ಮುಂಡ್ಕೂರು-ಜಾರಿಗೆಕಟ್ಟೆ ಸರ್ಕಲ್: ಬ್ಯಾರಿಕೇಡ್‌ಗಳಿಂದ ಅಡ್ಡಿ
Team Udayavani, Jun 19, 2019, 5:34 AM IST
ಬೆಳ್ಮಣ್: ವಾಹನ ವೇಗಕ್ಕೆ ಹಾಕಲಾದ ಬ್ಯಾರಿಕೇಡ್‌ಗಳಿಂದಲೇ ಸಂಚಾರಕ್ಕೆ ಸಮಸ್ಯೆ ಯಾಗು ತ್ತಿರುವ ಪರಿಸ್ಥಿತಿ ಮುಂಡ್ಕೂರು ಜಾರಿಗೆಕಟ್ಟೆ ಸರ್ಕಲ್ನದ್ದು.
ಅಕ್ರಮಗಳನ್ನು ತಡೆಯಲು ಲೋಕಸಭೆ ಚುನಾವಣೆ ಸಂದರ್ಭ ಇಲ್ಲಿ ಪೊಲೀಸ್ ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಚುನಾವಣೆ ಮುಗಿದರೂ ಇನ್ನೂ ತೆರವುಗೊಂಡಿಲ್ಲ.
ಪೊಲೀಸರೇ ಇಲ್ಲದ ಚೆಕ್‌ಪೋಸ್ಟ್
ಆಗುಂಬೆ ಘಾಟಿ ರಸ್ತೆ ದುರಸ್ತಿ ಸಂದರ್ಭ ಕಾರ್ಕಳ ಕಡೆಯಿಂದ ಮಂಗಳೂರು ಹಾಗೂ ಮೂಡಬಿದ್ರೆ ಕಡೆಗೆ ಸಂಚರಿಸುವ ವಾಹನಗಳನ್ನು ತಪಾಸಣೆ ನಡೆಸಲು ಮುಂಡ್ಕೂರು-ಜಾರಿಗೆಕಟ್ಟೆ ಜಂಕ್ಷನ್‌ನ ಸರ್ಕಲ್ ಬಳಿ ಖಾಸಗಿ ಜಾಗದಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿತ್ತು. ಇದಕ್ಕೆ ಪೂರಕವಾಗಿ ಮುಂಡ್ಕೂರು, ಸಚ್ಚೇರಿಪೇಟೆ, ಕಿನ್ನಿಗೋಳಿ ಕಡೆ ತಿರುಗುವ ರಸ್ತೆಗಳಿಗೆ ಸುಮಾರು ಇಪ್ಪತ್ತಕ್ಕೂ ಮಿಕ್ಕಿ ಬ್ಯಾರಿಕೇಡ್‌ಗಳನ್ನು ಆಳವಡಿಸಲಾಗಿತ್ತು. 24 ತಾಸು ಪ್ರತಿ ವಾಹನಗಳನ್ನು ತಪಾಸಣೆ ಗೊಳಪಡಿಸ ಲಾಗುತ್ತಿತ್ತು. ಕಾರ್ಕಳ ಗ್ರಾಮಾಂತರ, ನಗರ ಪೊಲೀಸರ ನಿರ್ವಹಣೆಯಲ್ಲಿ ಚೆಕ್‌ಪೋಸ್ಟ್ ಇದ್ದಿದ್ದು, ಇದೀಗ ಖಾಲಿಯಾಗಿದ್ದರೂ ಬ್ಯಾರಿಕೇಡ್‌ಗಳು ಹಾಗೆಯೇ ಇವೆ.
ಬ್ಯಾರಿಕೇಡ್‌ಗಳಿಂದ ಅಪಘಾತ
ಇಲ್ಲಿನ ಮೂರೂ ಕಡೆಗಳ ರಸ್ತೆಗಳಿಗೆ ಅಸಮರ್ಪಕವಾಗಿ ಬ್ಯಾರಿಕೇಡ್ ಇಡಲಾಗಿದೆ. ಸಚ್ಚೇರಿಪೇಟೆ ಕಡೆಯಿಂದ ಕಿನ್ನಿಗೋಳಿಗೆ ತಿರುಗುವ ರಸ್ತೆಯನ್ನು ಮುಚ್ಚಲಾಗಿದ್ದು ಆ ಕಡೆ ಪ್ರಯಾಣಿಸುವ ವಾಹನಗಳು ಸರ್ಕಲ್ ಹಾಕಿಯೇ ಮುಂದುವರಿಯಬೇಕಾದ್ದರಿಂದ ಗಡಿಬಿಡಿಯಲ್ಲಿ ವಾಹನ ಚಾಲಕರಿಂದ ನಿರಂತರ ಅಪಘಾತಗಳು ನಡೆಯುತ್ತಿವೆ. ಅಲ್ಲದೆ ರಸ್ತೆಯುದ್ದಕ್ಕೂ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರಿಂದ ಹನಿ ಮಳೆಗೆ ದ್ವಿಚಕ್ರ ಸವಾರರು ಎದರುರಿನ ವಾಹನಗಳ ವೇಗವನ್ನರಿಯದೆ ಬ್ಯಾರಿಕೇಡ್‌ಗೆ ಅಪ್ಪಳಿಸಿದ ಘಟನೆಗಳೂ ಇವೆ.
ಬ್ಯಾರಿಕೇಡ್‌ಗಳು ಬೆಳ್ಮಣ್‌ನವು
ಇಲ್ಲಿ ತಿಂಗಳುಗಟ್ಟಲೆ ಆಳವಡಿಸಲಾಗಿರುವ ಹೆಚ್ಚಿನ ಬ್ಯಾರಿಕೇಡ್‌ಗಳು ಬೆಳ್ಮಣ್‌ನದ್ದಾಗಿವೆ. ಸಂಘ ಸಂಸ್ಥೆಗಳು ಉದಾರವಾಗಿ ನೀಡಿದ್ದ ಅವುಗಳನ್ನು ಇದೀಗ ಮುಂಡ್ಕೂರು-ಜಾರಿಗೆಕಟ್ಟೆಯಲ್ಲಿರಿಸಲಾಗಿದ್ದು ಬೆಳ್ಮಣ್ ಪೇಟೆಯಲ್ಲಿ ಬ್ಯಾರಿಕೇಡ್‌ಗಳಿಲ್ಲ.
ಜಾರಿಗೆಕಟ್ಟೆ ಚೆಕ್‌ಪೋಸ್ಟ್ ತೆರವಿಗೂ ಆಗ್ರಹ
ಚುನಾವಣೆ ಸಂದರ್ಭ ಹಾಕಲಾದ ಚೆಕ್‌ಪೋಸ್ಟ್ ತೆರವುಗೊಳಿಸಿ ಯಥಾಸ್ಥಿತಿ ಮುಂದುವರಿಸಲು ಜನರು ಆಗ್ರಹಿಸಿದ್ದಾರೆ. ಇಲ್ಲೀಗ ಸಂಚಾರ ನಿಯಮ ಉಲ್ಲಂಘನೆ ಮಾಡುವ ಚಾಲಕರನ್ನು ಹಿಡಿಯಲಾಗುತ್ತಿದೆಯೇ ವಿನಾ ಬೇರೇನೂ ಉಪಯೋಗವಿಲ್ಲ. ಅದನ್ನು ಚೆಕ್‌ಪೋಸ್ಟ್ ಇಲ್ಲದೆಯೂ ಮಾಡಬಹುದು. ಆದ್ದರಿಂದ ಚೆಕ್‌ಪೋಸ್ಟ್ ಮತ್ತು ತೊಂದರೆಯಾಗುತ್ತಿರುವ ಬ್ಯಾರಿಕೇಡ್‌ಗಳನ್ನೂ ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
– ಶರತ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.