ರಾ.ಹೆ. ಇಲಾಖೆ, ನಗರಸಭೆ ಎಡವಟ್ಟು : ಜನರಿಗೆ ಇಕ್ಕಟ್ಟು

 ಮತ್ತೆ ನಗರದ ಕೊಳಚೆ ನೀರು ಇಂದ್ರಾಣಿ ಒಡಲಿಗೆ

Team Udayavani, Jan 12, 2021, 3:40 AM IST

tdy-7

ಸಾಂದರ್ಭಿಕ ಚಿತ್ರ

ಉಡುಪಿ: ಕೆಲವು ತಿಂಗಳುಗಳ ಹಿಂದೆ ಇಂದ್ರಾಣಿಗೆ ನಗರದ ಕೊಳಚೆ ನೀರು ಹರಿಸುವ ಸಮಸ್ಯೆ ಭುಗಿಲೆದ್ದಾಗ ಎಲ್ಲವನ್ನೂ ಸರಿಪಡಿಸುತ್ತೇವೆಂದು ಹೇಳಿದ್ದ ನಗರಸಭೆ ಆಡಳಿತ, ಈಗ ಮತ್ತೆ ತನ್ನ ಹಳೇ ಅಭ್ಯಾಸವಾಗಿ ವೆಟ್‌ವೆಲ್‌ನ ನೀರನ್ನು ಇಂದ್ರಾಣಿ ನದಿ ಮೂಲಕ ಕಡಲಿಗೆ ಸೇರಿಸುವುದನ್ನು ಮುಂದುವರಿಸಿದೆ.

ಎರಡು ವರ್ಷದ ಅನಂತರ ನಡೆದ ಮೊದಲ ನಗರಸಭೆ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳು ಇಂದ್ರಾಣಿ ಬಗ್ಗೆ ಧ್ವನಿ ಎತ್ತಿದ್ದರೂ, ಇಲ್ಲಿಯವರೆಗೆ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಸಮಸ್ಯೆಗೆ ಮುಕ್ತಿ ಸಿಗಲಿದೆ ಎನ್ನುವ ಆಸೆಯಲ್ಲಿದ್ದವರಿಗೆ ಮತ್ತೆ ನಿರಾಸೆಯಾಗಿದೆ.

ಉದಯವಾಣಿಯು ಹದಿನೈದು ದಿನಗಳ “ಮರೆತೇ ಹೋದ ಇಂದ್ರಾಣಿ’  ಅಧ್ಯಯನ ಸರಣಿ ಮೂಲಕ ಇಂದ್ರಾಣಿಗೆ ಸೇರುತ್ತಿರುವ ಕೊಳಚೆ ಕುರಿತ ಸಮಸ್ಯೆಯನ್ನು ಸವಿವರವಾಗಿ ವಿವರಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿದ್ದ ನಗರಸಭೆಯು ವೆಟ್‌ವೆಲ್‌ನಲ್ಲಿ ಕೆಲವು ಮೂಲ ಸೌಕರ್ಯ, ದುರಸ್ತಿ ಇತ್ಯಾದಿ ಕೆಲಸವನ್ನುನಡೆಸಲು ಮುಂದಾಗಿತ್ತು. ಜನರೇಟರ್‌ ಗಳ ಖರೀದಿಗೂ ಟೆಂಡರ್‌ ಕರೆಯುವು ದಾಗಿ ತಿಳಿಸಿತ್ತು. ಕೆಲವು ದಿನ ಇಂದ್ರಾಣಿ ನದಿಯಲ್ಲಿ ಕೊಳಚೆ ಹರಿಯುವುದೂ ಕಡಿಮೆಯಾಗಿತ್ತು.

ಶಾರದಾ ವೆಟ್‌ವೆಲ್‌  :

ವಿವಿಧ ಭಾಗಗಳಿಂದ ಹರಿದು ಬರುವ ಕೊಳಚೆ ನೀರು ನೇರವಾಗಿ ಶಾರದಾ ವೆಟ್‌ವೆಲ್‌ಗೆ ಸೇರುತ್ತದೆ. ಇಲ್ಲಿಂದ ಕೊಳಚೆ ನೀರನ್ನು ಪಂಪ್‌ ಮಾಡಿ ನೇರವಾಗಿ ಎಸ್‌ಟಿಪಿಗೆ ಬಿಡಲಾಗುತ್ತದೆ. ಇದೇ ಮಾರ್ಗದಲ್ಲಿ ನಾಲ್ಕೈದು ವರ್ಷಗಳ ಹಿಂದೆ ರಾ.ಹೆ. ಇಲಾಖೆಯು ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ನಿಟ್ಟೂರು ಎಸ್‌ಟಿಪಿಗೆ ಹೋಗುವ ಯುಜಿಡಿ ಪೈಪ್‌ನ ಮೇಲೆಯೇ ಫ್ಲೈಓವರ್‌ ನಿರ್ಮಿಸಿದೆ.

ನಗರಸಭೆ ಏನು ಮಾಡುತ್ತಿತ್ತು? :

ಇದೀಗ ಹೆದ್ದಾರಿ ಕರಾವಳಿ ಫ್ಲೈ ಓವರ್‌ನಡಿ 32 ವರ್ಷಗಳ ಹಿಂದೆ ಹಾಕಲಾದ ಯುಜಿಡಿ ಪೈಪ್‌ಲೈನ್‌ ಒಡೆದು ಹೋಗಿದೆ. ಈ ಹಿಂದೆ ಕಾಮಗಾರಿ ಮಾಡಿದ ರಾ.ಹೆ. ಇಲಾಖೆಯು ಯುಜಿಡಿ ಮಾರ್ಗವನ್ನು ಬದಲಾಯಿಸಬೇಕಿತ್ತು. ಆ ಸಂದರ್ಭ ನಗರಸಭೆಯು ಪಟ್ಟು ಹಿಡಿದು ಕಾಮಗಾರಿಯನ್ನು ಸ್ಥಗಿತ ಗೊಳಿಸಿ ಯುಜಿಡಿ ಮಾರ್ಗವನ್ನು ಬದಲಾಯಿಸಬೇಕಿತ್ತು. ಆದರೆ ಅಂದಿನ ಅಧಿಕಾರಿಗಳು ಮೌನವಾಗಿದ್ದರು. ಏನನ್ನೂ ಹೇಳಲಿಲ್ಲ. ಹಾಗಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ತಮ್ಮ ಕೆಲಸವಾದರೆ ಸಾಕೆಂದು ಫ್ಲೈ ಓವರ್‌ ನಿರ್ಮಿಸಿದ್ದರು. ಈಗ ಕೊಳಚೆ ನೀರು ಇಂದ್ರಾಣಿ ಒಡಲು ಸೇರುವಂತಾಗಿದೆ ಎಂಬುದು ಸ್ಥಳೀಯರ ದೂರು.

ಶಾರದಾದಿಂದ ಇಂದ್ರಾಣಿಗೆ :

ಪ್ರಸ್ತುತ ಫ್ಲೈ ಓವರ್‌ ಅಗೆದು ಯುಜಿಡಿ ಪೈಪ್‌ಲೈನ್‌ ದುರಸ್ತಿ ಮಾಡಲು ಅಸಾಧ್ಯ. ಈ ಹಿನ್ನೆಲೆಯಲ್ಲಿ ಫ್ಲೈ ಓವರ್‌ಅಡಿಯ ಯುಜಿಡಿ ಪೈಪ್‌ಲೈನ್‌ ಸ್ಥಗಿತಗೊಳಿಸಲಾಗಿದೆ. ಇದರಿಂದ ಶಾರದಾ ವೆಟ್‌ವೆಲ್‌ನಿಂದ ಪಂಪ್‌ ಆಗಿ ನಿಟ್ಟೂರು ಎಸ್‌ಟಿಪಿಗೆ ಹೋಗಬೇಕಾದ ಕೊಳಚೆ ನೀರು ಇಂದ್ರಾಣಿಗೆ ಬಿಡಲಾಗುತ್ತಿದೆ. ಈ ಪೈಪ್‌ಲೈನ್‌ ಸ್ಥಗಿತಗೊಳಿಸಿ, ಹೊಸ ಮಾರ್ಗದ ಪೈಪ್‌ಲೈನ್‌ ಅಳವಡಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ಎನ್ನುತ್ತಾರೆ ಅಧಿಕಾರಿಗಳು.

ಕೈಚೆಲ್ಲಿದ ರಾ.ಹೆ. ಇಲಾಖೆ!  :

ಪ್ರಸ್ತುತ ಫ್ಲೈಒವರ್‌ನಡಿ ಯುಜಿಡಿ ದುರಸ್ತಿಗೆ ಸಂಬಂಧಿಸಿದಂತೆ ನಗರಸಭೆ ಅಧಿಕಾರಿಗಳು ರಾ.ಹೆ. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರೂ ಹೆದ್ದಾರಿಯನ್ನು ಅಗೆಯಲು ಸಾಧ್ಯವಿಲ್ಲ ಎನ್ನುವುದಾಗಿ ರಾ.ಹೆ. ಅಧಿಕಾರಿಗಳು ತಿಳಿಸುತ್ತಿದ್ದಾರೆ. ಒಂದು ವೇಳೆ ಹೆದ್ದಾರಿಗೆ ಸಂಬಂಧಿಸಿದ ಯಾವುದೇ ಕಾಮಗಾರಿ ನೀವು ಕೈಗೆತ್ತಿಗೊಂಡರೆ ಕಾನೂನು ತೊಡಕು ಉಂಟಾಗುತ್ತದೆ ಎಂದು ಹೇಳಿ ಕೈ ಚೆಲ್ಲಿದ್ದಾರೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಮೂರು ವರ್ಷದ ಹಿಂದೆ ರಾ.ಹೆ. ಇಲಾಖೆಯು ಫ್ಲೈ ಓವರ್‌ ಪಕ್ಕದಲ್ಲಿ ಡಮ್ಮಿ ಪೈಪ್‌ಲೈನ್‌ ಹಾಕಿದ್ದಾರೆ. ಪ್ರಸ್ತುತ ಅದರೊಳಗೆ ಹೊಸ ಪೈಪ್‌ಲೈನ್‌ ಹಾಕಬೇಕು. ಈಗಾಗಲೇ ಮಂಗಳೂರಿನಿಂದ ಪೈಪ್‌ ತರಿಸಲಾಗುತ್ತಿದೆ. ಪೈಪ್‌ ಬಂದ ತತ್‌ಕ್ಷಣ ತುರ್ತು ಟೆಂಡರ್‌ ಕರೆದು ಸಮರೋಪಾದಿಯಲ್ಲಿ ಕೆಲಸ ನಡೆಸಲಾಗುತ್ತದೆ. ಮೋಹನ್‌ ರಾಜ್‌, ಎಇಇ, ನಗರಸಭೆ ಉಡುಪಿ

ಟಾಪ್ ನ್ಯೂಸ್

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

7(1

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.