ಮನೆಮಂದಿಗೆ ಬೇಡವಾದಳೆ ತಾಯಿ?
Team Udayavani, Jul 5, 2018, 12:12 PM IST
ಉಡುಪಿ: ಈಕೆಯ ವಯಸ್ಸು 47 ವರ್ಷ. ಪತಿ, ಇಬ್ಬರು ಮಕ್ಕಳಿದ್ದಾರೆ. ಸಹೋದರ, ಸಹೋದರಿಯರೂ ಇದ್ದಾರೆ. ಆದರೆ ಈಕೆ ಈಗ “ಅನಾಥೆ’. ಸಮಾಜ ಸೇವಕಿಯೋರ್ವರ ಮನೆಯಲ್ಲಿ ವಾಸ, ಪೊಲೀಸ್ ಠಾಣೆಗೆ ಅಲೆದಾಟ. ಮನೆಗೆ ಸೇರಿಸಿಕೊಳ್ಳಿ ಎಂದು ಗೋಗರೆದರೂ ಕುಟುಂಬ ಕಿವಿ ಕೊಡುತ್ತಿಲ್ಲ. ಕಣ್ಣೆತ್ತಿ ನೋಡುತ್ತಿಲ್ಲ.
ಮಂದಾರ್ತಿ ಸಮೀಪದ ಮಹಿಳೆಯೊಬ್ಬರು ಮನೆಬಿಟ್ಟು ಬಂದು ನಾಲ್ಕು ತಿಂಗಳಾಯಿತು. ಈಕೆ ಮಾನಸಿಕವಾಗಿ ಸರಿಯಿಲ್ಲ ಎಂಬುದು ಮನೆಯವರ ದೂರು. ಉಡುಪಿಗೆ ಆಗಮಿಸಿದ್ದ ಈಕೆಯ ಕುರಿತು ಸಾರ್ವಜನಿಕರು ಸಮಾಜಸೇವಕ ವಿಶು ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದರು. ಅವರು ಪೊಲೀಸರು ಮತ್ತು ಮಹಿಳಾ ಸಾಂತ್ವನ ಕೇಂದ್ರದ ಸಹಕಾರದಲ್ಲಿ ಚಿಕಿತ್ಸೆ ನೀಡಿ ಆಕೆ ಗುಣಮುಖವಾದರು. ಈ ಬಗ್ಗೆ ಮನೆಯವರಿಗೆ ಮಾಹಿತಿ ನೀಡಲಾಯಿತು. ಆದರೆ ಮನೆಯವರು ಈಕೆಯನ್ನು ಸೇರಿಸಿಕೊಳ್ಳಲು ಸಿದ್ಧರಿಲ್ಲ. ಪರಿಪರಿಯಾಗಿ ಮನವರಿಕೆ ಮಾಡಿದರೂ ಪ್ರಯೋಜನವಾಗದೆ ಇದ್ದಾಗ ಈಗ ಪೊಲೀಸರಿಗೆ ಮನವಿ ನೀಡಲಾಗಿದೆ.
ಪೊಲೀಸರು ಮನೆಯವರನ್ನು ವಿಚಾರಿಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಪ್ರಸ್ತುತ ಈ ಮಹಿಳೆಗೆ ಸಮಾಜ ಸೇವಕಿಯೋರ್ವರು ತಮ್ಮ ಮನೆಯಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಮಹಿಳೆಗೆ ಕಾಲೇಜು ವಿದ್ಯಾಭ್ಯಾಸ ಮಾಡುವ ಇಬ್ಬರು ಹೆಣ್ಮಕ್ಕಳಿದ್ದಾರೆ. ಪತಿ ಬೆಂಗಳೂರಿನಲ್ಲಿ ಉದ್ಯೋಗಿ. ಸಹೋದರ, ಸಹೋದರಿಯರು, ಇತರ ಸಂಬಂಧಿಗಳು ಊರಿನಲ್ಲೇ ಇದ್ದಾರೆ. ಆದರೆ ಯಾರೊಬ್ಬರು ಕೂಡ ಮಹಿಳೆಯನ್ನು ಸೇರಿಸಿಕೊಳ್ಳಲು ಮುಂದಾಗುತ್ತಿಲ್ಲ. ಕಾನೂನು ಪ್ರಕಾರ ಮನೆಯವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ಅದನ್ನು ಮಾಡುತ್ತೇವೆ ಎಂದಿದ್ದಾರೆ ಪೊಲೀಸರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.