ಮುಂಡ್ಕೂರು ಗ್ರಾ.ಪಂ.: ವಿಶೇಷ ಗ್ರಾಮಸಭೆ
Team Udayavani, Jul 11, 2017, 1:45 AM IST
ಬೆಳ್ಮಣ್: 2017-18ನೇ ಸಾಲಿನ ಪ್ರಥಮ ಹಂತದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಮುಂಡ್ಕೂರು ಗ್ರಾ.ಪಂ.ನಲ್ಲಿ ಮುಂಡ್ಕೂರು ಸಪಳಿಗ ಸಭಾಭವನದಲ್ಲಿ ಸೋಮವಾರ ನಡೆಯಿತು.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ತಾಲೂಕು ಸಂಚಾಲಕ ಸುಕುಮಾರ್ ಬಿ. ಉಪಸ್ಥಿತರಿದ್ದು ಮುಂಡ್ಕೂರಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 47 ಕಾಮಗಾರಿಗಳು ನಡೆದಿವೆಯೆಂದರು.ಯೋಜನೆಯ ಹೆಸರಲ್ಲಿ ನಡೆದ ವಿವಿಧ ಕಾಮಗಾರಿಗಳ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿ ಕೆಲವೊಂದು ಕಾಮಗಾರಿಗಳಿಗೆ ನಾಮ ಫಲಕ ಅಳವಡಿಸಿಲ್ಲ, ಕಾರ್ಡ್‌ದಾರರು ಭಾವಚಿತ್ರ ಲಗತ್ತಿಸಿಲ್ಲ, ಒಂದು ಕುಟುಂಬಕ್ಕೆ 91 ದಿನ ಕೆಲಸ ನೀಡಲಾಗಿದೆ ಹಾಗೂ ಜೆಸಿಬಿ ಬಳಸಿ ಕೆಲಸ ಮಾಡಲಾಗಿದೆ ಎಂದು ಒಂದಿಷ್ಟು ಗೊಂದಲ ಸೃಷ್ಟಿಸಿದರು.ಮುಲ್ಲಡ್ಕ ಹಾಗೂ ಸಚ್ಚೇರಿಪೇಟೆ ಕಜೆಯಲ್ಲಿ ಕಳೆದ ವರ್ಷ ಜಲ ಮರುಪೂರಣದ ಬಗ್ಗೆ ನಡೆದ ಕಾಮಗಾರಿಗಳು ಮಾನವ ಶಕ್ತಿಯ ಬಳಕೆಯ ಬದಲಾಗಿ ಜೆಸಿಬಿ ಬಳಕೆಯಿಂದಾಗಿದೆಯೆಂದು ವಾದಿಸಿದರು. ಮುಂಡ್ಕೂರಿನಲ್ಲಿ ನಡೆದ ಕಾಮಗಾರಿಗಳ ವಿವರ ಹಾಗೂ ನ್ಯೂನತೆಗಳ ಬಗ್ಗೆ ಬೆಳಕು ಚೆಲ್ಲಿದ ಅವರು ಕಾಮಗಾರಿ ಹೇಗಿರಬೇಕು ಮತ್ತು ಯಾವ ರೀತಿಯಲ್ಲಿ ನಡೆಸಬೇಕು ಎಂಬ ಬಗ್ಗೆಯೂ ಮಾಹಿತಿ ನೀಡಿದರು.
ಈ ಬಗ್ಗೆ ಪೂರಕ ಉತ್ತರ ನೀಡಿದ ಪಿಡಿಒ ರಮೇಶ್ ಎಸ್., ಮುಂಡ್ಕೂರು ಪಂಚಾಯತ್ ವ್ಯಾಪ್ತಿಯಲ್ಲಿ ಯೋಜನೆಯ ಯಾವುದೇ ಕಾಮಗಾರಿಗಳು ಯಂತ್ರಗಳ ಮೂಲಕ ನಡೆದಿಲ್ಲ, ಬದಲಾಗಿ ಕೂಲಿಯಾಳುಗಳ ಮೂಲಕವೇ ನಡೆದಿದೆಯೆಂದರು.
ಬೆಳ್ಮಣ್ ವಲಯ ಶಿಕ್ಷಣ ಸಂಯೋಜಕ ಕೃಷ್ಣ ಎ. ನೋಡೆಲ್ ಅಧಿಕಾರಿಯಾಗಿದ್ದು ಆಧ್ಯಕ್ಷತೆ ವಹಿಸಿದ್ದರು.
ಪಂಚಾಯತ್ ಆಧ್ಯಕ್ಷೆ ಶುಭಾ ಪಿ. ಶೆಟ್ಟಿ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ತಾಲೂಕು ಸಹಾಯಕ ಅಭಿಯಂತರ ಲೋಕೇಶ್, ಅರಣ್ಯ ಇಲಾಖೆಯ ಶಂಕರ್, ಪಂಚಾಯತ್ ಸದಸ್ಯರು, ಕಾರ್ಡ್‌ದಾರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.