ಕಟಪಾಡಿ ಬೀಡು: ಮೂಡು-ಪಡು ಜೋಡುಕರೆ ಕಂಬಳಕ್ಕೆ ಚಾಲನೆ
Team Udayavani, Feb 3, 2019, 1:00 AM IST
ಕಟಪಾಡಿ: ಕಟಪಾಡಿ ಬೀಡು ಮೂಡು-ಪಡು ಜೋಡುಕರೆ ಕಂಬಳಕ್ಕೆ ವ್ಯವಸ್ಥಾಪಕ ಕಟಪಾಡಿ ಬೀಡು ಮಹಾಬಲ ಬಲ್ಲಾಳ್ ಫೆ. 2ರಂದು ಚಾಲನೆ ನೀಡಿದರು.
ಮುಖ್ಯಅತಿಥಿಯಾಗಿದ್ದ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಕಂಬಳದ ಮೂಲಕ ತುಳುನಾಡಿನ ಸಂಸ್ಕೃತಿಯ ಉಳಿವು ಬೆಳವಣಿಗೆಗೆ ಕಾಣುತ್ತಿದೆ ಎಂದರು.
ಹಿರಿಯ ಅಂಬಾಡಿ ಬೀಡು ಡಾ| ಎ. ರವೀಂದ್ರನಾಥ್ ಶೆಟ್ಟಿ ಶುಭ ಹಾರೈಸಿದರು.
ಕಟಪಾಡಿ ಬೀಡು ಮನೆತನದ ಹಿರಿಯರಾದ ಮಹಾಬಲ ಬಲ್ಲಾಳ್ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ, ಕಟಪಾಡಿ ಗ್ರಾ. ಪಂ. ಅಧ್ಯಕ್ಷೆ ಜೂಲಿಯೆಟ್ ವೀರಾ ಡಿ’ಸೋಜಾ, ಪ್ರಮುಖರಾದ ಆನಂದ ಶೆಟ್ಟಿ ಗುತ್ತಿನಾರ್, ಅಶೋಕ್ ಶೆಟ್ಟಿ, ವಸಂತ ಶೆಟ್ಟಿ, ಕಟಪಾಡಿ ಬೀಡು ವಿನಯ ಬಲ್ಲಾಳ್, ನವೀನ್ ಬಲ್ಲಾಳ್, ಸುಭಾಸ್ ಬಲ್ಲಾಳ್, ಜಯರಾಮ್ ಬಲ್ಲಾಳ್, ಶಿವಣ್ಣ ಶೆಟ್ಟಿ, ಉದಯ ಶೆಟ್ಟಿ ಕನ್ಯಾನ ಮತ್ತಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.