ಮುಂಡ್ಕೂರು ದುರ್ಗಾಪರಮೇಶ್ವರೀ ದೇಗುಲಕ್ಕೆ ಶಾಂಭವೀ ನದಿ ನೀರು

Team Udayavani, Aug 5, 2017, 7:10 AM IST

0408belmanE3A.jpg

ಬೆಳ್ಮಣ್‌: ಅದಾನಿ ಸಂಸ್ಥೆಯ ವ್ಯಾಪ್ತಿಗೆ ಬರುವ ಧಾರ್ಮಿಕ ಕ್ಷೇತ್ರಗ ಳ ಅಭಿವೃದ್ಧಿಗೆ  ತನ್ನ ಸಂಸ್ಥೆಯ ವತಿಯಿಂದ ಹೆಚ್ಚಿನ ಸಹಕಾರ ನೀಡುವುದಾಗಿ ಅದಾನಿ ಫೌಂಡೇಶನ್‌ನ ಜಂಟಿ ಆಧ್ಯಕ್ಷ ಕಿಶೋರ್‌ ಆಳ್ವ ಹೇಳಿದರು.

ಅವರು ಶುಕ್ರವಾರ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಕ್ಷೇತ್ರಕ್ಕೆ ದಾನಿಗಳ ನೆರವಿನಿಂದ ಶಾಂಭವೀ ನದಿ ಮೂಲದಿಂದ ಕಲ್ಪಿಸಲಾದ ಶಾಂಭವೀ ಜಲದುರ್ಗಾ ನೀರಿನ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.

ಮಾಜಿ ಶಾಸಕ ಎಚ್‌.ಗೋಪಾಲ ಭಂಡಾರಿ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನೆರವೇರಿಸಿ, ಸಹಕಾರಿ ಧುರೀಣ ಐಕಳಭಾವ ಡಾ.ದೇವಿಪ್ರಸಾದ್‌ ಶೆಟ್ಟಿ  ಸ್ಥಳದಾನಿಗಳಿಗೆ ಗೌರವಾರ್ಪಣೆ ನಡೆಸಿದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಮಾಜಿ ಆಧ್ಯಕ್ಷ ರಾಘು.ಟಿ.ಶೆಟ್ಟಿ ಯೋಜನೆಗೆ ಪೂರಕ ಸಹಕಾರ ನೀಡಿದವರನ್ನು ಗೌರವಿಸಿದರು.ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಕಾರ್ಕಳ ತಹಶೀಲ್ದಾರ್‌ ಟಿ.ಜಿ.ಗುರುಪ್ರಸಾದ್‌ ದಾನಿಗಳನ್ನು ಗೌರವಿಸಿದರು.ಕಾರ್ಕಳ ಶಾಸಕ ವಿಪಕ್ಷದ ಮುಖ್ಯ ಸಚೇತಕ ವಿ.ಸುನಿಲ್‌ ಕುಮಾರ್‌, ಅರ್ಚಕರಾದ ಅನಂತಕೃಷ್ಣ ಆಚಾರ್ಯ, ಜಿಲ್ಲಾ ಪಂಚಾಯತ್‌ ಸದಸ್ಯೆ ರೇಷ್ಮ ಶೆಟ್ಟಿ, ಮುಂಡ್ಕೂರು ಪಂಚಾಯತ್‌ ಅಧ್ಯಕ್ಷೆ ಶುಭಾ ಪಿ. ಶೆಟ್ಟಿ, ಕಾರ್ಕಳ ತಾಲೂಕು ಪಂಚಾಯತ್‌ ಉಪಾಧ್ಯಕ್ಷ  ಗೋಪಾಲ ಮೂಲ್ಯ, ಮುಂಡ್ಕೂರು ಪಂಚಾಯತ್‌ ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಮುಂಬೈನ ಉದ್ಯಮಿ ಶೇಖರ ಶೆಟ್ಟಿ, ಸಚ್ಚರಪರಾರಿ ಸುಭೋಧ ಶೆಟ್ಟಿ,ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಾದಿರಾಜ ಶೆಟ್ಟಿ,ಸದಸ್ಯರಾದ ರಾಮದಾಸ ಆಚಾರ್ಯ, ಸುರೇಂದ್ರ ಎಸ್‌.ಶೆಟ್ಟಿ, ಸುಜಾತಾ ಎಸ್‌.ಶೆಟ್ಟಿ, ಆಶಾ ಎಂ.ಶೆಟ್ಟಿ, ನಳಿನಾಕ್ಷಿ, ಕೃಷ್ಣ ಪೂಜಾರಿ, ಸಂಜೀವ ಕರ್ಕೇರಾ ಮತ್ತಿತರರು ಉಪಸ್ಥಿತರಿದ್ದರು.

ದೇಗುಲದ ವ್ಯವಸ್ಥಾಪನಾ ಸಮಿತಿಯ ಆಧ್ಯಕ್ಷ ವಾದಿರಾಜ ಶೆಟ್ಟಿ ಸ್ವಾಗತಿಸಿ, ಸದಸ್ಯ ಸುರೇಂದ್ರ ಎಸ್‌. ಶೆಟ್ಟಿ ವಂದಿಸಿದರು.ಸಾಯಿನಾಥ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು.ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಪ್ರಬಂಧಕ ಅರುಣ್‌ ರಾವ್‌ ಕಾರ್ಯಕ್ರಮ ನಿರೂಪಿಸಿದರು.

– ಬೇಸಗೆಯಲ್ಲಿ ಜಲಕ್ಷಾಮ ಎದುರಿಸುತ್ತಿದ್ದ ಮುಂಡ್ಕೂರು ದೇಗುಲಕ್ಕೆ ಮುಜರಾಯಿ ಇಲಾಖೆಯಡಿಯಲ್ಲಿ ಬರುವ ಈ ಮುಂಡ್ಕೂರು ದೇಗುಲದ ವ್ಯವಸ್ಥಾಪನ ಸಮಿತಿಯು ಸರಕಾರ ಆಥವಾ ಇಲಾಖೆಯ ಅನುದಾನಕ್ಕಾಗಿ ಕಾಯದೇ ಕ್ಷೇತ್ರದ ಭಕ್ತಾದಿಗಳ ನೆರವಿನ ಮೂಲಕವೇ ಹಣ ಸಂಗ್ರಹಿಸಿ ಶಾಂಭವಿ ನದಿಯಲ್ಲಿ ಬಾವಿ ತೋಡಿ ದೇಗುಲಕ್ಕೆ ನೀರು ಪೂರೈಸಿದ ಪರಿ ಇತರರಿಗೆ ಮಾದರಿಯೆನಿಸಿದೆ.

– ಈ ಯೋಜನೆಗಾಗಿ ಕ್ಷೇತ್ರದ ಸಮಿತಿಯ ಆಧ್ಯಕ್ಷರಾದ ವಾದಿರಾಜ ಶೆಟ್ಟಿ, ಅರ್ಚಕ ಹಾಗೂ ಸಮಿತಿಯ ಸದಸ್ಯ ರಾಮದಾಸ ಆಚಾರ್ಯ ದಾನಿಗಳನ್ನು ಸಂಪರ್ಕಿಸಿದ್ದು ಹೆಚ್ಚಿನ ಭಕ್ತರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

– ವ್ಯವಸ್ಥಾಪನ ಸಮಿತಿಯ ಮಾರ್ಗದರ್ಶನ,ಮುಂಡ್ಕೂರಿನ ಜನರ ಸಹಕಾರ,ಜನಪ್ರತಿನಿಧಿಗಳ ಹಾಗೂ ಇಲಾಖೆಯ ಸ್ಪಂದನ,ಊರು ಮುಂಬೈ ಹಾಗೂ ಇನ್ನಿತರ ಪರವೂರ ಭಕ್ತರ ಪೂರಕ ಬೆಂಬಲ ದೇಗುಲದ ಎಲ್ಲಾ  ಅಭಿವೃದ್ಧಿಗೆ ಕಾರಣವಾಗಿದ್ದು ಕ್ಷೇತ್ರಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆಯಲ್ಲಿಯೂ ಏರಿಕೆಗೆ ಕಾರಣವೆಂದು ವಾದಿರಾಜ ಶೆಟ್ಟಿ ತಿಳಿಸಿದರು.

– ಯೋಜನೆಗೆ ಹಣದ ರೂಪದಲ್ಲಿ ಸಹಕರಿದ ದಾನಿಗಳನ್ನು,ಸ್ಥಳದಾನಿಗಳನ್ನು  ಗೌರವಿಸಲಾಯಿತಲ್ಲದೆ ,ಸಾಧಕರ ಸಮ್ಮಾನ ಪ್ರತಿಭಾ ಪುರಸ್ಕಾರ ನಡೆಯಿತು.

– ಕ್ಷೇತ್ರದ ಸಮಿತಿಯ ನಿಕಟಪೂರ್ವ ಅಧ್ಯಕ್ಷ ,ಜೀಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ರೂವಾರಿ,ದಾನಿ ಮುಲ್ಲಡ್ಕ ಗುರುಪ್ರಸಾದ್‌ ರಾಘು ಟಿ.ಶೆಟ್ಟಿಯವರನ್ನು ಸಮ್ಮಾನಿಸಲಾಯಿತು.

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ

Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ

4

Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.