ಜು. 27: ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ಗ್ರಹಣ ಶಾಂತಿ
Team Udayavani, Jul 25, 2018, 2:35 AM IST
ಉಡುಪಿ: ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಜು. 27ರಂದು ಗೋಚರಿಸಲಿರುವ ಕೇತುಗ್ರಸ್ತ ಸಂಪೂರ್ಣ ಚಂದ್ರಗ್ರಹಣದ ಪ್ರಯುಕ್ತ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಗ್ರಹಣ ಶಾಂತಿ ನಡೆಯಲಿದೆ.
ಉತ್ತರಾಷಾಢ, ಶ್ರವಣ ನಕ್ಷತ್ರ, ಮಕರ ರಾಶಿಯಲ್ಲಿ ಚಂದ್ರನಿಗೆ ಕೇತು ಗ್ರಹಣ ಗೋಚರಿಸಲಿದೆ. ಉತ್ತರಾಷಾಢಾ ನಕ್ಷತ್ರದಲ್ಲಿ ಸ್ಪರ್ಶವಾಗಿ, ಶ್ರವಣ ನಕ್ಷತ್ರದಲ್ಲಿ ಖಗ್ರಾಸ ಮೋಕ್ಷವಾಗಲಿದೆ. ಮಕರ, ಕುಂಭ, ಮಿಥುನ, ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಗ್ರಹಣದ ಅರಿಷ್ಟವಿದೆ. ಆಷಾಢ ಮಾಸದ ಶುಕ್ಲ ಪೌರ್ಣಿಮೆಯಂದು ಚಂದ್ರಗ್ರಹಣ ಸಂಭವಿಸಲಿದ್ದು, ರಾತ್ರಿ 11.54 ಗ್ರಹಣ ಸ್ಪರ್ಶ ಕಾಲ, ಮಧ್ಯರಾತ್ರಿ 1.52ಕ್ಕೆ ಗ್ರಹಣ ಮಧ್ಯ ಕಾಲ, ರಾತ್ರಿ 3.49 ಗ್ರಹಣ ಮೋಕ್ಷ ಕಾಲವಾಗಲಿದೆ. ಗ್ರಹಣ ಕಾಲದಲ್ಲಿ ಮಾಡುವ ಶಾಂತಿ, ರವಿ, ಚಂದ್ರ, ಕೇತು ಪ್ರೀತ್ಯರ್ಥ ಯಥಾಶಕ್ತಿ ಜಪ, ದಾನ, ಪೂಜೆ, ಹವನ ಇತ್ಯಾದಿಗಳಿಂದ ಅನಿಷ್ಠ ನಿವಾರಣೆಯಾಗಲಿದೆ. ಈ ದಿನ ಮಧ್ಯಾಹ್ನ 2.54ರ ಅನಂತರ ಭೋಜನ ನಿಷಿದ್ಧ. ಈ ಗ್ರಹಣವು ಭಾರತದಾದ್ಯಂತ ಗೋಚರಿಸುವುದರಿಂದ ಗ್ರಹಣಾಚರಣೆ ಇರುತ್ತದೆ. ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗುವ ಗ್ರಹಣ ಶಾಂತಿಯು ಸಾಮೂಹಿಕವಾಗಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.
ಮಂತ್ರ ಸಿದ್ಧಿಗೆ ಪ್ರಸಕ್ತ ಕಾಲ
ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷ ಕಾಲದವರೆಗೆ ದೇವರ ನಾಮ ಸ್ಮರಣೆ ಮಾಡುವುದರಿಂದ ಅರಿಷ್ಟಾದಿಗಳು ದೂರವಾಗುವುದಲ್ಲದೆ, ಹೆಚ್ಚಿನ ಸತ್ಫಲಗಳು ಪ್ರಾಪ್ತಿಯಾಗುತ್ತದೆ. ಬೇರೆ ದಿನಗಳಲ್ಲಿ ಮಾಡಲ್ಪಡುವ ಹತ್ತು ಜಪಗಳನ್ನು ಗ್ರಹಣ ಕಾಲದಲ್ಲಿ ಮಾಡಿದರೆ ಹತ್ತಕ್ಕೆ ನೂರರಷ್ಟು ಫಲ ಲಭಿಸುತ್ತದೆ. ಮಂತ್ರ ಸಿದ್ಧಿಸಿಕೊಳ್ಳುವವರಿಗೆ ಇದು ಪ್ರಶಸ್ತ ಸಮಯವಾಗಿದೆ. ಅಶೌಚ – ಸೂತಕಗಳಿದ್ದರೂ ಗ್ರಹಣ ಕಾಲದಲ್ಲಿ ಜಪತಪ ಮಾಡಬಹುದು. ಗ್ರಹಣ ಆರಂಭದಲ್ಲಿ ಸ್ನಾನ ಮಾಡಿ ಪೂಜೆ ಆರಂಭಿಸಬೇಕು.ದೇವರ ಧ್ಯಾನ, ಭಜನೆ, ಸಂಕೀರ್ತನೆ, ಪಾರಾಯಣ ಪಠನೆ, ಹೋಮ ಹವನಾದಿಗಳಿಂದ ದೇವತಾರಾಧನೆ ನಡೆಸಬೇಕು. ಗ್ರಹಣ ಮೋಕ್ಷ ಕಾಲದ ಅನಂತರವೂ ಕೂಡ ಸ್ನಾನ ಮಾಡಿ ಪೂಜೆ ಮಾಡಬೇಕು. ಅರಿಷ್ಟ ಎದುರಾಗಲಿರುವ ರಾಶಿ, ನಕ್ಷತ್ರದವರು ಗ್ರಹಣ ಕಾಲದಲ್ಲಿ ದೇಗುಲಗಳಿಗೆ ತೆರಳಿ ಎಳ್ಳೆಣ್ಣೆಯನ್ನು ಸಮರ್ಪಿಸುವುದು ಉತ್ತಮ. ಗ್ರಹಣ ಕಾಲದಲ್ಲಿ ಅಕ್ಕಿ, ಹುರುಳಿಯನ್ನು ತೆಗೆದಿರಿಸಿ ಮರುದಿನ ಬೆಳಗ್ಗೆ ಬ್ರಾಹ್ಮಣರು, ಗೋವು ಅಥವಾ ಬಡವರಿಗೆ ದಾನ ನೀಡುವುದು ಶ್ರೇಯಸ್ಕರ.
– ಶ್ರೀ ರಮಾನಂದ ಗುರೂಜಿ, ಧರ್ಮದರ್ಶಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.