ನರೇಗಾ-ಬಾವಿ, ಹಟ್ಟಿ ನಿರ್ಮಾಣಕ್ಕೆ ಆಂದೋಲನ: ಪ್ರಮೋದ್‌ ಸೂಚನೆ


Team Udayavani, May 31, 2017, 12:03 PM IST

pramod-madhwaraj-800.jpg

ಉಡುಪಿ: ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ತೆರೆದ ಬಾವಿ, ದನದ ಹಟ್ಟಿ ನಿರ್ಮಿಸಲು ಅವಕಾಶವಿರು ವುದರಿಂದ ಇದನ್ನು ಆಂದೋಲನ ರೂಪದಲ್ಲಿ ಜನಪ್ರಿಯಗೊಳಿಸಲು ಸಚಿವ ಪ್ರಮೋದ್‌ ಮಧ್ವರಾಜ್‌ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಜಿ.ಪಂ. ಸಭಾಂಗಣ ದಲ್ಲಿ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಬಾವಿ ತೋಡಲು 2-3 ಸೆಂಟ್ಸ್‌ ಜಾಗವಿದ್ದರೂ ಸಾಕು. ಬಾವಿ ತೋಡಲು 82,000 ರೂ. ಸಿಗುತ್ತದೆ. ಕ್ಷೀರಭಾಗ್ಯ ಯೋಜನೆಯಿಂದ ಲೀಟರ್‌ ಹಾಲಿಗೆ 5 ರೂ. ಸಬ್ಸಿಡಿ ದೊರಕುವುದರಿಂದ ಜನರೂ ಹೆಚ್ಚು ಆಸಕ್ತರಿದ್ದಾರೆ. ಹಟ್ಟಿ ನಿರ್ಮಿಸಲು 42,000 ರೂ. ಹಣ ಸಿಗುತ್ತದೆ. ಬಾವಿಗೆ ನಾಲ್ಕು, ಹಟ್ಟಿಗೆ ಎರಡು ಜಾಬ್‌ ಕಾರ್ಡ್‌ ಮಾಡಿಸಿದರೆ ಸಾಕು. ಕೋಳಿಗೂಡು ನಿರ್ಮಿಸಲೂ ಅವಕಾಶವಿರುವುದರಿಂದ ಇದನ್ನೂ ಸೇರಿಸಿಕೊಳ್ಳಿ ಎಂದರು.
ಎಲ್ಲ ಗ್ರಾ.ಪಂ. ಪಿಡಿಒ ಗಳಿಗೆ ಗುರಿ ನಿಗದಿಪಡಿಸಿ ಜನಪ್ರಿಯ ಗೊಳಿಸಬೇಕು. ಸಾರ್ವಜನಿಕ ಕಾಮ ಗಾರಿಗಳ ಬಗ್ಗೆ ಜನರಿಗೆ ಆಸಕ್ತಿ ಕಡಿಮೆ ಇರುತ್ತದೆ. ವೈಯಕ್ತಿಕ ಸೌಲಭ್ಯ ದೊರಕುವುದಾದರೆ ಜನರೂ ಮುಂದೆ ಬರುತ್ತಾರೆ. ಇದನ್ನು ಗರಿಷ್ಠವಾಗಿ ಕೊಡುವಂತೆ ಮಾಡಬೇಕು ಎಂದು ಸಚಿವರು ತಿಳಿಸಿದರು.

ಎಂಜಿನಿಯರ್‌ಗಳು ಬಿಲ್‌ ಮಾಡು ವುದಿಲ್ಲ. ಆದುದರಿಂದ 82,000 ರೂ. ಸಿಗುತ್ತಿಲ್ಲ ಎಂದು ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ವಿ. ಸುನಿಲ್‌ ಕುಮಾರ್‌ ತಿಳಿಸಿದಾಗ, ಎಂಜಿನಿಯರ್‌ಗಳ ಸಭೆ ಕರೆದು ಅವರಿಗೆ ತಿಳಿಸಿ ಎಂದು ಸಚಿವರು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರಿಗೆ ತಿಳಿಸಿದರು.

ಮೈದಾನ, ಆವರಣಗೋಡೆ
ಶಾಲಾ ಆಟದ ಮೈದಾನ, ಆವರಣ ಗೋಡೆ ನಿರ್ಮಿಸಲು ಅವಕಾಶ ಇರುವುದರಿಂದ ಇದನ್ನೂ ಬಳಸಿಕೊಳ್ಳಿ. ಕ್ರೀಡಾ ಇಲಾಖೆಯಿಂದಲೂ ನಿರ್ವಹಿ ಸಲು ಸೂಚಿಸುತ್ತೇನೆ ಎಂದು ಸಚಿವರು ತಿಳಿಸಿದರು.

ಬಿಪಿಎಲ್‌ ಕಾರ್ಡ್‌
1.5 ಲ. ರೂ. ಒಳಗಿನ ಆದಾಯ ವಿದ್ದವರಿಗೆ ಹೊಸದಾಗಿ ಬಿಪಿಎಲ್‌ ಕಾರ್ಡ್‌ ನೀಡುವ ಪ್ರಯೋಗ ಕಾರ ವಾರದಲ್ಲಿ ನಡೆಯುತ್ತಿದೆ. ಇದು ಯಶಸ್ವಿ ಯಾದರೆ ಎಲ್ಲ ಜಿಲ್ಲೆಗಳಿಗೆ ಅನ್ವಯಿಸಲಾಗುತ್ತದೆ. ಈಗ ಯಾವ ಬಿಪಿಎಲ್‌ ಕಾರ್ಡನ್ನೂ ಕೊಡುತ್ತಿಲ್ಲ ಎಂದು ಆಹಾರ ಸರಬರಾಜು ಅಧಿಕಾರಿಗಳು ತಿಳಿಸಿದರು.

ಬಡವರಿಗೆ ಆಸ್ಪತ್ರೆ ಉಚಿತ ಸೌಲಭ್ಯ ಬಿಪಿಎಲ್‌ ಕಾರ್ಡ್‌ ಇದ್ದರೆ ಮಾತ್ರ ಸಿಗುತ್ತದೆ. ಇದು ಸಮಸ್ಯೆಯಾಗಿದೆ ಎಂದು ಪ್ರಮೋದ್‌, ಶ್ರೀನಿವಾಸ ಪೂಜಾರಿ ತಿಳಿಸಿದರು. ಈ ಕುರಿತು ಆರೋಗ್ಯ ಕಾರ್ಯದರ್ಶಿಯವ ರೊಂದಿಗೆ ಮಾತನಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಆರ್‌ಟಿಇ ಸೀಟು
ಶಿಕ್ಷಣ ಇಲಾಖೆ-ಆರ್‌ಟಿಇ 1,351 ಸೀಟು ಲಭ್ಯ ಇದ್ದು, 695 ದಾಖ ಲಾಗಿದೆ. 2ನೇ ಹಂತ ದಲ್ಲಿ 130 ದಾಖಲಾಗುತ್ತದೆ. ಇನ್ನೂ 400 ಸೀಟು ಬಾಕಿ ಇವೆೆ. ಮೂರನೇ ಹಂತದಲ್ಲಿ ಈ ಸೀಟು ಹಂಚಲಾಗುವುದು ಎಂದು ಡಿಡಿಪಿಐ ಹೇಳಿದರು. 

ಆರ್‌ಟಿಇ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ನೋ ಸ್ಕೂಲ್‌ ವಿಲೇಜ್‌ ಉಡುಪಿಯಲ್ಲಿ 3 ಇದ್ದು ಮಕ್ಕಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸಚಿವರು ಹೇಳಿ ದರು. 3ನೇ ಸುತ್ತಿನಲ್ಲೂ ಆರ್‌ಟಿಇ ಸೀಟುಗಳು ತುಂಬದಿದ್ದರೆ ಸರಕಾರದ ಮಾರ್ಗದರ್ಶನದಂತೆ ನಡೆದುಕೊಳ್ಳುವುದಾಗಿ ಡಿಡಿಪಿಐ ಹೇಳಿದರು. ಎಲ್ಲ ಮಕ್ಕಳಿಗೂ ಶೂವನ್ನೇ ಖರೀದಿಸಿ ನೀಡಬೇಕೆಂದು ಈ ಸಂದರ್ಭ ಸಚಿವರು ಹೇಳಿದರು. 

ಜಿಲ್ಲೆಯಲ್ಲಿ ಕೃಷಿ ಇಲಾಖೆ ಮಳೆ ಗಾಲದ ಬೆಳೆಗೆ ಸಜಾjಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳು ಲಭ್ಯವಿದೆ. ಗೊಬ್ಬರ, ಬೀಜಗಳಿಗೂ ಕೊರತೆ ಇಲ್ಲ ಎಂದ ಕೃಷಿ ಜಂಟಿ ನಿರ್ದೇಶಕರು, ಉಡುಪಿಗೆ 910 ಕ್ವಿಂಟಾಲ್‌, ಕುಂದಾಪುರಕ್ಕೆ 665 ಕ್ವಿಂಟಾಲ್‌, ಕಾರ್ಕಳಕ್ಕೆ 100 ಕ್ವಿಂಟಾಲ್‌ ಎಂಒ4 ಬೀಜ ಲಭ್ಯವಿದೆ ಎಂದು ವಿವರಿಸಿದರು. ಗೊಬ್ಬರಕ್ಕೂ ಯಾವುದೇ ತೊಂದರೆ ಇಲ್ಲ ಎಂದರು.

ಡೆಂಗ್ಯೂ ಜ್ವರ
ಮಲೇರಿಯಾ ಕಡಿಮೆ ಆಗಿದೆ. ಹನುಮಂತ ನಗರ, ಕೊಡಂಕೂರು ಮುಂತಾದೆಡೆ ಡೆಂಗ್ಯೂ ಜ್ವರ ವರದಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಹೇಳಿದರು.

ಕನ್ನಡ ಸಂಸ್ಕೃತಿ
ಇಲಾಖೆ ಅವ್ಯವಹಾರ !

ಕನ್ನಡ ಸಂಸ್ಕೃತಿ ಇಲಾಖೆ ಆಯೋಜಿಸಿದ ಉತ್ಸವದಲ್ಲಿ ಹಣ ದುರುಪಯೋಗವಾಗಿದೆ ಎಂದು ಕೆಡಿಪಿ ಸದಸ್ಯ ಉಮೇಶ್‌ ನಾಯ್ಕ ಆರೋಪಿಸಿದಾಗ ಸಚಿವರು ಎಸಿಬಿ ತನಿಖೆಗೆ ಆದೇಶಿಸಿದರು. 

ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಎಸ್ಪಿ ಕೆ.ಟಿ. ಬಾಲಕೃಷ್ಣ, ಸಹಾಯಕ ಕಮಿಷನರ್‌ ಶಿಲ್ಪಾ ನಾಗ್‌, ಹೆಚ್ಚುವರಿ ಎಸ್ಪಿ ವಿಷ್ಣುವರ್ದನ್‌ ಮೊದಲಾದವರು ಉಪಸ್ಥಿತರಿದ್ದರು. 

ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ ಸ್ವಾಗತಿಸಿದರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯ ಎಸ್‌. ಕೋಟ್ಯಾನ್‌, ಶಶಿಕಾಂತ್‌ ಪಡುಬಿದ್ರಿ, ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಉಮೇಶ್‌ ಎ. ನಾಯ್ಕ, ರಾಜು ಪೂಜಾರಿ, ಇಗ್ನೇಶಿಯಸ್‌ ಡಿ’ಸೋಜಾ, ದೇವಾನಂದ ಶೆಟ್ಟಿ ಪಾಲ್ಗೊಂಡಿದ್ದರು. 

ವಾರಾಹಿ ಖರ್ಚು-ರಾಷ್ಟ್ರೀಯ ಅಪರಾಧ
ವಾರಾಹಿ ಯೋಜನೆಗೆ ಮಾಡಿದ ಖರ್ಚಿನಿಂದ ಏನೂ ಪ್ರಯೋಜನವಾಗದೆ ಇದ್ದರೆ ಅದು ರಾಷ್ಟ್ರೀಯ ಅಪರಾಧ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ವಿಶ್ಲೇಷಿಸಿದರು. ಶಾಸಕ ಪ್ರತಾಪಚಂದ್ರ ಶೆಟ್ಟಿ, ಬಳ್ಕೂರು, ಸೇನಾಪುರ, ಕಟ್‌ಬೆಲೂ¤ರು ಮೊದಲಾದೆಡೆಗಳ ಅಣೆಕಟ್ಟಿನ ಉದ್ದೇಶವೇನು? 42 ಅಣೆಕಟ್ಟುಗಳನ್ನು ಸಣ್ಣ ನೀರಾವರಿ, ಕೆಆರ್‌ಡಿಎಲ್‌, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಇಲಾಖೆಗಳು ನಿರ್ವಹಿಸಿವೆ. ಇದಾವುವೂ ಉಪಯೋಗವಾಗುತ್ತಿಲ್ಲ. ಮುಂದೊಂದು ದಿನ ಕ್ರಿಮಿನಲ್‌ ಅಪರಾಧಗಳು ಆಗಬಹುದು. ಸಚಿವರು ನಿಗದಿಪಡಿಸಿದ ಸಭೆಯನ್ನು ಯಾರ್ಯಾರೋ ರದ್ದುಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯ ಎಂಜಿನಿಯರ್‌ ಇರುವುದಿಲ್ಲ ಎಂದು ಅಧೀಕ್ಷಕ ಎಂಜಿನಿಯರ್‌ ಹೇಳಿದ್ದರಿಂದ ಸಭೆ ರದ್ದುಪಡಿಸಿದೆ. ಈಗ ನೋಡಿದರೆ ಮುಖ್ಯ ಎಂಜಿನಿಯರ್‌ ಇಲ್ಲಿ ಪ್ರವಾಸದಲ್ಲಿದ್ದಾರೆ. ಮುಂದಿನ ಸಭೆಗೆ ನೀರಾವರಿ ನಿಗಮದ ಆಡಳಿತ ನಿರ್ದೇಶಕರನ್ನೇ ಕರೆಯೋಣ ಎಂದು ಸಚಿವರು ನುಡಿದರು. 

ಮರ ಕಡಿಯಲು ತಡೆ
ಮರ ಕಡಿಯದಂತೆ ಹಸಿರು ಪೀಠ ತಡೆಯಾಜ್ಞೆ ನೀಡಿದೆ. ಇದರಿಂದ ಯಾವ ಅಭಿವೃದ್ಧಿ ಕೆಲಸವೂ ನಡೆಯುತ್ತಿಲ್ಲ. 
ಏಕರೂಪಿ ಮರಳು ನೀತಿಗೆ ಅಡ್ಡಿ, ರಾಜ್ಯದಲ್ಲಿ ಕರಾವಳಿಗೆ ಪ್ರತ್ಯೇಕ ಮರಳು ನೀತಿ ಅಳವಡಿಸಲು ಸಚಿವರು ಮತ್ತು ಅಧಿಕಾರಿಗಳ ನಡುವೆ ಭಿನ್ನ ಅಭಿಪ್ರಾಯಗಳಿವೆ. ಸಚಿವ ಸಂಪುಟ ಉಪಸಮಿತಿ ಅಭಿಪ್ರಾಯಕ್ಕೆ ವಿತ್ತ ಖಾತೆ, ಗಣಿ ಇಲಾಖೆ ಆಕ್ಷೇಪಿಸಿದೆ. ಒಂದು ರಾಜ್ಯದಲ್ಲಿ ಎರಡು ನೀತಿ ಆಗುವುದಿಲ್ಲ ಎನ್ನುತ್ತಿದ್ದಾರೆ. ಮರಳನ್ನು ಏಲಂ ಮಾಡಲು ಇಲಾಖೆ ಆಕ್ಷೇಪವಿಲ್ಲ. ಸಚಿವ ರಮಾನಾಥ ರೈ ಅವರು ಲೀಸ್‌ಗೆ ಕೊಡುವ ಪರವಾಗಿದ್ದಾರೆ. ಸದ್ಯವೇ ಸಚವ ಸಂಪುಟ ಸಭೆ ಸೇರಿ ನಿರ್ಣಯ ಕೈಗೊಳ್ಳಲಿದೆ ಎಂದು ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಮರಳಿಗೆ ನಗದು ಪಾವತಿ ಸೂಚನೆ
ಇರುವ ಮರಳು ಬ್ಲಾಕ್‌ನ್ನು ಸರಿಯಾಗಿ ಬಳಸುತ್ತಿಲ್ಲ. ಜನರಿಂದ ಬೇಡಿಕೆ ಇದೆ. ಜನರ ಬೇಡಿಕೆಗೆ ಸರಿಯಾಗಿ ಮರಳನ್ನು ಗುರುತಿಸಿ ತೆಗೆಯುತ್ತಿರುವ ಬ್ಲಾಕ್‌ನಿಂದ ಪೂರೈಸಿ. ದೂರವಾಣಿ ಕರೆಗೂ ಸ್ಪಂದಿಸುತ್ತಿಲ್ಲ ಎನ್ನುತ್ತಿದ್ದಾರೆ. ನಾನೇ ಬೇನಾಮಿ ನಂಬರ್‌ನಿಂದ ಫೋನ್‌ ಮಾಡ್ತೇನೆ. ಜನರಿಗೆ ಡಿಡಿ ಮಾಡಿಕೊಂಡು ಬರಲು ಕಷ್ಟವಾಗು ತ್ತದೆ ಎಂದು ಶಾಸಕರು ಹೇಳುತ್ತಿದ್ದಾರೆ. ನಿಮಗೇನು ಕ್ಯಾಶ್‌ ವ್ಯವಹಾರ ಮಾಡಲು ಗೊತ್ತಿಲ್ಲವೆ? ಸ್ಥಳದಲ್ಲಿ ಜನರಿಂದ ನಗದು ತೆಗೆದುಕೊಂಡು ಡಿಡಿ ಮಾಡಿ ಗಣಿ ಇಲಾಖೆಗೆ ಕೊಡಿ. 
– ಪ್ರಮೋದ್‌ ಮಧ್ವರಾಜ್‌

ಟಾಪ್ ನ್ಯೂಸ್

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.