ಮುಂಡ್ಕೂರು ಮೋಕ್ಷಧಾಮ ರಸ್ತೆಗೆ ಮೋಕ್ಷ ಎಂದು?
Team Udayavani, Dec 28, 2018, 5:25 PM IST
ಬೆಳ್ಮಣ್: ಮೋಕ್ಷಧಾಮ ಹೆಸರಿನ ಮುಂಡ್ಕೂರಿನ ಸಾರ್ವಜನಿಕ ಹಿಂದು ರುದ್ರಭೂಮಿ ಸಹಿತ ವಿವಿಧ ಸಂಸ್ಥೆಗಳ ಸಂಪರ್ಕ ರಸ್ತೆಯ ಜಲ್ಲಿ ,ಡಾಮರು ಕಿತ್ತು ಹೋಗಿ ವಾಹನ ಸವಾರರ ಸಹಿತ ಪಾದಾಚಾರಿಗಳು ನರಕಯಾತನೆ ಅನುಭವಿಸುವಂತಾಗಿದೆ.
ಪಂಚಾಯತ್‌ನ ಪಕ್ಕದಲ್ಲೇ ಇದೆ
ಮುಂಡ್ಕೂರು ಗ್ರಾಮ ಪಂಚಾಯತ್ ಕಟ್ಟಡದಿಂದ ಅನತಿ ದೂರದಲ್ಲಿರುವ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ರಸ್ತೆಯಲ್ಲಿ ಜಲ್ಲಿ ಹಾಗೂ ಟಾರು ಚೆಲ್ಲಾಪಿಲ್ಲಿಯಾಗಿದೆ. ಮುಂಡ್ಕೂರಿನ ಸಾರ್ವಜನಿಕ ಹಿಂದೂ ರುದ್ರಭೂಮಿ ಹಾಗೂ ಮಸೀದಿಗೆ ಸಾಗುವ ಪ್ರಮುಖ ರಸ್ತೆಯಾದರೂ ರಸ್ತೆ ದುರಸ್ತಿ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ.
ಗ್ರಾಮ ಪಂಚಾಯತ್ ಸಹಿತ ಅಂಚೆ ಕಛೇರಿ, ಕಂದಾಯ ಇಲಾಖೆ, ಗ್ರಂಥಾಲಯ, ಜಿಮ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಲು ಉತ್ಪಾದಕರ ಸಂಘ, ಪಶು ಆಸ್ಪತ್ರೆ, ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಇನ್ನಿತರ ವ್ಯವಸ್ಥೆಗಳಿಗೆ ನಿತ್ಯ ಬಹಳ ಸಂಖ್ಯೆಯಲ್ಲಿ ವಾಹನಗಳು ಹಾದು ಹೋಗುತ್ತವೆ.
ಆಶ್ವಾಸನೆ ಮಾತ್ರ
ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭ ಈ ರಸ್ತೆಯನ್ನು ಡಾಮರೀಕರಣಕ್ಕಾಗಿ ಅಗೆತ ಮಾಡಿದ್ದರು. ಆದರೆ ಬಳಿಕ ಜಲ್ಲಿಕಲ್ಲು ಕೂಡ ಹಾಕಿಲ್ಲ. ಆದ್ದರಿಂದ ಈ ಬಾರಿಯಾದರೂ ರಸ್ತೆಗೆ ಮೋಕ್ಷ ಕಲ್ಪಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬರೀ ಆಶ್ವಾಸನೆ
ರಸ್ತೆಯಲ್ಲಿ ಹಲವಾರು ಬಾರಿ ವಾಹನಗಳು ಸ್ಕಿಡ್ ಆಗಿ ಸವಾರರು ನೆಲಕ್ಕೆ ಉರುಳಿದ್ದಾರೆ. ಜನಪ್ರತಿನಿಧಿಗಳು ಬರೀ ಆಶ್ವಾಸನೆ ನೀಡುತ್ತಿದ್ದಾರೆ.
– ಗುರುಪ್ರಸಾದ್ ಭಟ್,
ಸ್ಥಳಿಯರು
ಪರಿಶೀಲನೆ ನಡೆಸಲಾಗುವುದು
ಈ ರಸ್ತೆ ದುರಸ್ತಿಗೆ ಕೂಡಲೇ ಕ್ರಮಕೈಗೊಳ್ಳಲಾಗುವುದು. ಕಾಮಗಾರಿ ನಿಲುಗಡೆಗೊಂಡ ಬಗ್ಗೆ ಪರಿಶೀಲನೆ ನಡೆಸಲಾಗುವುದು.
– ಶುಭಾ ಪಿ.ಶೆಟ್ಟಿ,
ಮೂಂಡ್ಕೂರು ಗ್ರಾ.ಪಂ. ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Perth test: ಜೈಸ್ವಾಲ್-ರಾಹುಲ್ ಅಜೇಯ ಆಟ; ಪರ್ತ್ ನಲ್ಲಿ ಭಾರತದ ಮೇಲಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.