ಕುಸಿಯುತ್ತಿರುವ ಸಚ್ಚೇರಿಪೇಟೆ ಕಜೆ ರಸ್ತೆಯ ಮೋರಿ
ಆತಂಕದಲ್ಲಿ ವಾಹನ ಸವಾರರು
Team Udayavani, Jul 21, 2019, 5:09 AM IST
ವಿಶೇಷ ವರದಿ-ಬೆಳ್ಮಣ್: ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋಳ ಪದವು ಮಾರ್ಗದಿಂದ ಸಚ್ಚೇರಿಪೇಟೆ ಕಜೆ ಮಾರಿಗುಡಿ ದೇವಸ್ಥಾನ ಸಂಪರ್ಕಿಸುವ ರಸ್ತೆಯಲ್ಲಿ ಮೋರಿಯೊಂದು ಕುಸಿಯುತ್ತಿದ್ದು, ವಾಹನ ಸವಾರರು ಭೀತಿ ಎದುರಿಸುತ್ತಿದ್ದಾರೆ.
ಹಲವು ವರ್ಷಗಳ ಹಿಂದೆ ಇಲ್ಲಿ ರಸ್ತೆ ನಿರ್ಮಾಣಗೊಂಡ ವೇಳೆ ಮೋರಿ ಕಟ್ಟಲಾ ಗಿತ್ತು. ಅದೀಗ ಮಳೆ ನೀರಿನ ರಭಸಕ್ಕೆ ಕುಸಿಯುತ್ತಿದೆ. ಇದನ್ನು ಸರಿಪಡಿಸದೇ ಇದ್ದಲ್ಲಿ ರಸ್ತೆಯೂ ಕುಸಿಯುವ ಸಾಧ್ಯತೆ ಇದೆ.
ಒಂದು ಭಾಗ ಕುಸಿತ
ಮೋರಿಯ ಒಂದು ಬದಿ ಕುಸಿದಿದ್ದು, ಸಿಮೆಂಟ್‌ನ ಪೈಪ್ ಕೂಡ ತುಸು ದೂರ ಕೊಚ್ಚಿ ಹೋಗಿದೆ. ಮೋರಿಯ ತಡೆಗೋಡೆಯೂ ಕುಸಿದು ಕಲ್ಲುಗಳು ಚೆಲ್ಲಾಪಿಲ್ಲಿಯಾಗಿವೆ. ಮೋರಿ ಕುಸಿಯುತ್ತಿರುವುದರಿಂದ ರಸ್ತೆಯೂ ಬಿರುಕುಬಿಟ್ಟಿದೆ.
ಕಜೆ ಮಾರಿಗುಡಿ ಸಂಪರ್ಕ ರಸ್ತೆ
ಈ ರಸ್ತೆಯು ಮುಂಡ್ಕೂರು, ಬೆಳ್ಮಣ್ ಭಾಗದ ಭಕ್ತರಿಗೆ ಐತಿಹಾಸಿಕ ಕಜೆ ಮಾರಿಗುಡಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಈ ಭಾಗದಲ್ಲಿ ಹಲವಾರು ಮನೆಗಳಿದ್ದು ಜನರ ಸಂಚಾ ರಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ. ಬೆಳ್ಮಣ್, ಬೋಳ, ಕೆದಿಂಜೆ, ಮಂಜರಪಲ್ಕೆ ಹಾಗೂ ಮುಂಡ್ಕೂರು ಭಾಗದ ಜನರು ಮೂಡುಬಿದಿರೆಯನ್ನು ಸೇರಲು ಹೆಚ್ಚಾಗಿ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಹಲವು ವಾಹನಗಳು ಇದೇ ಮಾರ್ಗದಲ್ಲಿ ಓಡಾಟ ನಡೆಸುತ್ತವೆ. ಹೀಗಾಗಿ ಕೂಡಲೇ ಕುಸಿದ ಮೋರಿಯ ದುರಸ್ತಿ ಕಾರ್ಯ ನಡೆಯಲಿ ಎನ್ನುವುದು ಇಲ್ಲಿನ ನಿವಾಸಿಗಳ ಒತ್ತಾಯ. ಒಂದು ವೇಳೆ ಮೋರಿ ಸಂಪೂರ್ಣ ಕುಸಿದರೆ ಕಜೆ ಪರಿಸರವನ್ನು ಸಂಪರ್ಕಿಸುವ ರಸ್ತೆಯೂ ಕಡಿತಗೊಳ್ಳಲಿದೆ.
ಎಚ್ಚರಿಕೆ ಫಲಕ
ಮೋರಿ ಕುಸಿದಿರುವ ಬಗ್ಗೆ ರಸ್ತೆ ಬದಿ ರೀಪಿನ ಬೇಲಿ ಮತ್ತು ಒಂದು ಬ್ಯಾನರನ್ನು ಉಡುಪಿ ಜಿ.ಪಂ. ಎಂಜಿನಿಯರಿಂಗ್ ಇಲಾಖೆ ಅಳವಡಿಸಿದ್ದು ಬಿಟ್ಟರೆ ಮೋರಿಯ ದುರಸ್ತಿಯ ಬಗ್ಗೆ ಇಲ್ಲಿಯ ವರೆಗೂ ಕ್ರಮವನ್ನು ಕೈಗೊಂಡಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಶಾಲಾ ವಾಹನಗಳು, ವಿದ್ಯಾರ್ಥಿಗಳು ತೆರಳುತ್ತಿರುವುದರಿಂದ ಅಪಾಯಕಾರಿಯಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಮೋರಿ ಕುಸಿದು ಭಾರೀ ಅವಘಡ ಸಂಭವಿಸುವ ಮುನ್ನ ಸ್ಥಳೀಯಾಡಳಿತ ಹಾಗೂ ಇಲಾಖೆ ಎಚ್ಚೆತ್ತು ಹೊಸತೊಂದು ಮೋರಿ ನಿರ್ಮಾಣ ಮಾಡಬೇಕೆನ್ನುವ ಆಗ್ರಹ ಗ್ರಾಮಸ್ಥರದ್ದು.
ಜಿ.ಪಂ.ಗೆ ಮನವಿ
ಮೋರಿಯ ಸಮಸ್ಯೆಯ ಬಗ್ಗೆ ಜಿಲ್ಲಾ ಪಂಚಾಯತ್‌ಗೆ ಮನವಿ ಮಾಡಲಾಗುವುದು.
-ಶಶಿಧರ ಆಚಾರ್ಯ,
ಮುಂಡ್ಕೂರು ಗ್ರಾ.ಪಂ.ಪಿಡಿಒ
ಸ್ಪಂದಿಸುವ ಭರವಸೆ
ಈ ಮೋರಿಯ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಮನವರಿಕೆ ಮಾಡ ಲಾಗಿದೆ. ಸ್ಪಂದಿಸುವ ಭರವಸೆ ಇದೆ.
-ಉದಯ ಕಜೆ, ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.