. ದೂರವಿರುವ ಮೂಡ್ಲಕಟ್ಟೆಯಿಂದ ರೈಲು ನಿಲ್ದಾಣಕ್ಕೆ ತೆರಳುವ ಸುಮಾರು 1 ಕಿ.ಮೀ. ದೂರದ ರಸ್ತೆ ಏಕಪಥವಾಗಿದ್ದು, ಕಿರಿದಾಗಿದೆ. ಈಗ ನರ್ಮ್ ಬಸ್ ವ್ಯವಸ್ಥೆಯೂ ಇರು ವುದರಿಂದ ರಸ್ತೆ ವಿಸ್ತರಣೆಯ ಅಗತ್ಯವೂ ಇದೆ.
ಹೆಚ್ಚುವರಿ ಬಸ್‌ಗೂ ಬೇಡಿಕೆ
ಮೂಡ್ಲಕಟ್ಟೆ ರೈಲು ನಿಲ್ದಾಣದಿಂದ ಕುಂದಾಪುರ ನಗರಕ್ಕೆ ಈಗ ಕೇವಲ ಒಂದು ಬಸ್ ಮಾತ್ರ ಸಂಚ ರಿಸುತ್ತಿದೆ. ಈ ಕಾರಣ ಪ್ರಯಾಣಿಕರು ನಗರಕ್ಕೆ ಬಾಡಿಗೆ ವಾಹನಗಳನ್ನೇ ಆಶ್ರಯಿಸಬೇಕಾದ್ದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್ ಸಂಪರ್ಕ ಕಲ್ಪಿಸಬೇಕೆಂಬ ಬೇಡಿಕೆ ಇದೆ.
ಹೈಮಾಸ್ಕ್ ದೀಪದ ಅಗತ್ಯ
ಕಿರಿದಾದ ರಸ್ತೆ ಹಾಗೂ ಕತ್ತಲೆ ವೇಳೆ ಸರಿಯಾದ ಬೀದಿ ದೀಪವಿಲ್ಲದೆ ಪಾದಚಾರಿ ಗಳು ನಡೆದುಕೊಂಡು ಹೋಗಲು ಸಮಸ್ಯೆ ಯಾಗುತ್ತಿದೆ. ಹೈಮಾಸ್ಕ್ ದೀಪವನ್ನು ಕೊಂಕಣ್ ರೈಲ್ವೇ ಇಲಾಖೆ ಮಂಜೂರು ಮಾಡಿದರೆ ಪ್ರಯೋಜನವಾಗಲಿದೆ.
13 ರೈಲುಗಳ ನಿಲುಗಡೆ
ಕುಂದಾಪುರ ರೈಲು ನಿಲ್ದಾಣದಲ್ಲಿ ಪ್ರತಿ ದಿನ ಮತ್ಸÂಗಂಧ ಎಕ್ಸ್‌ಪ್ರೆಸ್, ಮಂಗಳೂರು- ಮುಂಬಯಿ ಎಕ್ಸ್ ಪ್ರಸ್, ಮುಂಬಯಿ- ಮಂಗಳೂರು ಎಕ್ಸ್‌ಪ್ರೆಸ್, ಮಂಗಳಾ ಎಕ್ಸ್‌ಪ್ರೆಸ್, ನೇತ್ರಾವತಿ ಎಕ್ಸ್‌ಪ್ರೆಸ್, ಮಂಗಳೂರು- ಮಡಗಾಂವ್ ಇಂಟರ್ಸಿಟಿ ಎಕ್ಸ್‌ಪ್ರೆಸ್, ಮಂಗಳೂರು- ಮಡಗಾಂವ್ ಪ್ಯಾಸೇಂಜರ್, ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್ ಸಹಿತ ಒಟ್ಟು 13 ರೈಲುಗಳ ನಿಲುಗಡೆಗೆ ಇದೆ.
ರಸ್ತೆ ವಿಸ್ತರಣೆಗೆ ಪ್ರಯತ್ನ
ಮೂಡ್ಲಕಟ್ಟೆ ರೈಲು ನಿಲ್ದಾಣ ರಸ್ತೆಯ ವಿಸ್ತರಣೆಗೆ ಯಾರೂ ಬೇಡಿಕೆ ಸಲ್ಲಿಸಿಲ್ಲ. ಯಾರಾದರೂ ಅಹವಾಲು ಸಲ್ಲಿಸಿದರೆ, ಖಂಡಿತವಾಗಿಯೂ ಅದನ್ನು ಪರಿಶೀಲಿಸಿ, ರಸ್ತೆ ವಿಸ್ತರಣೆಗೆ ಬೇಕಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು.
– ಹಾಲಾಡಿ ಶ್ರೀನಿವಾಸ ಶೆಟ್ಟಿ,ಶಾಸಕರು
ತುರ್ತು ಅಗತ್ಯ
ರಸ್ತೆ ವಿಸ್ತರಣೆ ಕಾಮಗಾರಿ ತುರ್ತಾಗಿ ಆಗಬೇಕಾಗಿದೆ. ಅದಲ್ಲದೆ ಪಾದಚಾರಿಗಳಿಗೆ ಅನುಕೂಲವಾಗುವಂತೆ ಹೈಮಾಸ್ಕ್ ಬೀದಿ ದೀಪವನ್ನು ಮಂಜೂರು ಮಾಡಲಿ. ಕುಂದಾಪುರಕ್ಕೆ ಸುಮಾರು 4 ಕಿ.ಮೀ. ದೂರವಿದ್ದು, ಸುಲಭ ಸಂಪರ್ಕ ಕಾರ್ಯ ಆಗಬೇಕಾಗಿದೆ.
– ಕೆಂಚನೂರು ಸೋಮಶೇಖರ ಶೆಟ್ಟಿ,ಅಧ್ಯಕ್ಷರು,ರೈಲು ಪ್ರಯಾಣಿಕರ ಹಿತರಕ್ಷಣಾ ವೇದಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.