ಕುಸಿದು ತಿಂಗಳಾದರೂ ದುರಸ್ತಿ ಕಾಣದ ಮುಂಡ್ಕೂರು ಮೀನು ಮಾರುಕಟ್ಟೆ
Team Udayavani, Sep 25, 2019, 5:56 AM IST
ಬೆಳ್ಮಣ್: ಮುಂಡ್ಕೂರು ಗ್ರಾ.ಪಂ.ನ ಮೀನು ಮಾರುಕಟ್ಟೆ ಕುಸಿದು ತಿಂಗಳು ಕಳೆದರೂ ಇನ್ನೂ ದುರಸ್ತಿ ಕಾಮಗಾರಿ ಕೈಗೊಳ್ಳದ ಸ್ಥಳೀಯ ಪಂಚಾಯತ್ ಆಡಳಿತ ವೈಖರಿಯ ಬಗ್ಗೆ ಮೀನು ಮಾರಾಟಗಾರರು ಮತ್ತು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಂಡ್ಕೂರಿನ ಮೀನು ಮಾರುಕಟ್ಟೆಯ ಕಟ್ಟಡ ಕಳೆದ ಆಗಸ್ಟ್ 31ರ ಸಂಜೆ ಏಕಾಏಕಿ ಧರಾಶಾಯಿಯಾಗಿತ್ತು. ಆ ಸಂದರ್ಭ ಯಾವುದೇ ಮೀನು ವ್ಯಾಪಾರಿಗಳು ಸ್ಥಳದಲ್ಲಿಲ್ಲದ ಕಾರಣ ಭಾರೀ ಅವಘಡ ತಪ್ಪಿತ್ತು. ಈ ಬೆನ್ನಲ್ಲೇ ಕಟ್ಟಡ ಕಳಪೆ ಕಾಮಗಾಯಿಂದ ಕೂಡಿರುವ ಕಾರಣದಿಂದಲೇ ಕುಸಿದಿದೆ ಎನ್ನುವ ಮಾತುಗಳೂ ಸಾರ್ವಜನಿಕ ವಲಯದಿಂದ ಕೇಳಿಬಂದಿದ್ದವು.
ಪಂಚಾಯತ್‌ನ ನಿರ್ಲಕ್ಷé
15 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಮೀನು ಮಾರ್ಕೆಟ್ ಕುಸಿತವಾಗಿ ತಿಂಗಳು ಸಮೀಪಿಸಿದರೂ ಸಂಬಂಧಪಟ್ಟ ಮುಂಡ್ಕೂರು ಪಂಚಾಯತ್ ಆಡಳಿತ ಮಾತ್ರ ಕೈ ಕಟ್ಟಿ ಕುಳಿತಿದೆ ಎಂದು ಮೀನು ವ್ಯಾಪಾರಸ್ಥರು ಹಾಗೂ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ಯಾನರ್‌ನ ಅಡಿ ಮೀನು ಮಾರಾಟ
ಮಾರ್ಕೆಟ್ ಕುಸಿದ ಬಳಿಕ ದುರಸ್ತಿಯ ನಿರೀಕ್ಷೆ ಯಲ್ಲಿರುವ ಮೀನು ಮಾರಾಟಗಾರರು ಫ್ಲೆಕ್ಸ್ ಬ್ಯಾನರ್‌ನ ಮಾಡು ಕಟ್ಟಿ ಮಳೆ-ಬಿಸಿಲಿನಿಂದ ರಕ್ಷಿಸಿ ಕೊಂಡು ಮೀನು ವ್ಯಾಪಾರ ಮಾಡುತ್ತಿದ್ದಾರೆ. ಈ ಬಗ್ಗೆ ಮುಂಡ್ಕೂರು ಗ್ರಾ.ಪಂ. ಕೂಡಲೇ ಸ್ಪಂದಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಜನಾಂದೋಲನ ನಡೆಸಬೇಕು
ಪಂಚಾಯತ್ ಆಡಳಿತದ ಕಾರ್ಯವೈಖರಿ ಏನೇನೂ ಸಾಲದು. ಹಿಂದಿನ ಆಡಳಿತಾವಧಿಯಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳು ಪ್ರಸ್ತುತ ಆಡಳಿತದವರಿಂದ ನಡೆಯುತ್ತಿಲ್ಲ. ಆದ್ದರಿಂದ ಮೀನು ಮಾರುಕಟ್ಟೆಯಂತಹ ನನೆಗುದಿಗೆ ಬಿದ್ದಿರುವ ಹಲವು ಕೆಲಸಗಳನ್ನು ಜನಾಂದೋಲನದ
ಮೂಲಕ ನಡೆಸಬೇಕು.
-ಗುರುನಾಥ ಪೂಜಾರಿ, ಗ್ರಾಮಸ್ಥ
ದುರಸ್ತಿ ಭರವಸೆ
ಮೀನು ಮಾರುಕಟ್ಟೆ ಕಟ್ಟಡದ ದುರಸ್ತಿ ವಿಚಾರವನ್ನು ಪಂಚಾಯತ್ ಗಮನಕ್ಕೆ ತರಲಾಗಿದೆ. ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ. ಬೇಗ ಮಾಡಿದರೆ ಉತ್ತಮ.
-ರಝಾಕ್, ಮೀನು ವ್ಯಾಪಾರಿ
ಅನುದಾನ ಸಾಲದು
ಪಂಚಾಯತ್ ಅನುದಾನ ಈ ಮಾರುಕಟ್ಟೆ ನಿರ್ಮಾಣಕ್ಕೆ ಸಾಲದು. ವಿಶೇಷ ಅನುದಾನಕ್ಕೆ ಪ್ರಯತ್ನಿಸಿ ಮರು ನಿರ್ಮಾಣ ಮಾಡಲಾಗುವುದು. ಈಗಾಗಲೇ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆದಿದೆ.
-ಶುಭಾ ಪಿ. ಶೆಟ್ಟಿ, ಮುಂಡ್ಕೂರು, ಗ್ರಾ.ಪಂ. ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.