ಅತ್ಯಮೂಲ್ಯ ಶಿಲಾಶಾಸನ ಪತ್ತೆ, ಸಂರಕ್ಷಣೆಗೆ ಮುಂದಾದ ಗ್ರಾಮಸ್ಥರು
Team Udayavani, Jun 11, 2019, 6:00 AM IST
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಮಹತೋಭಾರ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಅಮೂಲ್ಯ ಶಿಲಾ ಶಾಸನವೊಂದು ಉಳೂ¤ರು ಬಡಾಬೆಟ್ಟು ಎಂಬಲ್ಲಿ ಕೃಷಿ ಭೂಮಿಯಲ್ಲಿ ಪತ್ತೆಯಾಗಿದೆ. ಶಾಸನ ಸುಮಾರು 700 ವರ್ಷಗಳಷ್ಟು ಹಿಂದಿನದು ಎನ್ನಲಾಗಿದೆ.
ಸುಮಾರು ಏಳು ಅಡಿ ಎತ್ತರದ ಶಾಸನದ ಮೇಲ್ಭಾಗದಲ್ಲಿ ಪಾಣಿ ಪೀಠವನ್ನು ಹೊಂದಿದ ಲಿಂಗ ಮತ್ತು ಇಕ್ಕೆಲಗಳಲ್ಲಿ ದನ ಕರು ಮತ್ತು ದೀಪದ ಕೆತ್ತನೆಗಳಿವೆ.
ಲಿಪಿಗಳು ಸಂಪೂರ್ಣ ಮಾಸಿದಂತಿವೆ. ಆವೆ ಮಣ್ಣಿನ ಗಣಿಗಾರಿಕೆಯ ಪ್ರದೇಶದಲ್ಲಿ ಅನಾಥವಾಗಿ ಭೂ ಗರ್ಭ ಸೇರುತ್ತಿರುವುದನ್ನು ಕಂಡ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹಲ್ತೂರು ಸುರೇಂದ್ರ ಹೆಗ್ಡೆ ಅವರು ಶಾಸನದ ರಕ್ಷಣೆಗೆ ಮುಂದಾಗಿದ್ದಾರೆ.
ಮಾತನಾಡುವ ಶ್ರೀ ಮಹಾಲಿಂಗ ಎಂದೇ ಪ್ರಸಿದ್ಧಿಯಾದ ಉಳ್ತೂರಿನ ಶ್ರೀ ಮಹಾಲಿಂಗೇಶ್ವರ ವಿಜಯ ನಗರದ ಆಳ್ವಿಕೆಯ ಕಾಲದ ವೈಭವದಿಂದ ಮೆರೆದ ಅತ್ಯಮೂಲ್ಯ ಮಾಹಿತಿ ಗಳು ಈ ಶಾಸನಗಳಲ್ಲಿ ಅಡಕವಾಗಿದ್ದು ಎಂದು ಹೇಳಲಾಗುತ್ತಿದ್ದು ಹಿಂದೆ ಈ ದೇವಳದ ವ್ಯಾಪ್ತಿಯ ನೂರಾರು ಎಕರೆ ಕೃಷಿ ಭೂಮಿಗಳು ಇಲ್ಲಿನ ದೇವಳಕ್ಕೆ ಸಂಬಂಧಿಸಿದ್ದು ಎನ್ನುವುದು ಪೂರ್ವಜರ ಅಭಿಪ್ರಾಯ. ಅದಕ್ಕೆ ನಿದರ್ಶನವಾಗಿ ಇಲ್ಲಿ ಕೆಲವು ಕುರುಹುಗಳ ನಡುವೆ ಈ ಶಾಸನಗಳು ದೊರೆತಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಕೌತುಕತೆಗೆ ಕಾರಣವಾಗಿದೆ.
ಸಂಶೋಧನಾತ್ಮಕ ಉಲ್ಲೇಖಗಳಿವೆ
ಅಧ್ಯಯನದ ಪ್ರಕಾರ ಈ ಊರಿನ ಹೆಸರು ಮೊಳತ್ತೂರು ಎಂದಿತ್ತು ಎಂದು ಹೇಳಲಾಗುತ್ತಿದ್ದು ಕರಾವಳಿ ತೀರದಿಂದ ಒಳ ಭಾಗದಲ್ಲಿರುವ ಈ ಗ್ರಾಮದಲ್ಲಿ ಎಷ್ಟೇ ಮಳೆ , ನೆರೆ ಬಂದರು ಈ ಊರು ಉಳಿಯುತ್ತಿತ್ತು ಇಲ್ಲಿನ ಗುಡ್ಡೆವಳಲಿನಲ್ಲಿರುವ ಶಿಲಾ ಶಾಸನದಂತೆ ಇಲ್ಲಿನ ಐತಿಹಾಸಿಕ ವೈಭವದ ಆಡಳಿತವನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಹೀಗಾಗಿ ಈ ಪ್ರದೇಶವನ್ನು ಶಾಸನಗಳು ಉಲ್ಲೇಖೀಸುವಂತೆ ದೇವಸ್ಥಾನ ಇರುವ ಸ್ಥಳವನ್ನು ” ಮಾಳತೂರು ಕೇರಿಯ ಮಹಾದೇವ ” ಎಂದು ನಮೂದಿಸಲ್ಪಟ್ಟಿತ್ತು. ವಿಜಯ ನಗರ ಸಾಮ್ರಾಜ್ಯದ ಸ್ಥಾಪಕರಲ್ಲೊಬ್ಬನಾದ ಒಂದನೇ ಬುಕ್ಕರಾಯನ ಆಳ್ವಿಕೆಯ ಶಾಸನವೊಂದು ದೇವಳದ ಗರ್ಭಗೃಹದ ಎದುರು ಶಿಲಾ ಶಾಸನ 34 ಸಾಲುಗಳನ್ನು ಕ್ರಿ.ಶ.1438 ಬರೆಸಿದ್ದಾಗಿದ್ದು ಇದು ಕನ್ನಡ ಭಾಷೆಯಲ್ಲಿದೆ. ಹೀಗೆ ಈ ಗ್ರಾಮದಲ್ಲಿ ಇನ್ನು ಕೆಲವು ಶಿಲಾ ಶಾಸನಗಳಿದ್ದು ಕೆಲವೊಂದು ಶಾಸನಗಳು ನೀರಿನಲ್ಲಿ ವೆ ಎಂದು ದಿ| ಡಾ| ಬಿ.ವಸಂತ ಶೆಟ್ಟಿಯವರು ತಮ್ಮ ಸಂಶೋಧನಾತ್ಮಕ ಲೇಖನದಲ್ಲಿ ಉಲ್ಲೇಖೀಸಿದ್ದಾರೆ.
ಸಂರಕ್ಷಿಸಿ ಅಧ್ಯಯನಗೈಯುವ ಕೆಲಸವಾಗಬೇಕು
ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಈ ಶಿಲಾ ಶಾಸನಗಳ ಬಗ್ಗೆ ನಮ್ಮ ಪೂರ್ವಜರು ಹೇಳುವಂತೆ ಇತಿಹಾಸ ಪ್ರಸಿದ್ಧ ಮಹತೋಭಾರ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಒಳಪಟ್ಟಿದ್ದು ಆಗ ದೇವಳಕ್ಕೆ ಸಂಬಂಧಿಸಿದ ನೂರಾರು ಎಕರೆ ಹೊಲವನ್ನು ಕಾಯಲು ಇಬ್ಬರು ಕಾವಲುಗಾರರಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಶಾಸನದಲ್ಲಿ ಲಿಂಗ ಹಾಗೂ ಇದರ ಎರಡು ಬದಿಯಲ್ಲಿ ದನ ಕರು ಮತ್ತು ದೀಪದ ಸಂಕೇತಗಳಿರುವುದರಿಂದ ಇದರ ಅನತಿ ದೂರದಲ್ಲಿಯೇ ವಿಷ್ಣುವಿನ ಸಾನ್ನಿಧ್ಯದ ಕುರುಹುಗಳಿದೆ ಎನ್ನುವುದು ಆರೂಢ ಶಾಸ್ತ್ರದಲ್ಲಿ ಉಲ್ಲೇಖೀಸಿದ್ದಾರೆ. ಇಂತಹ ಅತ್ಯಮೂಲ್ಯ ಶಾಸನಗಳು ಸಂರಕ್ಷಿಸಿ ಅಧ್ಯಯನಗೈಯಬೇಕಾದ ಅಗತ್ಯತೆ ಇದೆ.
-ಸುರೇಂದ್ರ ಹೆಗ್ಡೆ ಹಲ್ತೂರು,
ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಉಳ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ
Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು
Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.