ರಾಷ್ಟ್ರೀಯ ಸಮಸ್ಯೆಗಳಿಗೆ ಸಮಾಜವಾದ,ಜಾತ್ಯತೀತವಾದ ಮೂಲ ಕಾರಣ: ತೇಜಸ್ವಿ


Team Udayavani, Dec 26, 2021, 6:34 AM IST

ರಾಷ್ಟ್ರೀಯ ಸಮಸ್ಯೆಗಳಿಗೆ ಸಮಾಜವಾದ,ಜಾತ್ಯತೀತವಾದ ಮೂಲ ಕಾರಣ: ತೇಜಸ್ವಿ

ಉಡುಪಿ: ಸಮಾಜವಾದ ಮತ್ತು ಜಾತ್ಯತೀತವಾದ ರಾಷ್ಟ್ರೀಯ ಸಮಸ್ಯೆಗಳಿಗೆ ಮೂಲಕಾರಣವಾಗಿದೆ. ಸಮಾಜವಾದ ಭಾರತವನ್ನು ಆರ್ಥಿಕವಾಗಿ ಬಡದೇಶ ಮಾಡಿದರೆ ಜಾತ್ಯತೀತವಾದ ಸಾಂಸ್ಕೃತಿಕವಾಗಿ ಭಾರತವನ್ನು ಬಡದೇಶವನ್ನಾಗಿಸಿದೆ. ಯುಪಿಎ ಸರಕಾರ 70 ವರ್ಷಗಳಿಂದಲೂ ಇದೇ ಸಿದ್ಧಾಂತವನ್ನು ಪಾಲಿಸಿಕೊಂಡು ಬಂದಿತ್ತು. ಆದರೆ ಕಳೆದ 7 ವರ್ಷಗಳಲ್ಲಿ ಭಾರತ ಅಭಿವೃದ್ಧಿಯತ್ತ ಬದಲಾಗುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಹಾಗೂ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಸಂದರ್ಭ ಬಿಜೆಪಿ ರಾಜ್ಯ ಯುವ ಮೋರ್ಚಾ, ಜಿಲ್ಲಾ ಬಿಜೆಪಿ, ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ “ಸುಶಾಸನ’ ಎನ್ನುವ ಪರಿಕಲ್ಪನೆಯಲ್ಲಿ ಮಣಿಪಾಲದಲ್ಲಿ ಶನಿವಾರ ನಡೆದ ಪ್ರಬುದ್ಧರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

7 ವರ್ಷಗಳ ಅವಧಿಯಲ್ಲಿ ಮೋದಿ ಸರಕಾರ 33 ಹೊಸ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಿದೆ. ಸಮಾಜವಾದ ಎಂಬ ಪೆಡಂಭೂತದಿಂದ ಹೊರಬಂದು ಭಾರತ ಯಶಸ್ವಿ ಹಾದಿಯಲ್ಲಿ ಮುನ್ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯದವರಲ್ಲಿ ಭಾರತದ ಮೇಲಿನ ವ್ಯಾಮೋಹ ಹೆಚ್ಚಳವಾಗತೊಡಗಿದೆ ಎಂದರು.

ಆರೋಗ್ಯಭರಿತ ಸ್ಪರ್ಧೆ:

ಬಿಹಾರ ಸಹಿತ ಬಿಜೆಪಿ ಆಡಳಿತ ಇರದ ಕೆಲವೊಂದು ಗ್ರಾಮಗಳು ಈಗಲೂ ಕುಗ್ರಾಮವಾಗಿಯೇ ಉಳಿದುಕೊಂಡಿವೆ. ಯುವ ಭಾರತದ ಆಕಾಂಕ್ಷಿಗಳನ್ನು ರಾಹುಲ್‌ ಗಾಂಧಿಯವರು ಇನ್ನೂ ಅರ್ಥೈಸಿಕೊಂಡಿಲ್ಲ. ಆದರೆ ಬಿಜೆಪಿ ಯುವ ಸಮುದಾಯಕ್ಕೆ ಮುಕ್ತ ಸ್ವಾತಂತ್ರ್ಯ ಒದಗಿಸಿ ಆರೋಗ್ಯ ಭರಿತ ಸ್ಪರ್ಧೆ ಕಲ್ಪಿಸಿದೆ ಎಂದರು.

ಹಿಂದೂ ಪುನರುತ್ಥಾನದ ಕೆಲಸ:

ಸೋಮನಾಥ, ಅಯೋಧ್ಯೆ, ಕಾಶಿ ಸಹಿತ ದೇಶದಲ್ಲಿ ಈಗ ಹಿಂದೂ ಪುನರುತ್ಥಾನದ ಕೆಲಸ ಕಾರ್ಯಗಳು ನಡೆಯುತ್ತಿವೆ.  ಸಮಾಜವನ್ನು ಒಟ್ಟಿಗೆ ಸೇರಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಸಾಮಾನ್ಯ ಕಾರ್ಯಕರ್ತನೂ ಅಧ್ಯಕ್ಷ ಸಹಿತ ಮಹೋನ್ನತ ಹುದ್ದೆ ಅಲಂಕರಿಸುವ ಅವಕಾಶ ಇರುವ ಪಕ್ಷವೇ ಬಿಜೆಪಿ ಎಂದರು.

ಸನಾತನ ಧರ್ಮದ ಪುನರುತ್ಥಾನವಾಗಿ ಭಾರತ ದೇಶ ಜಗದ್ಗುರುವಾಗಿ ಎದ್ದೇಳಲು ಧಾರ್ಮಿಕ ಜೀರ್ಣೋದ್ಧಾರ ಮೋದಿಯವರ ಸುಶಾಸನ ಕಾರ್ಯಕ್ರಮದ ಮೂಲಕ ಆಗಿದೆ. ದೇವಸ್ಥಾನಗಳ ಪುನರುತ್ಥಾನ, ಸ್ಥಳೀಯ ಭಾಷೆ, ಸಂಸ್ಕೃತಿ ಅಭಿವೃದ್ಧಿಗೆ ಮೋದಿ ಸರಕಾರ ಒತ್ತು ನೀಡಿದೆ ಎಂದರು.

ಚಿಂತನೆ, ಸಂವಾದ :

ಈ ಗೋಷ್ಠಿಯಲ್ಲಿ ಸಮಾಜದ ವಿವಿಧ ಸಂಘಟನೆಗಳು ಮತ್ತು ವಿವಿಧ ವೃತ್ತಿಪರ ಕ್ಷೇತ್ರಗಳ ಪ್ರಮುಖ ಗಣ್ಯರು ಭಾಗವಹಿಸಿದ್ದರು. ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಚಿಂತನೆ ಮತ್ತು ಸಂವಾದ ನಡೆಸಲಾಯಿತು.

ಶಾಸಕ ಕೆ. ರಘುಪತಿ ಭಟ್‌ ಪ್ರಸ್ತಾವನೆಗೈದರು. ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್‌ ಶೆಟ್ಟಿ, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್‌ ಶೆಟ್ಟಿ, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ| ಸಂದೀಪ್‌ ಸ್ವಾಗತಿಸಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಮಣಿಪಾಲ ವಂದಿಸಿದರು. ಪ್ರಸಾದ್‌ ಕುತ್ಯಾರು ಕಾರ್ಯಕ್ರಮ ನಿರೂಪಿಸಿದರು.

ಮತಾಂತರ ನಿಷೇಧ ಕಾಯ್ದೆ ಉತ್ತಮ ಬೆಳವಣಿಗೆ :

ಹೊರದೇಶಗಳಿಂದ ಬಂದು ಇಲ್ಲಿರುವ ಅನ್ಯಧರ್ಮದವರನ್ನು ಓಲೈಕೆ ಮಾಡಿ ಅವರ ಮೂಲಕ ಹಿಂದೂಗಳಿಗೆ ಆಮಿಷ ಒಡ್ಡಿ ಮತಾಂತರ ಮಾಡಲಾಗುತ್ತಿದೆ. ಸನಾತನ ಧರ್ಮ ಉಳಿಸಲು ಮತಾಂತರ ಕಾಯ್ದೆ ಉತ್ತಮ ನಿರ್ಧಾರವಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಟಾಪ್ ನ್ಯೂಸ್

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

Punjab; Aam Aadmi leader shot by Akali Dal leader

Punjab; ಆಮ್‌ ಆದ್ಮಿ ನಾಯಕನಿಗೆ ಗುಂಡೇಟು ಹೊಡೆದ ಅಕಾಲಿ ದಳ ಮುಖಂಡ

10-ckm

Chikkamagaluru: ಪ್ರವಾಸಿಗರನ್ನು ಕರೆತಂದಿದ್ದ ಬೆಂಗಳೂರಿನ ಚಾಲಕ ಹೃದಯಾಘಾತದಿಂದ ಮೃತ್ಯು

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

9-mng-1

Mumtaz Ali ನಾಪತ್ತೆ ಪ್ರಕರಣ; ಶೋಧ ಕಾರ್ಯಾಚರಣೆಗೆ ಈಶ್ವರ ಮಲ್ಪೆ ತಂಡ ಆಗಮನ

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು

Delhi: ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದು ರಾಮನ ಪಾತ್ರಧಾರಿ ಮೃತ್ಯು

Delhi: ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದು ರಾಮನ ಪಾತ್ರಧಾರಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Udupi: ಸಾಲು-ಸಾಲು ರಜೆ; ನವರಾತ್ರಿ ಸಂಭ್ರಮ; ಎಲ್ಲೆಡೆ ವಾಹನ ದಟ್ಟಣೆ

5

Udupi: ಗ್ರಾಮ ಪಂಚಾಯತ್ ನೌಕರರ ಕಷ್ಟ ಕೇಳ್ಳೋರಿಲ್ಲ !

8-shirva

ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್‌

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

Udupi: ಗೀತಾರ್ಥ ಚಿಂತನೆ 56: ದುರ್ಯೋಧನನ ಮಾನಸಿಕ ಅಸಮತೋಲನ

Udupi: ಗೀತಾರ್ಥ ಚಿಂತನೆ 56: ದುರ್ಯೋಧನನ ಮಾನಸಿಕ ಅಸಮತೋಲನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

Punjab; Aam Aadmi leader shot by Akali Dal leader

Punjab; ಆಮ್‌ ಆದ್ಮಿ ನಾಯಕನಿಗೆ ಗುಂಡೇಟು ಹೊಡೆದ ಅಕಾಲಿ ದಳ ಮುಖಂಡ

8

Udupi: ಸಾಲು-ಸಾಲು ರಜೆ; ನವರಾತ್ರಿ ಸಂಭ್ರಮ; ಎಲ್ಲೆಡೆ ವಾಹನ ದಟ್ಟಣೆ

7(1)

Mangalore: ಊದು ಪೂಜೆ: ಹುಲಿ ವೇಷಕ್ಕೆ ಮುಹೂರ್ತ!

ಟ್ಯಾಂಕ್ ನೀರಿಗೆ ವಿಷ, ಬೆಚ್ಚಿಬಿದ್ದ ಗ್ರಾಮಸ್ಥರು

Hatti: ಟ್ಯಾಂಕ್ ನೀರಿಗೆ ವಿಷ, ಬೆಚ್ಚಿಬಿದ್ದ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.