16 ಭದ್ರತಾ ಕೊಠಡಿಗೆ 105ಕ್ಕೂ ಅಧಿಕ ಸಿಸಿ ಕೆಮರಾ
ಇವಿಎಂ ಸ್ಟ್ರಾಂಗ್ ರೂಮ್‌ಗೆ ಸಿಆರ್‌ಪಿಎಫ್ ಮಹಿಳಾ ವಿಂಗ್ ಭದ್ರತೆ
Team Udayavani, Apr 18, 2019, 6:15 AM IST
ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿರುವ ಉಡುಪಿ ಅಜ್ಜರಕಾಡಿನ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಗೆ ತಲಾ 2ರಂತೆ ಒಟ್ಟು 16 ಸ್ಟ್ರಾಂಗ್ ರೂಮ್‌ಗಳನ್ನು (ಭದ್ರತಾ ಕೊಠಡಿ) ಸಿದ್ಧಪಡಿಸಲಾಗಿದೆ. ಇದರ ಭದ್ರತೆಗಾಗಿ ಸಿಆರ್‌ಪಿಎಫ್ನ ಮಹಿಳಾ ವಿಂಗ್ ಅನ್ನು ಪ್ರಮುಖವಾಗಿ ಬಳಸಿಕೊಳ್ಳಲಾಗುತ್ತದೆ. ಬುಧವಾರ ಸಿಸಿಟಿವಿ ಅಳವಡಿಕೆ, ಹೆಚ್ಚುವರಿ ಬಾಗಿಲುಗಳ ಜೋಡಣೆ ಸೇರಿದಂತೆ ಅಂತಿಮ ಹಂತದ ಸಿದ್ಧತೆಗಳನ್ನು ನಡೆಸಲಾಯಿತು.
ಮೂರು ಹಂತದ ಭದ್ರತೆ
ಸ್ಟಾಂಗ್ ರೂಂಗೆ 105ಕ್ಕೂ ಅಧಿಕ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಸುಮಾರು 40ರಷ್ಟು ಸಿಆರ್‌ಪಿಎಫ್ ಮಹಿಳಾ ವಿಭಾಗ ಸ್ಟ್ರಾಂಗ್ ರೂಮ್‌ನ ಸನಿಹದಲ್ಲಿದ್ದು, ಜತೆಗೆ ರಾಜ್ಯ ಮೀಸಲು ಪಡೆ, ಜಿಲ್ಲಾ ಪೊಲೀಸ್ ಪಡೆ ಕೂಡ ಭದ್ರತೆ ಒದಗಿಸಲಿವೆ.
ಚಿಕ್ಕಮಗಳೂರಿನ ಮತಯಂತ್ರ ಮುಂಜಾವ?
ಮತದಾನ ಪ್ರಕ್ರಿಯೆ 6 ಗಂಟೆಗೆ ಪೂರ್ಣಗೊಂಡು ಸಿಬಂದಿ, ಅಧಿಕಾರಿಗಳು ಮತಯಂತ್ರಗಳೊಂದಿಗೆ 6.30ಕ್ಕೆ ಹೊರಟರೂ ಕೆಲವು ದೂರದ ಮತಗಟ್ಟೆಗಳಿಂದ ಮತ ಎಣಿಕೆ ಕೇಂದ್ರಕ್ಕೆ ವಾಪಸ್ ಬರುವಾಗ ತಡರಾತ್ರಿಯಾಗಬಹುದು. ಚಿಕ್ಕಮಗಳೂರಿನಿಂದ ಮತಯಂತ್ರಗಳು ಉಡುಪಿಗೆ ತಲುಪುವಾಗ ತಡರಾತ್ರಿ ಅಥವಾ ಮರುದಿನ ಬೆಳಗ್ಗೆಯೂ ಆಗಬಹುದು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ವಾಹನಗಳಿಗೆ ಜಿಪಿಎಸ್
ಇದೇ ಮೊದಲ ಬಾರಿಗೆ ಮತಯಂತ್ರ ಸಾಗಾಟ ವಾಹನಗಳಿಗೆ ಜಿಪಿಎಸ್ ಅಳವಡಿಸಿ ಇವಿಎಂ ಯಂತ್ರಗಳನ್ನು ಕೊಂಡೊಯ್ಯಲಾಗಿದೆ. ಚುನಾವಣೆ ಸಿಬಂದಿಗೆ ಆವಶ್ಯಕ ವಸ್ತುಗಳನ್ನು ಒಳಗೊಂಡ ವೆಲ್ಫೆàರ್ ಕಿಟ್ ಮತ್ತು ವೈದ್ಯಕೀಯ ಕಿಟ್‌ಗಳನ್ನು ನೀಡಲಾಗಿದೆ.
ಇದು ಟೂಥ್‌ಪೇಸ್ಟ್, ಸಾಬೂನು, ತೆಂಗಿನ ಎಣ್ಣೆ, ಸೊಳ್ಳೆ ನಿರೋಧಕ ಪೇಪರ್ ಕಾಯಿಲ್, ಬಾಚಣಿಗೆ, ಬೆಂಕಿನ ಪೊಟ್ಟಣ ಒಳಗೊಂಡಿದೆ. ಇದಲ್ಲದೆ ಆವಶ್ಯಕ ಔಷಧಗಳನ್ನು ಒಳಗೊಂಡಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.